Madhavan About Hrithik Roshan: ಕತ್ರೀನಾ ಜೊತೆ ನಟಿಸೋಕೆ ನಾನು ಹೃತಿಕ್ ತರ ಫಿಟ್ ಆಗಿರ್ಬೇಕು ಎಂದ ಮಾಧವನ್

Published : Jan 15, 2022, 04:25 PM ISTUpdated : Jan 15, 2022, 04:36 PM IST

ಹೃತಿಕ್ ರೋಷನ್ ಬಗ್ಗೆ ಮಾಧವನ್ ಮೆಚ್ಚುಗೆಯ ಮಾತುಗಳು ಬಾಲಿವುಡ್ ನಟನ ಹಾಗೆ ಸಿನಿಮಾ ಮಾಡಬೇಕೆಂದ ಸೌತ್ ಸ್ಟಾರ್

PREV
19
Madhavan About Hrithik Roshan: ಕತ್ರೀನಾ ಜೊತೆ ನಟಿಸೋಕೆ ನಾನು ಹೃತಿಕ್ ತರ ಫಿಟ್ ಆಗಿರ್ಬೇಕು ಎಂದ ಮಾಧವನ್

ಪ್ರತಿಯೊಬ್ಬ ನಟನಿಗೆ ಉದ್ಯಮದಲ್ಲಿನ ಇತರ ಕೆಲವು ಸಹೋದ್ಯೋಗಿ ನಟ, ನಟಿಯರ ಬಗ್ಗೆ ಆರಾಧನೆ ಇರುತ್ತದೆ. ಸಹ ಕಲಾವಿದರ ನಟನೆ, ಪ್ರತಿಭೆಯನ್ನು ಮುಕ್ತವಾಗಿ ಮೆಚ್ಚುವ ಮತ್ತು ಹೊಗಳುವ ಕಲಾವಿದರು ಇಂಡಸ್ಟ್ರಿಯಲ್ಲಿದ್ದಾರೆ. ಆರ್ ಮಾಧವನ್ ಸಾಮಾನ್ಯವಾಗಿ ಹೃತಿಕ್ ರೋಷನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

29

ಇತ್ತೀಚೆಗಷ್ಟೇ ಡಿಕೌಪ್ಲ್ಡ್‌ನಲ್ಲಿನ ತನ್ನ ನಟನೆಯಿಂದ ಎಲ್ಲರನ್ನೂ ಮೆಚ್ಚಿಸಿರುವ ಪ್ರತಿಭಾವಂತ ನಟ ಇತ್ತೀಚಿನ ಚಾಟ್‌ನಲ್ಲಿ ಭವಿಷ್ಯದಲ್ಲಿ ತಾನು ಯಾವ ರೀತಿಯ ಸಿನಿಮಾಗಳನ್ನು ಮಾಡಲು ಬಯಸುತ್ತೇನೆ ಎಂಬುದರ ಕುರಿತು ಮಾತನಾಡಿದ್ದಾರೆ. ಚಾಟ್ ಮಾಡುವಾಗ, ಆರ್ ಮಾಧವನ್ ಅವರು ತಮ್ಮ ವೃತ್ತಿಜೀವನದಲ್ಲಿ ಹೃತಿಕ್ ರೋಷನ್ ಮಾಡುವ ರೀತಿಯ ಸಿನಿಮಾಗಳನ್ನು ಮಾಡಲು ಬಯಸುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಅದಕ್ಕೆ ಅವರ ಕಾರಣಗಳನ್ನು ಸಹ ಹೇಳಿದ್ದಾರೆ.

39

ಹಿಂದೂಸ್ತಾನ್ ಟೈಮ್ಸ್‌ನೊಂದಿಗಿನ ಚಾಟ್‌ನಲ್ಲಿ ಮಾಧವನ್ ಹೃತಿಕ್ ರೋಷನ್ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ ಮಾಧವನ್. ಇಬ್ಬರೂ ಒಂದೇ ಸಮಯದಲ್ಲಿ ಕೆರಿಯರ್ ಪ್ರಾರಂಭಿಸಿದರು ಎಂದು ಬಹಿರಂಗಪಡಿಸಿದ್ದಾರೆ.

49

ಈಗಲೂ 'ಗ್ರೀಕ್ ಗಾಡ್'ನಂತಿರುವ ಹೃತಿಕ್ ರೋಷನ್ ಅವರ ಲುಕ್ ಹೊಗಳುತ್ತಾ ಹೋದ ಮಾಧವನ್, ವಾರ್ ಸ್ಟಾರ್ 'ಅದ್ಭುತ ಆಕ್ಷನ್' ಮಾಡುತ್ತಾರೆ. ಅವರಂತೆ ತಾವೂ ಫಿಟ್ ಆಗಲು ಬಯಸುತ್ತಾರೆ ಎಂದು ಹೇಳಿದ್ದಾರೆ.

59

ನಾವಿಬ್ಬರೂ ಒಂದೇ ಸಮಯದಲ್ಲಿ ಕೆರಿಯರ್ ಪ್ರಾರಂಭಿಸಿದ್ದೇವೆ. ಅವರು ಈಗಲೂ ಗ್ರೀಕ್ ದೇವರಂತೆ ಕಾಣುತ್ತಾರೆ. ಅದ್ಭುತವಾದ ಆಕ್ಷನ್ ಮಾಡುತ್ತಾರೆ. ಆದರೆ ಅದನ್ನು ನಾನು ಸುಮ್ಮನೆ ಬಯಸಿದರೆ ಸಾಲದು. ನಾನು ಅವರಂತೆ ಫಿಟ್ ಆಗಿರಬೇಕು, ಸ್ಟಾರ್ ಆಗಲು ಸಾಧ್ಯವಾಗುತ್ತದೆ. ಆಗ ಕತ್ರಿನಾ ಕೈಫ್ ಎದುರು ನಟಿಸಬಹುದು ಎಂದಿದ್ದಾರೆ.

69

ಹೃತಿಕ್ ಅವರನ್ನು ಮೆಚ್ಚುವ ಆರ್ ಮಾಧವನ್ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಟಿಸಲು ಇಷ್ಟಪಡುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ತನಗೆ ಪ್ರಾಜೆಕ್ಟ್‌ನ ಕಥೆ ಮತ್ತು ಪಾತ್ರವೇ ಎದ್ದು ಕಾಣುತ್ತದೆ ಎಂದು ಹೇಳಿದ್ದಾರೆ. ನಾನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ.

79

ಅವರು ಹಿಂದಿ ಮತ್ತು ತಮಿಳು ಭಾಷೆಗಳೆರಡರ ನಡುವಿನ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡಲು ಕಲಾವಿದರಾಗಿ ಹೇಗೆ 'ಸ್ವಾತಂತ್ರ್ಯ' ಹೊಂದಿದ್ದಾರೆ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ. ತಾವು ಬಯಸುವ ಕಥೆಗಳು ಸಿಗದೇ ಇರಬಹುದು ಎಂದು ಅವರು ಹೇಳಿದ್ದಾರೆ.

89

ಹೃತಿಕ್ ಅವರ ಜನ್ಮದಿನದಂದು, ನಟ ವಿಕ್ರಮ್ ವೇಧಾದ ಹಿಂದಿ ರಿಮೇಕ್, OG ವಿಕ್ರಮ್‌ನಿಂದ ವೇಧಾ ಅವರ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದಾಗ, ಆರ್ ಮಾಧವನ್ ಅವರನ್ನು ಶ್ಲಾಘಿಸಿದ್ದಾರೆ. ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

99

ಮಾಧವನ್ ಅವರದೇ ಆದ ತಮಿಳು ಹಿಟ್‌ನ ಹಿಂದಿ ರಿಮೇಕ್‌ ಸಿನಿಮಾದ ಹೃತಿಕ್ ಅವರ ಫಸ್ಟ್ ಲುಕ್ ಟ್ವೀಟ್ ಮಾಡಿದ್ದಾರೆ. ಈಗ ನಾನು ನೋಡಬಯಸುವ 'ವೇಧಾ'.... ವಾವ್ ಬ್ರೋ... ಇದು EPIC ಎಂದು ಬರೆದಿದ್ದಾರೆ.

Read more Photos on
click me!

Recommended Stories