ನಟಿ ಸಾಯಿ ಪಲ್ಲವಿ ಜಾಸ್ತಿ ಕಾಣಿಸಿಕೊಳ್ಳೋದು ಸೀರೆಯಲ್ಲಿ. ಫಾರಿನ್‌ನಲ್ಲಿ ಓದಿದ ಸೌತ್ ಬ್ಯೂಟಿಗೆ ಸೀರೆ ಅಂದ್ರೆ ಸಿಕ್ಕಾಪಟ್ಟೆ ಲವ್.
ಇವರ ಸೀರೆ ಪ್ರೀತಿ ಎಷ್ಟು ಎಂದರೆ ಭಾರೀ ಚಳಿ ಇರೋ ಪ್ರದೇಶಕ್ಕೋದ್ರೂ ಸೀರೆ ಬಿಡಲ್ಲಾ ಅಂತಾರೆ ಸಾಯಿ ಪಲ್ಲವಿ.
ಸಿಂಪ್ಲಿಸಿಟಿಗೇ ಹೆಸರಾಗಿರೋ ದಕ್ಷಿಣದ ಚೆಲುವೆಗೆ ಸೀರೆ ಮೇಲೆ ಎಲ್ಲಿಲ್ಲದ ಒಲವು.
ಹೊರಗೆ ಕಾಣಿಸಿ ಕೊಳ್ಳುವಾಗೆಲ್ಲಾ ಸೀರೆಯೇ ಇವರ ಆಯ್ಕೆ.
ಸಲ್ವಾರ್ ಅಥವಾ ಸೀರೆಯಲ್ಲಿಯೇ ಜಾಸ್ತಿ ಕಾಣಿಸಿಕೊಳ್ಳೋ ಪಿಂಪಲ್ ಬ್ಯೂಟಿ.
ಮಿನಿಮಮ್ ಆಭರಣ ಮತ್ತು ಮೇಕಪ್ ಇಲ್ಲದೆ ಸಿನಿಮಾದಲ್ಲಿ ನಟಿಸೋ ಇವರ ನಿರ್ಧಾರ ವಿಶೇಷವಾದದ್ದು.
ಸದ್ಯ ಸಾಯಿ ಪಲ್ಲವಿ ಕೈಯಲ್ಲಿ ಲವ್‌ಸ್ಟೋರಿ ಮತ್ತು ವಿರಾಟ ಪರ್ವಂ ಎರಡು ಸಿನಮಾಗಳಿವೆ.
ಲವ್‌ಸ್ಟೋರಿಯಲ್ಲಿ ನಾಗಚೈತನ್ಯ ಹೀರೋ ಆಗಿ ಕಾಣಿಸಿಕೊಳ್ಳಲಿದ್ದು, ಇದನ್ನು ಶೇಖರ್ ಕಮ್ಮುಲ ನಿರ್ದೇಶಿಸಿದ್ದಾರೆ.
ಸಿನಿಮಾದಲ್ಲಿ ಮರ್ಯಾದ ಹತ್ಯೆಗೆ ಸಂಬಂಧಿಸಿ ದೊಡ್ಡ ಸಂದೇಶವಿದೆ ಎಂದು ನಿರ್ದೇಶಕ ಹೇಳಿದ್ದಾರೆ.
ವಿರಾಟ ಪರ್ವಂ ಸಿನಿಮಾವನ್ನು ವೇಣು ಉಡುಗುಲ ನಿರ್ದೇಶಿಸುತ್ತಿದ್ದು, ಇದರಲ್ಲಿ ರಾಣಾ ಹೀರೋ ಪಾತ್ರದಲ್ಲಿ ಮಿಂಚಲಿದ್ದಾರೆ.
ಇದರಲ್ಲಿ ಪ್ರಿಯಾಮಣಿ, ನಂದಿತಾ ದಾಸ್, ನವೀನ್ ಚಂದ್ರ, ಝರೀನಾ ವಹಾಬ್, ಈಶ್ವರಿ ರಾವ್, ಸಾಯಿ ಚಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಾಯಿ ಈ ಸಿನಿಮಾದಲ್ಲಿ ನಕ್ಸಲೈಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.