Suhana Khan In India: ಭಾರತಕ್ಕೆ ಮರಳಿದ ಶಾರೂಖ್ ಖಾನ್ ಪುತ್ರಿ

First Published | Jan 16, 2022, 10:46 AM IST
  • Suhana Khan Retturns To India: ಭಾರತಕ್ಕೆ ಮರಳಿದ ಬಾಲಿವುಡ್ ನಟನ ಪುತ್ರಿ
  • ಶಾರೂಖ್ ಮಗಳು ಸುಹಾನಾ ಭಾರತದಲ್ಲಿ

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಮುಂಬೈಗೆ ಮರಳಿದ್ದಾರೆ. 21 ವರ್ಷದ ಸೆಲೆಬ್ರಿಟಿ ಕಿಡ್ ಪಾಪರಾಜಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಸುಹಾನ ಅಂಧೇರಿಯಲ್ಲಿ ಕಂಡುಬಂದಿದ್ದಾರೆ. ಸುಹಾನಾ ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿ ಅವರು ಉನ್ನತ ವ್ಯಾಸಂಗ ಮಾಡುತ್ತಿದ್ದು ಕಳೆದ ವರ್ಷದಿಂದ ಮನೆಗೆ ಹಿಂತಿರುಗಿಲ್ಲ.

ಶುಕ್ರವಾರ ಮುಂಬೈನ ಅಂಧೇರಿ ಪ್ರದೇಶದಲ್ಲಿ ಸುಹಾನಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸುಹಾನಾ ಎರಡು ವರ್ಷಗಳಿಂದ ಅಮೇರಿಕಾದಲ್ಲಿದ್ದಾರೆ. ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದ ಟಿಶ್ ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಓದುತ್ತಿದ್ದಾರೆ. ಈ ವರ್ಷ ತನ್ನ ಅಧ್ಯಯನವನ್ನು ಮುಗಿಸಿದ ನಂತರ ಸುಹಾನ ಭಾರತಕ್ಕೆ ಮರಳುವ ನಿರೀಕ್ಷೆಯಿದೆ.

Tap to resize

ನವೆಂಬರ್‌ನಲ್ಲಿ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ನ್ಯೂಯಾರ್ಕ್‌ಗೆ ವಿದಾಯ ಹೇಳುವ ಬಗ್ಗೆ ಸುಳಿವು ನೀಡಿದ್ದರು. ಸುಹಾನಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಲಿಸುವ ಟ್ರಕ್‌ನ ಕಪ್ಪು-ಬಿಳುಪು ಫೋಟೋ ಹಂಚಿಕೊಂಡಿದ್ದರು.

ಚಿಂತಿಸಬೇಡಿ. ನೀವು ನ್ಯೂಯಾರ್ಕ್ ತೊರೆದರೂ, ನೀವು ಯಾವಾಗಲೂ ನ್ಯೂಯಾರ್ಕರ್ ಆಗಿರುತ್ತೀರಿ ಎಂದು ಅದರ ಮೇಲೆ ಬರೆಯಲಾಗಿದೆ. ಸುಹಾನಾ ಯಾವುದೇ ಕ್ಯಾಪ್ಶನ್ ಬರೆಯದಿದ್ದರೂ ಅವರು ಹಾರ್ಟ್ ಬ್ರೇಕ್ ಎಮೋಜಿಯನ್ನು ಸೇರಿಸಿದ್ದರು.

ಕಳೆದ ವರ್ಷ ತನ್ನ ಸಹೋದರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಾಗ ಸುಹಾನಾ ಭಾರತಕ್ಕೆ ಮರಳಲು ಬಯಸಿದ್ದರು ಎಂಬ ಊಹಾಪೋಹಗಳಿದ್ದವು.

ಆರ್ಯನ್ - ಶಾರುಖ್ ಅವರ ಹಿರಿಯ ಮಗನನ್ನು - ಅಕ್ಟೋಬರ್‌ನಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ಕ್ರೂಸ್ ಹಡಗಿನಿಂದ ಬಂಧಿಸಲಾಗಿತ್ತು.

ಜಾಮೀನಿನ ಮೇಲೆ ಬಿಡುಗಡೆಯಾಗುವ ಮೊದಲು 25 ದಿನಗಳ ಜೈಲಿನಲ್ಲಿ ಕಳೆದಿದ್ದಾರೆ ಆರ್ಯನ್. ಆ ಸಮಯದಲ್ಲಿ ಮಾಧ್ಯಮದ ಗಮನದಿಂದ ದೂರವಿರಲು ಶಾರುಖ್ ಅವರ ಆಪ್ತ ವಲಯವು ಸುಹಾನಾಗೆ ಹಿಂತಿರುಗದಂತೆ ಸಲಹೆ ನೀಡಿದೆ ಎನ್ನಲಾಗಿದೆ.

suhana khan

ಭಾರತದಿಂದ ದೂರವಿರುವ ಸಮಯದಲ್ಲಿ, ಸುಹಾನಾ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ. ಅವರು ನಿಯಮಿತವಾಗಿ Instagramನಲ್ಲಿ ಪೋಸ್ಟ್ ಶೇರ್ ಮಾಡುತ್ತಾರೆ. ನ್ಯೂಯಾರ್ಕ್‌ನಲ್ಲಿನ ತನ್ನ ಜೀವನದ ಫೋಟೋಸ್ ಪೋಸ್ಟ್ ಮಾಡುತ್ತಾರೆ.

Latest Videos

click me!