ಇನ್ನು ವೃದ್ಧಾಶ್ರಮಕ್ಕೆ ಕಳಿಸ್ಬಿಡಿ: ಪ್ರಭಾಸ್ ಮತ್ತೊಮ್ಮೆ ಟ್ರೋಲ್

  • ಇತ್ತೀಚಿನ ಲುಕ್‌ಗಳಿಗಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ಪ್ರಭಾಸ್
  • ಮೇಕಪ್ ಇಲ್ಲದ ಲುಕ್‌ಗೆ ಭಾರೀ ಟ್ರೋಲ್ ಮಾಡಿದ ನೆಟ್ಟಿಗರು

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಇತ್ತೀಚೆಗಷ್ಟೇ ಒಮ್ಮೆ ತಮ್ಮ ವಿಥೌಟ್ ಮೇಕಪ್ ಲುಕ್‌ನಿಂದಾಗಿ ಟ್ರೋಲ್ ಆಗಿದ್ದರು. ಈಗ ಮತ್ತೊಮ್ಮೆ ನಟನ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ.

ಓಂ ರಾವತ್ ಅವರ ಆದಿಪುರುಷ ಸಿನಿಮಾದಲ್ಲಿ ಖ್ಯಾತ ದಕ್ಷಿಣ ನಟ ಪ್ರಭಾಸ್ ಶೀಘ್ರದಲ್ಲೇ ಭಗವಂತ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಆಕರ್ಷಕ ಲುಕ್‌ನ ನಟ ಪ್ರಸ್ತುತ ಅದಕ್ಕಾಗಿ ಶೂಟಿಂಗ್ ಕೂಡಾ ಮಾಡುತ್ತಿದ್ದಾರೆ. ವಿಶ್ವದಾದ್ಯಂತದ ಅನೇಕ ಅಭಿಮಾನಿಗಳಿಗೆ ಈ ನಟ ಹಾಟ್ ಫೇವರೇಟ್.


ಆದರೆ ಅವರ ನೋಟದಿಂದಾಗಿ ಅವರನ್ನು ಅಪಹಾಸ್ಯ ಮಾಡುವವರೂ ಇದ್ದಾರೆ. ರಾತ್ರಿ ಆದಿಪುರುಷ ಸೆಟ್‌ನ ಹೊರಗೆ ಪ್ರಭಾಸ್ ಫೋಟೋ ತೆಗೆಯಲಾಗಿದೆ. ನಟ ತನ್ನ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತು, ಕಪ್ಪು ಟೀ ಶರ್ಟ್, ಗಾಗಲ್ಸ್ ಮತ್ತು ಕಪ್ಪು ಟೋಪಿ ಧರಿಸಿದ್ದ ಫೊಟೋ ತೆಗೆಯಲಾಗಿದೆ.

ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಇತ್ತೀಚೆಗಷ್ಟೇ ಒಮ್ಮೆ ತಮ್ಮ ವಿಥೌಟ್ ಮೇಕಪ್ ಲುಕ್‌ನಿಂದಾಗಿ ಟ್ರೋಲ್ ಆಗಿದ್ದರು. ಈಗ ಮತ್ತೊಮ್ಮೆ ನಟನ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ.

ಪ್ರಭಾಸ್ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬೇಗನೆ ವೈರಲ್ ಆಗುತ್ತವೆ. ನೆಟ್ಟಿಗರು ನಟ ಲುಕ್‌ಗಾಗಿ ಅವರನ್ನು ಕೆಟ್ಟದಾಗಿ ಗೇಲಿ ಮಾಡಿದ್ದಾರೆ. ನಟನನ್ನು ಫೊಟೋಗಳಲ್ಲಿ ಗುರುತಿಸಲಾಗದ ಹಾಗೆ ಕಾಣಿಸಿತ್ತು.

ಟ್ಯಾಲೆಂಟೆಡ್ ನಟನನ್ನು ಕ್ರೂರವಾಗಿ ಅಪಹಾಸ್ಯ ಮಾಡಲಾಗಿದೆ. ನೆಟ್ಟಿಗರ ಪ್ರಕಾರ ಅವರ ತೂಕ ಹೆಚ್ಚಾಗಿದೆ ಹಾಗಾಗಿ ಆದಿಪುರುಷದಲ್ಲಿ ರಾಮನಂತೆ ಚೆನ್ನಾಗಿ ಕಾಣುವುದಿಲ್ಲ ಎಂದಿದ್ದಾರೆ.

ಆದಿಪುರುಷವು ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಿನಿಮಾ ಆಗಿದೆ. ಆದಿಪುರುಷನಾಗಿ ಪ್ರಭಾಸ್, ಸೀತೆಯ ಪಾತ್ರದಲ್ಲಿ ಕೃತಿ ಸನೋನ್, ಲಂಕೇಶ್ ಪಾತ್ರದಲ್ಲಿ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನು ಸಿಂಗ್ ನಟಿಸಲಿದ್ದಾರೆ. ಭೂಷಣ್ ಕುಮಾರ್, ಕೃಷ್ಣ ಕುಮಾರ್, ಓಂ ರಾವುತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ಚಿತ್ರವನ್ನು ನಿರ್ಮಿಸಲಿದ್ದಾರೆ. ಆಗಸ್ಟ್ 11, 2022 ರಂದು ಈ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ.

Latest Videos

click me!