ಒಮ್ಮೇನಾದ್ರೂ ಕಾರಲ್ಲಿ ಸೆಕ್ಸ್‌ ಮಾಡಿದ್ರಾ ಎಂದಾಗ ಜಾಕಿ ರಿಯಾಕ್ಷನ್ ಇದು

First Published | Sep 2, 2021, 10:51 AM IST
  • 'ಒಮ್ಮೇನಾದ್ರೂ ಕಾರ್‌ನಲ್ಲಿ ಸೆಕ್ಸ್ ಮಾಡಿದ್ದೀರಾ' ?
  • ಇಂಥದ್ದೊಂದು ಪ್ರಶ್ನೆಗೆ ವಿಕ್ರಾಂತ್ ರೋಣ ಸುಂದರಿಯ ಪ್ರತಿಕ್ರಿಯೆ ಹೀಗಿತ್ತು ನೋಡಿ

ಜಾಕ್ವೆಲಿನ್ ಫರ್ನಾಂಡೀಸ್ ಸದ್ಯ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನಲ್ಲಿ ಮಿಂಚುತ್ತಿರುವ ಶ್ರೀಲಂಕಾ ಸುಂದರಿ ಸುಕೇಶ್ ಚಂದ್ರಶೇಖರ್ ನೇತೃತ್ವದ 200 ಕೋಟಿ ರೂಪಾಯಿಗಳ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಜಾರಿ ನಿರ್ದೇಶನಾಲಯವು ನಟಿಯನ್ನು ಐದು ಗಂಟೆಗಳ ಕಾಲ ವಿಚಾರಣೆ ಮಾಡಿದೆ.

ಜಾಕ್ವೆಲಿನ್ ಫೆರ್ನಾಂಡಿಸ್ ಅವರ ಹಳೆಯ ವಿಡಿಯೋ ತುಣುಕೊಂದು ವೈರಲ್ ಆಗಿದೆ. ಅದರಲ್ಲಿ ನಟಿ ಕಾರಿನಲ್ಲಿ ಸಂಭೋಗ ನಡೆಸಿರುವ ಬಗ್ಗೆ ಉತ್ತರಿಸಿದ್ದಾರೆ. ಜಾಕ್ವೆಲಿನ್ ಫರ್ನಾಂಡೀಸ್ ಮತ್ತು ಅಮಂಡಾ ಸೆರ್ನಿ ಅವರು 'ಫೀಲ್ ಗುಡ್' ಪಾಡ್‌ಕಾಸ್ಟ್ ಅನ್ನು ಆಯೋಜಿಸಿದ್ದಾರೆ.

Tap to resize

ಅಲ್ಲಿ ಅವರು ವಿಭಿನ್ನ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಸಖತ್ ಇಂಟ್ರೆಸ್ಟಿಂಗ್ & ಫನ್ನಿ ವಿಚಾರಗಳನ್ನು ಶೇರ್ ಮಾಡಿದ್ದಾರೆ. ಅಮಂಡಾ ಸೆರ್ನಿ ಕೂಡ ಭಾರತದಲ್ಲಿ ಬಹಳ ಜನಪ್ರಿಯವಾಗಿದೆ.

ಜಾಕ್ವೆಲಿನ್ ಮತ್ತು ಅಮಂಡಾ ಭೇಟಿಯಾದಾಗ ಅವರ ಚಂದದ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದವು. ಫೀಲ್ ಗುಡ್ ಪಾಡ್‌ಕ್ಯಾಸ್ಟ್ ಎಪಿಸೋಡ್‌ಗಳಲ್ಲಿ ಮತ್ತೊಬ್ಬ ಅತಿಥಿ ಡೇನ್ ಕುಕ್ ಸೇರಿಕೊಂಡಿದ್ದರು

ಅಮಂಡಾ ಅವರು ಜಾಕ್ವೆಲಿನ್ ಮತ್ತು ಡೇನ್ ಅವರನ್ನು ಕಾರಿನಲ್ಲಿ ಸೆಕ್ಸ್ ಮಾಡಿದ್ದಾರೆಯೇ ಎಂದು ಕೇಳಿದ್ದಾರೆ. ಅವರು ಕೈ ತೋರಿಸಿ ಉತ್ತರಿಸಬೇಕಾಗಿರುತ್ತದೆ. ಡೇನ್ ಮತ್ತು ಅಮಂಡಾ ತಮ್ಮ ವೇಗವಾಗಿ ಕೈಗಳನ್ನು ಮೇಲಕ್ಕೆತ್ತಿದ್ದಾರೆ.

ಆದರೆ ಜಾಕ್ವೆಲಿನ್ ಸ್ವಲ್ಪ ಹಿಂಜರಿದಿದ್ದಾರೆ. ಅಮಂಡಾ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿ, ಜಾಕ್ವೆಲಿನ್ ಅವರಿಗೆ ಕೈಯನ್ನು ಎತ್ತುವಂತೆ ಕೇಳಿದ್ದಾರೆ.

ನಂತರ ಜಾಕ್ವೆಲಿನ್ ತನ್ನ ಕೈಯನ್ನು ಮೇಲಕ್ಕೆತ್ತಿ ಕಾರಿನಲ್ಲಿ ಸೆಕ್ಸ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ನಟಿ ಭೂತ್ ಪೊಲೀಸ್, ರಾಮ್ ಸೇತು, ಬಚ್ಚಾ ಪಾಂಡೆ ಮತ್ತು ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಅವರ ಮುಂಬೈ ಮನೆಯನ್ನು ಲೀಸ್‌ಗೆ ಪಡೆದಿರುವ ಜಾಕಿ ಈಗ ಸದ್ಯ ಅದೇ ಬಂಗಲೆಯಲ್ಲಿ ವಾಸವಿದ್ದಾರೆ. ದೊಡ್ಡ ಬಾಲ್ಕನಿ ಇರುವ ಬೃಹತ್ ಬಂಗಲೆ ಅದು.

Latest Videos

click me!