ಫ್ಯಾಬುಲಸ್ ಲೀವ್ಸ್ ಆಫ್ ಬಾಲಿವುಡ್ ವೈವ್ಸ್‌ನಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ 48ರ ಹರೆಯದ ಸೀಮಾ ಸಜ್ದೇಹ್. ಈ ಶೋದಲ್ಲಿ ಉದ್ಯಮಿ ವಿಕ್ರಮ್ ಅಹುಜಾ ಜೊತೆ ಡೇಟಿಂಗ್ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಸೀಮಾ
ಸೀಮಾ ಸಜ್ದೇಹ್ ಹೊಸ ಸಂಬಂಧ ಬಹಿರಂಗ
ಸಲ್ಮಾನ್ ಖಾನ್ ಅವರ ತಮ್ಮ ಸೊಹೇಲ್ ಖಾನ್ ಮಾಜಿ ಪತ್ನಿಯಾಗಿರುವ ಸೀಮಾ ಸಜ್ದೇಹ್ ನೆಟ್‌ಫ್ಲಿಕ್ಸ್‌ನ 'ಫ್ಯಾಬುಲಸ್ ಲೈವ್ಸ್' ನಲ್ಲಿ ತಮ್ಮ ಹೊಸ ಸಂಬಂಧವನ್ನು ಬಹಿರಂಗಪಡಿಸಿದ್ದಾರೆ.
ಸೀಮಾ ಸಜ್ದೇಹ್ ಜೀವನದಲ್ಲಿ ಹೊಸ ವ್ಯಕ್ತಿ
ಈ OTT ಶೋನಲ್ಲಿ ಸೀಮಾ ಸಜ್ದೇಹ್ ಉದ್ಯಮಿ ವಿಕ್ರಮ್ ಅಹುಜಾ ಅವರೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ವಿಕ್ರಮ್ ಅವರು ಆಕೆಗೆ ಬಾಂದ್ರಾದಲ್ಲಿ ಮನೆ ಮಾಡಲು ಸಹಾಯ ಮಾಡಿದ್ರಂತೆ
ಮಗನ ಜೊತೆ ಸಂಬಂಧದ ಬಗ್ಗೆ ಚರ್ಚೆ
ಸೀಮಾ ಸಜ್ದೇಹ್ ತಮ್ಮ ಹಿರಿಯ ಮಗ ನಿರ್ವಾಣ್ ಜೊತೆ ಈ ಹೊಸ ಸಂಬಂಧದ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೇ ಜೀವನದಲ್ಲಿ ತಾವು ಮುಂದುವರೆದಿರುವುದಾಗಿ ತಿಳಿಸಿದ್ದಾರೆ.
ಸೀಮಾ ಸಜ್ದೇಹ್ ಮೇಲೆ ಮಗನ ಪ್ರತಿಕ್ರಿಯೆ
ಇತ್ತ ಅಮ್ಮ ತಮ್ಮ 48ರ ಹರೆಯದಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದ ಬಗ್ಗೆ ಮಗ 23ರ ಹರೆಯದ ನಿರ್ವಾಣ್‌ಗೂ ಯಾವುದೇ ಅಸಮಾಧಾನ ಇಲ್ವಂತೆ ಅಮ್ಮ ಸದಾ ಖುಷಿಯಾಗಿರಬೇಕು ಎಂಬುದು ಮಗನ ಆಸೆ.
ನಿರ್ವಾಣ್ ಖಾನ್ ತಾಯಿಗೆ ಏನು ಹೇಳಿದರು?
ಜೀವನದಲ್ಲಿ ಮುಂದುವರೆಯಬೇಕು. ನಿಮ್ಮ ಸಂತೋಷವೇ ನಮ್ಮ ಗುರಿ ಎಂದು ಮಗ ನಿರ್ವಾಣ್ ಹೇಳಿದ್ದಾಗಿ ಸೀಮಾ ಸಜ್ದೇಹ್ ಹೇಳಿಕೊಂಡಿದ್ದಾರೆ.
೧೯೯೮ ರಲ್ಲಿ ಸೀಮಾ-ಸೊಹೇಲ್ ವಿವಾಹ
ಫ್ಯಾಷನ್ ಡಿಸೈನರ್ ಸೀಮಾ ಸಜ್ದೇಹ್ 1998ರಲ್ಲಿ ಸೊಹೇಲ್ ಖಾನ್ ಅವರನ್ನು ಮದುವೆಯಾಗಿದ್ದರು. 2022ರಲ್ಲಿ ವಿಚ್ಛೇದನ ಪಡೆದ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.