ಡಿವೋರ್ಸ್ ನಂತರ ಮತ್ತೆ ತಮ್ಮ ನಗು ಮುಖ ತೋರಿಸಿದ ಸಮಂತಾ

First Published | Oct 26, 2021, 5:46 PM IST
  • ವಿಚ್ಚೇದನೆ ನಂತರ ಬೆಳಗಿನ ನಗು ಮುಖ ತೋರಿಸಿದ ಸಮಂತಾ(Samantha)
  • ಕಳೆದ ಕೆಲವು ದಿನಗಳಿಂದ ನೋ ಸೆಲ್ಫಿ, ನೋ ಸ್ಟೋರಿ ಎಂಬಂತಿದ್ದ ನಟಿ

ಸಮಂತಾ ಇತ್ತೀಚೆಗಷ್ಟೇ ತನ್ನ ಚಾರ್ ಧಾಮ್ ಯಾತ್ರೆಯಿಂದ ಮರಳಿ ಬಂದಿದ್ದಾರೆ. ತನ್ನ ಹಿಮಾಲಯದ ಯಾತ್ರಾ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಟಿ ಹಲವು ದಿನಗಳ ನಂತರ ತಮ್ಮ ನಗುತ್ತಿರುವ ಚಿತ್ರವನ್ನು ಫೋಟೋವನ್ನು ತಮ್ಮ Instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

Tap to resize

ತನ್ನ ಬೆಳಗಿನ ಹೊಳಪನ್ನು ಕಳೆದುಕೊಂಡಿದ್ದೆ. ಅದನ್ನು ಮರಳಿ ಪಡೆಯಲು ಸಂತೋಷವಾಗುತ್ತಿದೆ ಎಂದು ಅವರು ಬರೆದಿದ್ದಾರೆ. ಈ ತಿಂಗಳ ಆರಂಭದಲ್ಲಿ, ಸಮಂತಾ ಅವರು ನಾಗ ಚೈತನ್ಯ ಅವರಿಂದ ಬೇರೆಯಾಗಿದ್ದಾರೆ ಎಂದು ಘೋಷಿಸಿದರು. ಅವರ ನಾಲ್ಕು ವರ್ಷಗಳ ವೈವಾಹಿಕ ಜೀವನ ಕೊನೆಗೊಂಡಿವೆ.

ಅಕ್ಟೋಬರ್ 2 ರಂದು ಸಮಂತಾ ಮತ್ತು ನಾಗ ಚೈತನ್ಯ ವಿಚ್ಚೇದನೆಯಾಗಿದ್ದಾರೆ. ರಾಜಿ ಮಾಡಿಕೊಳ್ಳಲಾಗದ ಭಿನ್ನಾಭಿಪ್ರಾಯಗಳಿಂದಾಗಿ ಅವರು ಬೇರೆಯಾಗಲು ನಿರ್ಧರಿಸಿದ್ದಾರೆ.

ಸಮಂತಾ 2010 ರಲ್ಲಿ ನಿರ್ದೇಶಕ ಗೌತಮ್ ಮೆನನ್ ಅವರ ಯೇ ಮಾಯಾ ಚೇಸಾವೆ ಸೆಟ್‌ನಲ್ಲಿ ನಾಗ ಚೈತನ್ಯ ಅವರನ್ನು ಭೇಟಿಯಾದರು. 2014ರಲ್ಲಿ ಆಟೋನಗರ ಸೂರ್ಯ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾಗ ಇವರಿಬ್ಬರ ನಡುವೆ ಪ್ರೀತಿ ಮೂಡಿತ್ತು.

ಮೂರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಸಮಂತಾ ಮತ್ತು ನಾಗ ಚೈತನ್ಯ ಅವರು 2017 ರಲ್ಲಿ ಗೋವಾದಲ್ಲಿ ಅದ್ಧೂರಿ ವಿವಾಹ ಸಮಾರಂಭದಲ್ಲಿ ವಿವಾಹವಾದರು. 

Latest Videos

click me!