ಐಟಂ ಹಾಡಿನಲ್ಲಿ ಕುಣಿಯಲು ಭರ್ಜರಿ ಸಂಭಾವನೆ ಬೇಡಿಕೆ ಇಟ್ಟ 'ಕಬ್ಜ' ಸುಂದರಿ ಶ್ರೀಯಾ

Published : Apr 21, 2023, 10:46 AM IST

ಐಟಂ ಹಾಡಿನಲ್ಲಿ ಕುಣಿಯಲು ನಟಿ ಶ್ರೀಯಾ ಶರಣ್ ಭರ್ಜರಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

PREV
17
ಐಟಂ ಹಾಡಿನಲ್ಲಿ ಕುಣಿಯಲು ಭರ್ಜರಿ ಸಂಭಾವನೆ ಬೇಡಿಕೆ ಇಟ್ಟ 'ಕಬ್ಜ' ಸುಂದರಿ ಶ್ರೀಯಾ

ಎರಡು ದಶಕಗಳಿಗೂ ಹೆಚ್ಚು ಕಾಲ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಬಹುಭಾಷಾ ನಟಿ ಶ್ರೀಯಾ ಶರಣ್ ಇತ್ತೀಚೆಗಷ್ಟೆ ಕಬ್ಜ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದರು. ಕೆಲವು ಸಮಯ ಸಿನಿಮಾರಿಂಗದಿಂದ ಅಂತರ ಕಾಯ್ದುಕೊಂಡಿದ್ದ ಶ್ರೀಯಾ ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದು ಉತ್ತಮ ಸಿನಿಮಾಗಳಿಗಾಗಿ ಎದುರು ನೋಡುತ್ತಿದ್ದಾರೆ. 

27

ಕಬ್ಜ ಸಿನಿಮಾ ಬಳಿಕ ಮತ್ತಷ್ಟು ಬೇಡಿಕೆ ಹೆಚ್ಚಿಸಿಕೊಂಡಿರುವ ಶ್ರೀಯಾ ಸಿನಿಮಾಗಳ ಆಯ್ಕೆಯ ವಿಚಾರದಲ್ಲೂ ಸಿಕ್ಕಾಪಟ್ಟೆ ಚೂಸಿ ಆಗಿದ್ದಾರೆ. 

37

ಶ್ರೀಯಾ ಬಗ್ಗೆ ಇದೀಗ ಮತ್ತೊಂದು ಸುದ್ದಿ ವೈರಲ್ ಆಗಿದೆ. ಐಟಂ ಹಾಡಿನಲ್ಲಿ ಡಾನ್ಸ್ ಮಾಡಲು ಕಬ್ಜ ಭರ್ಜರಿ ಮೊತ್ತ ಬೇಡಿಕೆ ಇಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.  ಹೌದು, ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಭೋಲಾ ಶಂಕರ್​ ಸಿನಿಮಾದಲ್ಲಿನ ಒಂದು ಐಟಂ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಲು ಶ್ರೀಯಾ ಶರಣ್​ಗೆ ಆಫರ್​ ಮಾಡಲಾಗಿದಂತೆ.

47

ಚಿರಂಜೀವಿ ಸಿನಿಮಾದ ಹಾಡಿನಲ್ಲಿ ಡ್ಯಾನ್ಸ್​ ಮಾಡಲು ಶ್ರೀಯಾ ಶರಣ್​ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಆದರೆ ಆ ವಿಚಾರದ ಬಗ್ಗೆ ಶ್ರೀಯಾ ಕಡೆಯಿಂದ ಯಾವುದೇ ಹೇಳಿಕೆ ನೀಡಿಲ್ಲ.

57

ಇದೀಗ ಸ್ಟಾರ್ ನಟಿಯರು ಹೆಚ್ಚಾಗಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕತ್ರಿನಾ, ಕರೀನಾ, ದೀಪಿಕಾ, ಶ್ರದ್ಧಾ ಕಪೂರ್ ಸೇರಿದಂತೆ ಅನೇಕ ನಟಿಯರು ಐಟಂ ಹಾಡಿನಲ್ಲಿ ಮಿಂಚಿದ್ದಾರೆ. ನಟಿ ಸಮಂತಾ ಕೂಡ ಐಟಂ ಹಾಡಿಗೆ ಹೆಜ್ಜೆ ಹಾಕಿ ದೊಡ್ಡ ಸಕ್ಸಸ್ ಕಂಡಿದ್ದಾರೆ. 

67

ಇದೀಗ ಶ್ರೀಯಾ ಕೂಡ ಚಿರಂಜೀವಿ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಸಮಂತಾ ಅವರನ್ನು ಹಾಡನ್ನು ಹಿಂದಿಕ್ಕುತ್ತಾರಾ ಎನ್ನುವ ಕುತೂಹಲ ಕೂಡ ಅಭಿಮಾನಿಗಳಲ್ಲಿ  ಹೆಚ್ಚಾಗಿದೆ. 

77

ಶ್ರೀಯಾ ಬೇಡಿಕೆ ಇಟ್ಟ ಸಂಭಾವನೆ ಸಿನಿಮಾತಂಡ ನೀಡಿದ್ರೆ ಐಟಂ ಹಾಡಿನಲ್ಲಿ ಹೆಜ್ಜೆ ಹಾಕುವುದು ಅಧಿಕೃತ. ಆದರೆ ಭೋಲಾ ಶಂಕರ ತಂಡ ಅಷ್ಟು ಸಂಭಾವನೆ ನೀಡುತ್ತಾ, ಶ್ರೀಯಾ ಐಟಂ ಹಾಡಿಗೆ ಹೆಜ್ಜೆ ಹಾಕ್ತಾರಾ ಕಾದುನೋಡಬೇಕಿದೆ.   

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories