Seema Sajdeh: ಡೇಟಿಂಗ್ ಮಾಡಿದ್ರೆ ಕೊಲೆಯಾಗ್ತೇನೆ ಎಂಬ ಭಯ ಇತ್ತಂತೆ ಸೊಹೈಲ್ ಮಾಜಿ ಪತ್ನಿಗೆ

Published : Apr 26, 2025, 02:34 PM ISTUpdated : Apr 27, 2025, 08:36 AM IST

ಸೀಮಾ ಸಜ್ದೇಹ್ ಹಾಗೂ ನಟ ಸೊಹೈಲ್ ಖಾನ್ 24 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿ, 2022 ರಲ್ಲಿ ವಿಚ್ಚೇಧನ ಪಡೆದರು. ಈಗ ಸೀಮಾ ಸಂಬಂಧದ ಬಗ್ಗೆ ಹಾಗೂ ಮತ್ತೆ ಡೇಟಿಂಗ್ ಮಾಡುವ ಕುರಿತು ಏನು ಹೇಳುತ್ತಿದ್ದಾರೆ.   

PREV
15
Seema Sajdeh: ಡೇಟಿಂಗ್ ಮಾಡಿದ್ರೆ ಕೊಲೆಯಾಗ್ತೇನೆ ಎಂಬ ಭಯ ಇತ್ತಂತೆ ಸೊಹೈಲ್ ಮಾಜಿ ಪತ್ನಿಗೆ

ಫ್ಯಾಷನ್ ಡಿಸೈನರ್ ಮತ್ತು ರಿಯಾಲಿಟಿ ಟಿವಿ ತಾರೆ (Reality show star) ಸೀಮಾ ಸಜ್ದೇಹ್ ಅವರು ನಟ ಸೊಹೈಲ್ ಖಾನ್ ಅವರಿಂದ ವಿಚ್ಛೇದನ ಪಡೆದ ನಂತರ ತಮ್ಮ ಡೇಟಿಂಗ್ ಜೀವನದ ಬಗ್ಗೆ ಮಾತನಾಡಿದ್ದಾರೆ. ಸೀಮಾ ಮತ್ತು ಸೊಹೈಲ್ 1998-2022 ರವರೆಗೆ ದಾಂಪತ್ಯ ಜೀವನವನ್ನು ನಡೆಸಿದ್ದರು. ಈ ಜೋಡಿಗೆ  ಇಬ್ಬರು ಗಂಡು ಮಕ್ಕಳು ಸಹ ಇದ್ದಾರೆ. ಇತ್ತೀಚಿನ ಸಂವಾದವೊಂದರಲ್ಲಿ, ವಿಚ್ಛೇದನದ ನಂತರ ಡೇಟಿಂಗ್‌ಗೆ ಹೋಗುವ ಕಲ್ಪನೆಯು ಹೇಗೆ ಭಯ ಹುಟ್ಟಿಸಿತ್ತು ಎನ್ನುವ ಕುರಿತು ಸೀಮಾ ಮಾತನಾಡಿದ್ದಾರೆ. 
 

25

ಒಂಟಿತನ ಮತ್ತು ಮತ್ತೆ ಡೇಟಿಂಗ್ ಬಗ್ಗೆ ಸೀಮಾ ಸಜ್ದೇಹ್ ಹೇಳಿದ್ದೇನು? 
ಜಾನಿಸ್ ಸಿಕ್ವೇರಿಯಾ ಅವರೊಂದಿಗಿನ ಮಾತುಕಥೆಯಲ್ಲಿ, ಸೀಮಾ (Seema Sajdeh) ಮತ್ತೆ ಒಂಟಿಯಾಗಿರುವ ಬಗ್ಗೆ ಮಾತನಾಡುತ್ತಾ, ಡಿವೋರ್ಸ್ ಬಳಿಕ ಡೇಟಿಂಗ್ ಹೋಗೋದು ತುಂಬಾನೆ ಕೆಟ್ಟದಾಗಿರುತ್ತೆ. ನಿಜ ಹೇಳಬೇಕೆಂದರೆ, ನನಗೆ ಇದು ತುಂಬಾನೆ ಕೆಟ್ಟದಾಗಿ ಅನಿಸಿತ್ತು, ನಾನು ಭಯ ಪಟ್ಟಿದ್ದೆ. ಎಲ್ಲರೂ ನನಗೆ, ‘ಡೇಟಿಂಗ್ ಹೋಗಿ, ಸಮಯ ಕಳಿ, ಎಲ್ಲವೂ ಚೆನ್ನಾಗಿರುತ್ತೆ ಅಂತಾನೇ ಹೇಳಿದ್ರು. ಆದರೆ ನಾನು ಲಾ ಆಂಡ್ ಆರ್ಡರ್ SVU ಸೀರೀಸ್ ಹೆಚ್ಚಾಗಿ ನೋಡಿತ್ತಿದ್ದುದರಿಂದ,  ನನ್ನನ್ನು ಅವರು ಕೊಲ್ಲುತ್ತಾರೆ, ಒಂದು ವೇಳೆ ನಾನು ಡೇಟ್ ಮಾಡಲು ಹೋದ ವ್ಯಕ್ತಿ ಸೀರಿಯಲ್ ಕಿಲ್ಲರ್ (Serial Killer) ಆಗಿದ್ರೆ ಏನು ಮಾಡೋದು ಎಂದು ಯೋಚಿಸಿದ್ದರಂತೆ. 

35

ನೆಟ್‌ಫ್ಲಿಕ್ಸ್ ರಿಯಾಲಿಟಿ ಶೋ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌ ನಿಂದಾಗಿ ಜನಪ್ರಿಯತೆ ಪಡೆದ ಸೀಮಾ, ಡೇಟಿಂಗ್ ವಿಷಯಕ್ಕೆ ಬಂದಾಗ ತಾನು 'ಓಲ್ಡ್ ಸ್ಕೂಲ್' ಎಂದು ಹೇಳಿಕೊಂಡಿದ್ದಾರೆ ಮತ್ತು 'ಸಿಚುಯೇಷನ್‌ಶಿಪ್' (situationship) ನಂತಹ ಪದಗಳ ಅರ್ಥವೇನೆಂದು ತಿಳಿದಿರಲಿಲ್ಲ ಅಂತಾನೂ ಹೇಳಿದ್ದಾರೆ.
 

45

ಡೇಟಿಂಗ್ ಅಪ್ಲಿಕೇಶನ್‌ನಲ್ಲಿ (dating application) ತಾನು ಮಾಡಿದ ಒಂದು ತಪ್ಪನ್ನು ನೆನಪಿಸಿಕೊಳ್ಳುತ್ತಾ, ಸೀಮಾ, "ನಾನು ಒಮ್ಮೆ ಮಾತ್ರ ಡೇಟಿಂಗ್ ಅಪ್ಲಿಕೇಶನ್‌ಗೆ ಹೋಗಿದ್ದೆ ಏಕೆಂದರೆ ಡಿವೋರ್ಸ್ ಬಳಿಕ ಒಂದು ದಿನ ನಾನು ತುಂಬಾ ಆಲ್ಕೋಹಾಲ್ ಸೇವಿಸಿದ್ದೆ, ನನ್ನ ಜೊತೆ ಇಬ್ಬರು ಸ್ನೇಹಿತೆಯರು ಇದ್ದರು,  ಅವರ ಸಲಹೆಯ ಪ್ರಕಾರ ನಾನು ಆ ಅಪ್ಲಿಕೇಶನ್‌ನಲ್ಲಿ ನನ್ನ ಹೆಸರು ನೊಂದಾಯಿಸಿದೆ, ನಾನು ಬೆಳಿಗ್ಗೆ ಎದ್ದು ಆಪ್ ನೋಡಿದಾಗ ಸಂಗಾತಿಯ ಆಯ್ಕೆ ವಿಭಾಗದಲ್ಲಿ ಫೀಮೇಲ್ ಎಂದು ಬರೆದಿದ್ದನ್ನು ನೆನಪಿಸಿಕೊಂಡಿದ್ದಾರೆ ಸೀಮಾ. 
 

55

ಸೀಮಾ ಸಜ್ದೇಹ್ ವಿವಾಹ ಮತ್ತು ವಿಚ್ಛೇದನ
1998 ರಲ್ಲಿ ಸೊಹೈಲ್ ಖಾನ್ (Sohail Khan) ಅವರನ್ನು ವಿವಾಹವಾಗುವ ಮೊದಲು, ಸೀಮಾ ಉದ್ಯಮಿ ವಿಕ್ರಮ್ ಅಹುಜಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದಾಗ್ಯೂ, ಅವರು ಆ ನಿಶ್ಚಿತಾರ್ಥವನ್ನು ರದ್ದುಗೊಳಿಸಿದರು. ಸೀಮಾ ಮತ್ತು ಸೊಹೈಲ್ ಆರ್ಯ ಸಮಾಜ ಪದ್ಧತಿಯ ಪ್ರಕಾರ ವಿವಾಹವನ್ನು ಮಾಡಿಕೊಂಡರು. ನಂತರ ಮುಸ್ಲಿಂ ಪದ್ಧತಿಯಂತೆ ನಿಖಾವನ್ನು ನಡೆಸಿದರು. ಈ ಜೋಡಿ 2000ದಲ್ಲಿ ತಮ್ಮ ಮೊದಲ ಮಗ ನಿರ್ವಾನ್ ಮತ್ತು 2011 ರಲ್ಲಿ ಅವರ ಎರಡನೇ ಮಗ ಯೋಹಾನ್ ಗೆ ಜನ್ಮ ನೀಡಿದ್ದರು. 24 ವರ್ಷಗಳ ದಾಂಪತ್ಯದ ನಂತರ ದಂಪತಿಗಳು ಅಂತಿಮವಾಗಿ 2022 ರಲ್ಲಿ ಬೇರ್ಪಟ್ಟರು. ಸೀಮಾ ಅಂದಿನಿಂದ ಸಿಂಗಲ್ ಆಗಿದ್ದು, ಇದೀಗ ಬೇರೊಬ್ಬರ ಜೊತೆ ರಿಲೇಶನ್’ಶಿಪ್ ನಲ್ಲಿದ್ದಾರೆ. 

Read more Photos on
click me!

Recommended Stories