ಸೆಕ್ಸ್ ಅಥವಾ ಮೇಕಪ್? ದಿಶಾ ಪಟಾನಿಗೇನಿಷ್ಟ?

First Published | Sep 2, 2021, 4:44 PM IST

ದಿಶಾ ಪಟಾನಿ ಬಾಲಿವುಡ್‌ನ ಬೋಲ್ಡ್‌ ನಟಿಯರಲ್ಲಿ ಒಬ್ಬರು. ದಿಶಾ ಪಟಾನಿಯವರ ಹಳೆಯ ಸಂದರ್ಶನವೊಂದು ಈಗ ಮತ್ತೆ ವೈರಲ್‌ ಆಗುತ್ತಿದೆ. ಅದರಲ್ಲಿ 'ನೀವು ಒಂದು ವರ್ಷ ಮೇಕಪ್‌ ಅಥವಾ ಒಂದು ತಿಂಗಳ ಸೆಕ್ಸ್‌ ಯಾವುದನ್ನು ಬಿಡುತ್ತೀರಾ? ಎಂದು ಕೇಳಲಾಯಿತು. ಅದಕ್ಕೆ ನಟಿ ಕೊಟ್ಟ ಉತ್ತರವೇನು? ಪೂರ್ತಿ ಓದಿ.
 

ದಿಶಾ ಪಟಾನಿ ಭಾರತದ ಮೋಸ್ಟ್ ಗೂಗಲ್ ಸರ್ಚ್‌ಡ್‌ ನಟಿಯರಲ್ಲಿ ಒಬ್ಬರು. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯಳಾಗಿದ್ದಾರೆ.  ದಿಶಾ ಪಟಾನಿ ಇನ್ಸ್ಟಾಗ್ರಾಮ್‌ನಲ್ಲಿ  45.8 ಸಾವಿರಕ್ಕೂ ಹೆಚ್ಚು ಪ್ಲಸ್ ಫ್ಯಾನ್ಸ್‌ ಮತ್ತು ಫಾಲೋವರ್ಸ್‌ ಹೊಂದಿದ್ದಾರೆ. 

ದಿಶಾ ತಮ್ಮ ಇನ್‌ಸ್ಟಾ ಪುಟದಲ್ಲಿ ಹಾಟ್ ಬಿಕಿನಿ ಫೋಟೋಗಳು ಮತ್ತು ಅವರ ಫಿಟ್‌ನೆಸ್ ವೀಡಿಯೊಗಳೊಂದಿಗೆ ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ. ದಿಶಾ ಅವರು ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು  2016 ರ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಸಿನಿಮಾದ ಮೂಲಕ. ಈ ಸಿನಿಮಾದಲ್ಲಿ  ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ದಿಶಾ ಕಾಣಿಸಿಕೊಂಡಿದ್ದರು. 

Tap to resize

ಅದರ ನಂತರ ಹಲವು ಹಿಟ್‌ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ದಿಶಾ ತಮ್ಮ ಲುಕ್‌, ಬೋಲ್ಡ್‌ನೆಸ್‌ ಹಾಗೂ ಅಭಿನಯದಿಂದ ಬಾಲಿವುಡ್‌ನಲ್ಲಿ ಛಾಫು ಮೂಡಿಸಿದ್ದಾರೆ. ಆಕೆಯ ಕೊನೆಯ ಬಾರಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಜೊತೆ ರಾಧೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

ನಟಿಯಾಗಿ ಫೇಮಸ್‌ ಆಗುವ ಮೊದಲು ಇವರನ್ನು ಮಿಸ್ ಮಾಲಿನಿ ತಂಡದೊಂದಿಗೆ ಚಾಟ್ ಮಾಡಲು ಆಹ್ವಾನಿಸಲಾಗಿತ್ತು. ಅಲ್ಲಿ ಅವರು ಅವರ ಕೆಲವು ಪ್ರಶ್ನೆಗಳಿಗೆ ಚುರುಕಾದ ಉತ್ತರಗಳನ್ನು ನೀಡಿದರು. ಆ ಇಂಡರ್‌ವ್ಯೂವ್‌ ಈಗ ಮತ್ತೆ ವೈರಲ್‌ ಆಗಿದೆ.
 

ಸಂದರ್ಶನದಲ್ಲಿ, ಒಂದು ವರ್ಷ ಮೇಕಪ್‌ ಅಥವಾ ಒಂದು ತಿಂಗಳ ಸೆಕ್ಸ್‌ ಯಾವುದನ್ನು ಬಿಡುತ್ತೀರಾ? ಎಂದು ಕೇಳಲಾಯಿತು. ಅದಕ್ಕೆ ದಿಶಾ, 'ನಾನು ತುಂಬಾ ಮೇಕಪ್ ಧರಿಸುವುದಿಲ್ಲ, ಹಾಗಾಗಿ ನಾನು ಮೇಕಪ್ ತ್ಯಜಿಸುತ್ತೇನೆ ಎಂದು ಉತ್ತರಿಸಿದರು.  

'ನಿಮ್ಮ ಜೀವನದುದ್ದಕ್ಕೂ ನೀವು ಒದ್ದೆಯಾದ ಒಳ ಉಡುಪುಗಳನ್ನು ಧರಿಸಲು ಒತ್ತಾಯಿಸುವುದು ಅಥವಾ ವರ್ಷಕ್ಕೊಮ್ಮೆ ಸ್ನಾನ ಮಾಡಲು ಅನುಮತಿ ನೀಡಿದರೆ ನಿಮ್ಮ ಆಯ್ಕೆ ಯಾವುದು? ಎಂದು ಕೇಳಿದಾಗ ಅದಕ್ಕೆ ದಿಶಾ, 'ಒದ್ದೆಯಾಗಿರಲು ಕಷ್ಟ. ಆದ್ದರಿಂದ ವರ್ಷಕ್ಕೊಮ್ಮೆ ಸ್ನಾನ ಮಾಡುತ್ತೇನೆ' ಎಂದರು. 'ನನ್ನ ಜೀವನದುದ್ದಕ್ಕೂ ನಾನು ಒದ್ದೆಯಾದ ಒಳ ಉಡುಪುಗಳನ್ನು ಧರಿಸಲು ಸಾಧ್ಯವಿಲ್ಲ,' ಎಂದು ಹೇಳಿದರು.

ದಿಶಾ ಪಟಾನಿ ಮುಂದೆ ಮೋಹಿತ್ ಸೂರಿಯವರ ಏಕ್ ವಿಲನ್ 2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಯಲ್ಲಿ ದಿಶಾರ ಜೋಳಿಗೆಯಲ್ಲಿ ಅಶೀಮಾ ಚಿಬ್ಬರ್ ಅವರ ಕೆಟಿನಾ ಸಿನಿಮಾ ಕೂಡ ಇದೆ. 

Latest Videos

click me!