ಸೂಪರ್ ಸ್ಟಾರ್ ಧನುಷ್‌ ಅವರ 150 ಕೋಟಿ ಬೆಲೆಯ ಬಂಗಲೆ ಒಳಗೆ ಹೇಗಿದೆ ನೋಡಿ

Published : Jul 28, 2022, 06:03 PM IST

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ವೆಂಕಟೇಶ್ ಪ್ರಭು ಕಸ್ತೂರಿ ರಾಜಾ ಅಂದರೆ ಧನುಷ್ (Dhanush) ಅವರು 39 ವರ್ಷಕ್ಕೆ ಕಾಲಿಟ್ಟಿದ್ದಾರೆ. 28 ಜುಲೈ 1983 ರಂದು ಚೆನ್ನೈನಲ್ಲಿ ಜನಿಸಿದ ಧನುಷ್ ತಮ್ಮ ಅದ್ಬುತ ಅಭಿನಯಕ್ಕಾಗಿ ಮಾತ್ರವಲ್ಲದೆ ತಮ್ಮ ಐಷಾರಾಮಿ ಜೀವನಕ್ಕಾಗಿಯೂ ಸುದ್ದಿಯಲ್ಲಿದ್ದಾರೆ.   ಕಳೆದ ವರ್ಷ ಧನುಷ್ ಚೆನ್ನೈನಲ್ಲಿ 150 ಕೋಟಿ ರೂಪಾಯಿಗಳ ಮನೆ ಖರೀದಿಸಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಧನುಷ್ ಅವರ ಈ ಹೊಸ ಐಷಾರಾಮಿ ಮನೆಯ ಫೋಟೋಗಳು ಇಲ್ಲಿವೆ.

PREV
19
ಸೂಪರ್ ಸ್ಟಾರ್ ಧನುಷ್‌ ಅವರ 150 ಕೋಟಿ ಬೆಲೆಯ ಬಂಗಲೆ ಒಳಗೆ ಹೇಗಿದೆ ನೋಡಿ

ವರದಿಗಳ ಪ್ರಕಾರ, ಕಳೆದ ವರ್ಷ ಧನುಷ್ ಖರೀದಿಸಿದ ಹೊಸ ಆಸ್ತಿ 19000 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ. (ಚಿತ್ರವು ಅವರ ಹಳೆಯ ಮನೆಯದ್ದು.)


 

29

ಧನುಷ್ ಅವರ ಹೊಸ ಆಸ್ತಿ ನಾಲ್ಕು ಅಂತಸ್ತಿನ ಮನೆಯಾಗಿದ್ದು, ಇದು ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಜೆ. ಜಯಲಲಿತಾ ಅವರ ನಿವಾಸದ ಬಳಿ ಇದೆ.

39

ಪ್ರಸ್ತುತ, ಸೂಪರ್‌ಸ್ಟಾರ್ ಧನುಷ್ ಚೆನ್ನೈನ ಐಷಾರಾಮಿ ಕಾಲೋನಿ ಅಲ್ವಾರ್‌ಪೇಟ್‌ನಲ್ಲಿ ವಾಸಿಸುತ್ತಿದ್ದಾರೆ. ಅಲ್ವಾರ್‌ಪೇಟ್‌ನಲ್ಲಿರುವ ಈ ಮನೆಯು ಧನುಷ್ ತನ್ನ ವಿಚ್ಛೇದಿತ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರೊಂದಿಗೆ ವಾಸಿಸುತ್ತಿದ್ದ ಮನೆಯಾಗಿದೆ.
 

49

ವಿಚ್ಛೇದಿತ ಪತ್ನಿ ಐಶ್ವರ್ಯಾ ರಜನಿಕಾಂತ್ ಅವರ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಧನುಷ್ ಅವರ ಮನೆಯ ಹಲವು ಚಿತ್ರಗಳು ಲಭ್ಯವಿವೆ. ಇದರ ಒಳನೋಟವನ್ನು ಇವುಗಳಲ್ಲಿ ಕಾಣಬಹುದು.


 

59

ಅಡುಗೆ ಮನೆಯಿಂದ ಹಿಡಿದು ಮನೆಯ ಬಾಲ್ಕನಿ, ಲಾನ್, ಗಾರ್ಡನ್ ಎಲ್ಲದರ ಝಲಕ್ ಐಶ್ವರ್ಯಾ ಶೇರ್ ಮಾಡಿರುವ ಚಿತ್ರಗಳಲ್ಲಿ ಕಾಣಬಹುದು. ಧನುಷ್ ಅವರ ಈ ಸೂಪರ್ ಐಷಾರಾಮಿ ಮನೆಯಲ್ಲಿ ಬೃಹತ್ ಟೆರೇಸ್, ಖಾಸಗಿ ಜಿಮ್ ಮತ್ತು ಈಜುಕೊಳದಂತಹ ಸೌಲಭ್ಯಗಳಿವೆ.


 

69

ಧನುಷ್ ಮತ್ತು ಐಶ್ವರ್ಯಾ 2004 ರಲ್ಲಿ ವಿವಾಹವಾದರು. ಅವರಿಗೆ ಯಾತ್ರರಾಜ ಮತ್ತು ಲಿಂಗರಾಜ ಎಂಬ ಇಬ್ಬರು ಮಕ್ಕಳಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಅವರು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು.


 

79

ಬೇರ್ಪಡುವ 5 ವರ್ಷಗಳ ಹಿಂದೆಯೇ ಧನುಷ್ ಮತ್ತು ಐಶ್ವರ್ಯಾ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು ಎನ್ನಲಾಗಿದೆ. ಆದರೆ ಅವರು ಅದನ್ನು ತಳ್ಳುತ್ತಲೇ ಇದ್ದರು.

89

ಧನುಷ್ ಇಲ್ಲಿಯವರೆಗೆ 45 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನಾಗಿ ಕಾಣಿಸಿಕೊಂಡಿದ್ದಾರೆ ಮತ್ತು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತರಾಗಿದ್ದಾರೆ. ಧನುಷ್ ಇತ್ತೀಚೆಗೆ ರುಸ್ಸೋ ಬ್ರದರ್ಸ್‌ನ ಹಾಲಿವುಡ್ ಚಿತ್ರ 'ದಿ ಗ್ರೇ ಮ್ಯಾನ್' ನಲ್ಲಿ ಕಾಣಿಸಿಕೊಂಡಿದ್ದರು.
 

99

ತಮಿಳು ಚಿತ್ರರಂಗದ  ಧನುಷ್  ಅವರ ಮುಂದಿನ ಚಿತ್ರ 'ನಾನೇ ವರುವೆ', ಇದರಲ್ಲಿ ಅವರು ಎಲ್ಲಿ ಅವ್ರಾಮ್ ಎದುರು ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories