ಬಾಲಿವುಡ್ ಖ್ಯಾತ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸದ್ಯ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 2018ರಲ್ಲಿ ಬಾಲಿವುಡ್ ಪ್ರವೇಶ ಮಾಡಿದ ಸಾರಾ ಅಲಿ ಕಾನ್ ಅನೇಕ ಸಿನಿಮಾಗಳಲ್ಲಿ ಮಿಂಚಿದರು.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಾರಾ ಅವರ ಯಾವುದೇ ಸಿನಿಮಾ ಬಾಕ್ಸ ಆಫೀಸ್ ನಲ್ಲಿ ಸಕ್ಸಸ್ ಕಂಡಿಲ್ಲ. ತನ್ನ ಕಲೆಯಿಂದ ಪ್ರೇಕ್ಷಕರನ್ನು ಮೆಚ್ಚಿಸಲು ಯಶಸ್ವಿಯಾದರು. ಆದರೆ ಸಕ್ಸಸ್ ಸಿಕ್ಕಲ್ಲ. ಒಂದೊಳ್ಳೆ ಸೂಪರ್ ಸಕ್ಸಸ್ ಗಾಗಿ ಸಾರಾ ಎದುರು ನೋಡುತ್ತಿದ್ದಾರೆ.
ಕೇದರನಾಥ್, ಸಿಂಬ, ಲವ್ ಆಜ್ ಕಲ್ ಸಿನಿಮಾ ಮೂಲಕ ಅಭಿಮಾನಿಗಲ ಮುಂದೆ ಬಂದಿರುವ ಸಾರಾಗೆ ಈ ಯಾವ ಸಿನಿಮಾಗಳು ಯಶಸ್ಸು ತಂದುಕೊಟ್ಟಿಲ್ಲ. ಸಾರಾ ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್, ಗಾಸಿಪ್ ಮೂಲಕವೇ ಸುದ್ದಿಯಲ್ಲಿದ್ದಾರೆ.
ವೃತ್ತಿ ಜೀವದ ಕೆಲವು ತಪ್ಪುಗಳ ಬಗ್ಗೆ ನಟಿ ಸಾರಾ ಬಹಿರಂಗವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಾರಾ ಸಿನಿಮಾರಂಗದಲ್ಲಿ ಮಾಡಿದ ತಪ್ಪುಗಳ ಬಗ್ಗೆ ಬಹಿರಂಗ ಪಡಿಸಿದರು. ತಮ್ಮ ವೃತ್ತಿಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸುತ್ತಿರುವುದಾಗಿಯೂ ಹೇಳಿದರು.
ಒಬ್ಬ ನಟಿಯಾಗಿ ನಾನು ಪ್ರತಿದಿನ ಸಾಕಷ್ಟು ಕಲಿಯುತ್ತೇನೆ ಎಂದು ಸಾರಾ ಹೇಳಿದ್ದಾರೆ. ಸಾರಾ ತಾನು ಕೆಲವು ತಪ್ಪುಗಳನ್ನು ಮಾಡಿದ್ದೇನೆ ಎಂದು ಒಪ್ಪಿಕೊಂಡರು. ಪ್ರೇಕ್ಷಕರು ಇಷ್ಟಪಡದ ಕೆಲವು ಚಿತ್ರಗಳನ್ನು ಮಾಡಿದ್ದೇನೆ ಎಂದು ಅವರು ಹೇಳಿದರು. ಆದರೆ ತಪ್ಪುಗಳನ್ನು ಮಾಡುವುದು ತನ್ನ ವಯಸ್ಸು ಎಂದು ಸಗ ಅವರು ಹೇಳಿದರು. ಪ್ರತಿ ಬಾರಿಯೂ ಕೆಳಗೆ ಬಿದ್ದು ಏಳುವುದು ಮುಖ್ಯ ಎಂದು ಭಾವಿಸುತ್ತೇನೆ ಎಂದು ಸಾರಾ ಹೇಳಿದರು.
ಸಾರಾ ಅಲಿ ಖಾನ್ ಕೊನೆಯದಾಗಿ ಅಸ್ತ್ರಂಗಿ ರೇ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಅಕ್ಷಯ್ ಕುಮಾರ್ ಮತ್ತು ಧನುಷ್ ಜೋತೆ ನಟಿಸಿದ್ದರು. ಈ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತು.
Sara Ali Khan
ಸದ್ಯ ಸಾರಾ ಬಳಿ ಅನೇಕ ಸಿನಿಮಾಗಳಿವೆ. ಲಕ್ಷ್ಮಣ್ ಉಟೇಕರ್ , ವಿಕ್ಕಿ ಕೌಶಲ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿಸಿದ್ದಾರೆ. ಜೊತೆಗೆ ಗ್ಯಾಸ್ ಲೈಟ್, ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.