ಶಾರುಖ್ ಖಾನ್ - ರಜನಿಕಾಂತ್: ಬಡತನದಿಂದ ಖ್ಯಾತಿಗೆ ಏರಿದ ಟಾಪ್‌ ನಟರು!

First Published | Nov 22, 2020, 5:45 PM IST

ಸಿನಿಮಾ ಪ್ರಪಂಚವು ಗ್ಲಾಮರ್ ಹಾಗೂ ಶ್ರಿಮಂತಿಕೆಯಿಂದ ತುಂಬಿದೆ.  ಆದರೆ ಇಲ್ಲಿನ ಕೆಲವು ಸೆಲೆಬ್ರೆಟಿಗಳು ತುಂಬಾ ಬಡತನದ ಹಿನ್ನೆಲೆಯಿಂದ ಬಂದಿದ್ದಾರೆ. ನಂತರ ತಮ್ಮ ಕಠಿಣ ಪರಿಶ್ರಮ ಮತ್ತು ಡೇಡಿಕೇಷನ್‌ನಿಂದಾಗಿ ಯಶಸ್ಸು ಹಾಗೂ ಹಣ ಸಂಪಾದಿಸಿದ್ದಾರೆ.  

ಚಿತ್ರರಂಗದ ಕೆಲವು ನಟರನ್ನು ತಾವು ಈಗ ಇರುವ ಸ್ಥಾನ ತಲುಪಲು ಬಹಳ ಶ್ರಮಿಸಿದ್ದಾರೆ. ಶಾರುಖ್ ಖಾನ್‌ನಿಂದ ರಜನಿಕಾಂತ್ವರೆಗೆ ಹಲವರು ಬಡತನದಿಂದ ಖ್ಯಾತಿಗೆ ಏರಿದ ಸೆಲೆಬ್ರೆಟಿಗಳ ಪಟ್ಟಿಯಲ್ಲಿದ್ದಾರೆ.
ಅಕ್ಷಯ್ ಕುಮಾರ್:ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮೊದಲು ವೇಯ್ಟರ್‌ ಹಾಗೂ ಶೆಫ್‌ ಆಗಿ ಸಹ ಕೆಲಸ ಮಾಡಿದ್ದರು.
Tap to resize

ಅಮಿತಾಬ್ ಬಚ್ಚನ್:ಬರಹಗಾರರ ಕುಟುಂಬಕ್ಕೆ ಸೇರಿದವರು ಬಿಗ್ ಬಿ. ಆಗಿನ ಕಾಲದಲ್ಲಿ ಅವರ ಫ್ಯಾಮಿಲಿಗೆ ಹೆಚ್ಚಿನ ಆದಾಯವಿರಲಿಲ್ಲ. . ನಟನೆಗಾಗಿ ಅಲಹಾಬಾದ್‌ನಿಂದ ಮುಂಬೈಗೆ ಬಂದ ಅಮಿತಾಬ್ ಬಳಿ ಹಣವಿರದ ಕಾರನ ಮರೀನ್ ಡ್ರೈವ್‌ನಲ್ಲಿ ರಾತ್ರಿ ಕಳೆಯುತ್ತಿದ್ದರು.
ಬೊಮನ್ ಇರಾನಿ:ಸಿನಿಮಾಕ್ಕೆ ಎಂಟ್ರಿ ಕೊಡುವ ಮೊದಲು ವೇಯ್ಟರ್‌ ಹಾಗೂ ರೂಮ್ ಸರ್ವಿಸ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು ಬೊಮನ್ ಇರಾನಿ. ಅವರು ಈ ಸ್ಥಾನ ತಲುಪಲು ಸಾಕಷ್ಟು ಕಷ್ಟಪಟ್ಟಿದ್ದಾರೆ.
ಸ್ಮೃತಿ ಇರಾನಿ: ಸ್ಮೃತಿ ಇರಾನಿ ಮೊದಲು ಮೆಕ್ ಡೊನಾಲ್ಡ್ಸ್‌ನಲ್ಲಿ ನೆಲವನ್ನು ಕ್ಲೀನ್‌ ಮಾಡುತ್ತಿದ್ದರು. ಅವರು ಈ ಮಟ್ಟಕ್ಕೆ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ.ಹಲವು ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು.
ರಜನಿಕಾಂತ್:ರಜನಿಕಾಂತ್ ಸೂಪರ್‌ಸ್ಟಾರ್‌ರ್ ಆಗುವ ಮೊದಲು ಕೂಲಿ ಮತ್ತು ಬಸ್ ಕಂಡಕ್ಟರ್ ಆಗಿದ್ದರು
ಶಾರುಖ್ ಖಾನ್:ಬಾಲಿವುಡ್‌ನ ಕಿಂಗ್ ಖಾನ್ ಶಾರುಖ್ ಖಾನ್‌ಗೆ ತಮ್ಮ 12 ತರಗತಿಯ ಫೀಸ್‌ ಸಹ ಕಟ್ಟುವ ಸಾಮರ್ಥ್ಯ ಇರಲಿಲ್ಲ. ಉನ್ನತ ಶಿಕ್ಷಣಕ್ಕಾಗಿ ಸರ್ಕಾರಿ ಕಾಲೇಜಿಗೆ ಸೇರಿದ್ದರು.
ನವಾಜುದ್ದೀನ್ ಸಿದ್ದಿಕಿ:ಕೃಷಿಕರಾಗಿದ್ದ ನವಾಜುದ್ದೀನ್ ನಟನೆಗೆ ಬರುವ ಮೊದಲು ವಾಚ್‌ಮ್ಯಾನ್‌ ಕೆಲಸ ಮಾಡಿದ್ದರು. ಸಿನಿಮಾಕ್ಕೆ ಸೇರಿದ ನಂತರ ಜೀವನದಲ್ಲಿ ಸಾಕಷ್ಟು ಕಷ್ಟ ಕಂಡ ಇವರ ಕುಟುಂಬಕ್ಕೆ ನೆಮ್ಮದಿ ತಂದರು.

Latest Videos

click me!