ಜೋಧ್‌ಪುರದಲ್ಲಿ ಭಾವೀ ಪತಿಯ ಬರ್ತ್‌ಡೇ ಆಚರಿಸಿದ ಆಲಿಯಾ

Published : Sep 29, 2021, 09:27 AM ISTUpdated : Sep 29, 2021, 11:45 AM IST

ಜೋಧ್‌ಪುರದಲ್ಲಿ ಭಾವೀ ಪತಿಯ ಬರ್ತ್‌ಡೇ ರಣಬೀರ್ ಜೊತೆ ಏಕಾಂತದ ಸಮಯ ಕಳೆದ ಆಲಿಯಾ ಭಟ್

PREV
17
ಜೋಧ್‌ಪುರದಲ್ಲಿ ಭಾವೀ ಪತಿಯ ಬರ್ತ್‌ಡೇ ಆಚರಿಸಿದ ಆಲಿಯಾ

ಭಾವೀ ಪತಿ ರಣಬೀರ್ ಕಪೂರ್ ಗೆ ಆಲಿಯಾ ಭಟ್ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಂಗಳವಾರ ಸಂಜೆ ಆಲಿಯಾ ಭಟ್ ರಣಬೀರ್ ಕಪೂರ್ ಅವರ 39 ನೇ ಹುಟ್ಟುಹಬ್ಬದಂದು ಹೃದಯಸ್ಪರ್ಶಿ ಪೋಸ್ಟ್ ಜೊತೆ ಗೆಳೆಯನಿಗೆ ಹಾರೈಸಿದ್ದಾರೆ.

27

ಒಟ್ಟಿಗೆ ವೆಕೇಷನ್ ಫೋಟೋ ಹಂಚಿಕೊಂಡ ಆಲಿಯಾ ಭಟ್ ಹ್ಯಾಪಿ ಬರ್ತ್‌ಡೇ ಮೈ ಲೈಫ್ ಎಂದು ಬರೆದಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ರಾಜಸ್ಥಾನದಲ್ಲಿ ರಜೆಯಲ್ಲಿದ್ದಾರೆ.

37

ದಂಪತಿಗಳು ವಾರಾಂತ್ಯದಲ್ಲಿ ಜೋಧ್‌ಪುರಕ್ಕೆ ಭೇಟಿ ನೀಡಿದ್ದಾರೆ. ಆಲಿಯಾ ಭಟ್ ಹಂಚಿಕೊಂಡಿರುವ ಫೋಟೋದಲ್ಲಿ, ಅವರು ಸುಂದರವಾದ ಸೂರ್ಯಾಸ್ತಮಾನದ ಅದ್ಭುತ ನೋಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದು.

47

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೊತೆ ಕುಳಿತು ಪಿಕ್ನಿಕ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕುಶನ್ ಮತ್ತು ಪಿಕ್ನಿಕ್ ಚಾಪೆಯಲ್ಲಿ ಕುಳಿತ ಜೋಡಿ ಮೈಮರೆತು ಕೂತಿರುವುದು ಕಾಣಬಹುದು.

57

ಸೋಮವಾರ ಜೋಧ್‌ಪುರ ವಿಮಾನ ನಿಲ್ದಾಣದಿಂದ ನಿರ್ಗಮಿಸಿದ ಬಾಲಿವುಡ್ ಜೋಡಿ ಹಕ್ಕಿಯ ಫೋಟೋಗಳನ್ನು ಫ್ಯಾನ್ಸ್ ಶೇರ್ ಮಾಡಿದ್ದರು. ಇವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

67

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಧ್‌ಪುರಕ್ಕೆ ಹುಟ್ಟುಹಬ್ಬದ ಆಚರಣೆಗಾಗಿ ಮಾತ್ರವಲ್ಲದೆ ತಮ್ಮ ವಿವಾಹಕ್ಕಾಗಿ ಸ್ಥಳಗಳನ್ನು ಹುಡುಕಲು ಹೋಗುತ್ತಿರುವುದಾಗಿಯೂ ಹೇಳಿದ್ದರು.

77

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು 2019 ರಲ್ಲಿ ತಮ್ಮ ರಿಲೇಷನ್‌ಶಿಪ್ ದೃಢಪಡಿಸಿದ ನಂತರ ಆಗಾಗ ಮದುವೆಯ ವದಂತಿ ಕೇಳಿ ಬರುತ್ತಲೇ ಇದೆ. ಅವರು 2018 ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು.

click me!

Recommended Stories