ಧಾರ್ಮಿಕ ನಂಬಿಕೆ, ಬಟ್ಟೆ ಆಯ್ಕೆ ಟೀಕೆಗೆ ಹೆದರೋಳಲ್ಲ ನಾನು: ಸಾರಾ ಅಲಿ ಖಾನ್

First Published | Aug 3, 2023, 5:41 PM IST

ನಟಿ  ಸಾರಾ ಅಲಿ ಖಾನ್ ( Sara Ali Khan) ಇತ್ತೀಚೆಗೆ ತಮ್ಮ ಬಗ್ಗೆಯ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ ಮತ್ತು ಕೆಲಸದ ವಿಷಯಕ್ಕೆ ಬಂದ ಪ್ರತಿಕ್ರಿಯೆಯನ್ನು ಪ್ರಶಂಸಿಸುತ್ತೇನೆ ಎಂದು ಹೇಳಿದ ಸಾರಾ, ಜನರು ತನ್ನ ವೈಯಕ್ತಿಕ ವಿಷಯದ ಬಗ್ಗೆ ಯಾವುದೇ ಅಭಿಪ್ರಾಯವನ್ನು ಹೊಂದಿದ್ದರೆ ಅವರು ಹೆದರುವುದಿಲ್ಲ ಎಂದಿದ್ದಾರೆ.

ಬಟ್ಟೆಗಳ ಆಯ್ಕೆ ಅಥವಾ ಧಾರ್ಮಿಕ ನಂಬಿಕೆಗಳ ಬಗ್ಗೆ ತಮ್ಮದೇ ಆದ ಆಯ್ಕೆಗಳಿದ್ದು, ಬೇರೆಯವರು ಕಮೆಂಟ್ ಮಾಡೋ ಅಗತ್ಯವಿಲ್ಲವೆಂದು ಕೇದರ್‌ನಾಥ್ ನಟಿ ಸಾರಾ ಆಲಿ ಖಾನ್ ಹೇಳಿದ್ದಾರೆ.

'ನಾನು ಕಾಣುವ ರೀತಿ ಸೇರಿ ನನ್ನ ವ್ಯಾಲಿಡೇಷನ್‌ ಸೆನ್ಸ್‌ ಹೊರಗಿನ ಯಾವುದರಿಂದಲೂ ಬರಬಾರದು. ಹಾಗಾಗಿ ನಾನು ತುಂಬಾ ಸಹಜವಾದ, ತುಂಬಾ ಅಂತರ್ಗತವಾಗಿರುವ, ತುಂಬಾ ಆಂತರಿಕವಾದ ಗುಣಗಳೊಂದಿಗೆ ಬೆಳೆದೆ. ಮತ್ತು ಅವು ನನ್ನೊಳಗೆ ಹಾಗೆಯೇ ಬೇರೂರಿರುವುದರಿಂದ, ನನ್ನ ಬಗ್ಗೆ ಇತರ ಜನರ ಅಭಿಪ್ರಾಯಗಳಿಂದ ನಾನು ವಿಚಲಿತನಾಗುವುದಿಲ್ಲ,' ಎಂದು ವೋಗ್ ಇಂಡಿಯಾದೊಂದಿಗೆ ಮಾತನಾಡುತ್ತಾ, ಸಾರಾ ಇತ್ತೀಚೆಗೆ ಹೇಳಿದ್ದಾರೆ.

Tap to resize

'ರಷ್ಯಾದ ಇತಿಹಾಸ ಅಧ್ಯಯನ ಮಾಡಲು ಕೊಲಂಬಿಯಾಕ್ಕೆ ಹೋದ ಅದೇ ಹುಡುಗಿ ನಾನು. ನನ್ನಿಚ್ಛೆಯಂತೆ ನಾನು ಬದುಕುತ್ತೇನೆ. ನನ್ನ ಆಯ್ಕೆಗಳನ್ನು ಆರಿಸಿಕೊಳ್ಳುತ್ತೇನೆ. ಜನರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಎನ್ನುತ್ತಾರೆ ಸಾರಾ.

'ಕೆಲಸದ ವಿಷಯಕ್ಕೆ ಬಂದರೆ ನಾನು ಯಾವುದೇ ರೀತಿಯ ಟೀಕೆಗಳನ್ನು ಬೇಕಾದರೂ ಎದುರಿಸುತ್ತೇನೆ. ಪ್ರೇಕ್ಷಕರಿಗಾಗಿ ಕೆಲಸ ಮಾಡುತ್ತೇನೆ ಮತ್ತು ಅವರು ನನ್ನ ಕೆಲಸವನ್ನು ಇಷ್ಟಪಡದಿದ್ದರೆ, ನಾನು ಉತ್ತಮವಾಗಿ ಏನು ಮಾಡಬಹುದೆಂದು ನೋಡುವುದು ನನಗೆ ಅಗತ್ಯ. ಆದರೆ ನನ್ನ ಧಾರ್ಮಿಕ ನಂಬಿಕೆಗಳು, ನನ್ನ ಡ್ರೆಸ್ಸಿಂಗ್ ಸೆನ್ಸ್‌ ಅಥವಾ ವಿಮಾನ ನಿಲ್ದಾಣದಲ್ಲಿ ನನ್ನ ಕೂದಲು ಒಣಗದಿರುವ ಬಗ್ಗೆ ಯಾವುದೇ ವೈಯಕ್ತಿಕ ಅಭಿಪ್ರಾಯವನ್ನು ಅವರು ಹೊಂದಿದ್ದರೆ, ನಾನು ಹೆದರುವುದಿಲ್ಲ' 

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ  ಸಾರಾ ಅಲಿ ಖಾನ್ ಸುಶಾಂತ್ ರಜಪೂತ್ ಸಿಂಗ್ ಅವರೊಂದಿಗೆ ಕೇದಾರನಾಥದೊಂದಿಗೆ ತಮ್ಮ ಚೊಚ್ಚಲ ಸಿನಿಮಾದಲ್ಲಿ ನಟಿಸಿದರು.

ಸಾರಾ ಕೊನೆಯದಾಗಿ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಹಾಡಿನ ಹಾರ್ಟ್ ಥ್ರೋಬ್ ನಲ್ಲಿ ಕಾಣಿಸಿಕೊಂಡರು, ಅಲ್ಲಿ ಅವರು ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ, ಅವರು ಹಲವು ಚಿತ್ರಗಳು ಇವರ ಕೈಯಲ್ಲಿವೆ.

ಅನುರಾಗ್ ಬಸು ಅವರ ಮೆಟ್ರೋ ಇನ್ ಡಿನೋದ ಭಾಗವಾಗಿದ್ದಾರೆ. ಆದಿತ್ಯ ರಾಯ್ ಕಪೂರ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದಲ್ಲದೆ ಸಾರಾ ಅವರ ಖಾತೆಯಲ್ಲಿ ಏ ವತನ್ ಮೇರೆ ವತನ್ ಇದೆ. ಈ ಚಿತ್ರವು ನೈಜ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ  ಇದು ಸ್ವಾತಂತ್ರ್ಯ ಹೋರಾಟಗಾರ್ತಿಯಾಗುವ ಬಾಂಬೆಯ ಕಾಲೇಜು ಹುಡುಗಿಯ ಧೈರ್ಯದ ಪ್ರಯಾಣದ ಕಥೆ ಹೇಳುತ್ತದೆ.  ಕಣ್ಣನ್ ಅಯ್ಯರ್ ನಿರ್ದೇಶನದ ಇದು ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ. 

ಇವುಗಳ ಜೊತೆಗೆ , ಸಾರಾ ಆಲಿ ಖಾನ್‌ ಅವರು ಕರಿಷ್ಮಾ ಕಪೂರ್ ಅವರ ಮುಂದಿನ ಮರ್ಡರ್ ಮುಬಾರಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!