Sara Ali Khan Birthday: ಒಂದೊಂದು ಪಾತ್ರ, ಒಂದೊಂದು ಅವತಾರ; ಸಾರಾ ಅಲಿ ಖಾನ್‌ರ ಸಿನಿ ಜರ್ನಿಯ 5 ಪ್ರಮುಖ ಪಾತ್ರಗಳಿವು!

Published : Aug 12, 2026, 10:41 AM IST

Sara Ali Khan Birthday: ವಿಶೇಷವಾಗಿ, ಅವರ ಸಿನಿ ಜರ್ನಿ ವಿವರಿಸುವ ಐದು ಪ್ರಮುಖ ಪಾತ್ರಗಳನ್ನು ನೋಡೋಣ. 'ಕೇದಾರನಾಥ'ದಿಂದ ಹಿಡಿದು 'ಪತಿ ಪತ್ನಿ ಔರ್ ವೋ ದೋ' ವರೆಗೆ, ಪ್ರೀತಿ, ಹಾಸ್ಯ, ಸಂಕೀರ್ಣ ಸಂಬಂಧಗಳ ಪಾತ್ರಗಳಲ್ಲಿ ಅವರ ಬಹುಮುಖ ಪ್ರತಿಭೆ ಮತ್ತು ಬೆಳವಣಿಗೆಯನ್ನು ಈ ಗ್ಯಾಲರಿ ಕಟ್ಟಿಕೊಡುತ್ತದೆ.

PREV
18
5 Performances That Trace Her Evolution From Kedarnath to Pati Patni Aur Woh Do

ಐದು ಸಿನಿಮಾಗಳು, ಐದು ವಿಭಿನ್ನ ಪಾತ್ರಗಳು, ಮತ್ತು ನಿರಂತರವಾಗಿ ಬೆಳೆಯುತ್ತಿರುವ ಸಿನಿ ಜರ್ನಿ. 'ಕೇದಾರನಾಥ' ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಸಾರಾ ಅಲಿ ಖಾನ್, ಅಲ್ಲಿಂದ ಇಲ್ಲಿಯವರೆಗೆ ಚಿತ್ರರಂಗದಲ್ಲಿ ಸಾಕಷ್ಟು ಬೆಳೆದಿದ್ದಾರೆ. ಪ್ರೀತಿ, ಹಾಸ್ಯ, ರೊಮ್ಯಾನ್ಸ್ ಅಷ್ಟೇ ಅಲ್ಲದೆ ಆಧುನಿಕ ಸಂಬಂಧಗಳ ಸಂಕೀರ್ಣತೆಗಳನ್ನು ತಮ್ಮ ಪಾತ್ರಗಳ ಮೂಲಕ ತೆರೆದಿಟ್ಟಿದ್ದಾರೆ. ಅವರ ಹುಟ್ಟುಹಬ್ಬದಂದು, ಸಾರಾ ಅವರ ಈ ಸಿನಿ ಜರ್ನಿ ಆರಂಭ, ಸವಾಲು, ಸಾಧನೆ, ಬಹುಮುಖ ಪ್ರತಿಭೆ ಬಗ್ಗೆ ತಿಳಿದುಕೊಳ್ಳೋಣ.

28
Kedarnath ಕೇದರನಾಥ

ಸಾರಾ ಅಲಿಖಾನ್ 'ಕೇದಾರನಾಥ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಅವರು ಪ್ರೀತಿ, ಕುಟುಂಬ ಮತ್ತು ಸನ್ನಿವೇಶಗಳ ನಡುವೆ ಸಿಲುಕುವ 'ಮುಕ್ಕು' ಎಂಬ ಚೈತನ್ಯದ ಯುವತಿಯ ಪಾತ್ರವನ್ನು ನಿರ್ವಹಿಸಿದರು. ಅವರ ನಟನೆ ಚಿತ್ರಕ್ಕೆ ಹೊಸ ಹುರುಪು ನೀಡಿತು. ಈ ಚಿತ್ರವು ಸಾರಾ ಅವರ ಸಹಜ ನಟನೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿತು ಮತ್ತು ಅವರ ಸಿನಿ ಪಯಣಕ್ಕೆ ಉತ್ತಮ ಆರಂಭ ನೀಡಿತು.

38
Simmba ಸಿಂಭಾ

'ಸಿಂಬಾ' ಚಿತ್ರದಲ್ಲಿ ಸಾರಾ 'ಶಗುನ್' ಪಾತ್ರದ ಮೂಲಕ ಪಕ್ಕಾ ಕಮರ್ಷಿಯಲ್ ನಾಯಕಿಯಾದರು. ತಮ್ಮ ಸಹಜ ಸೌಂದರ್ಯ, ಚುರುಕು ಅಭಿನಯ ತೆರೆಯ ಮೇಲಿನ ಪಾತ್ರಕ್ಕೆ ಜೀವ ತುಂಬಿದರು. ಅವರ ನಟನೆಯಿಂದ ಚಿತ್ರದ ಗೆಲುವಿನ ಪ್ಲಸ್ ಪಾಯಿಂಟ್ ಆಗಿದ್ದು ಹೌದು. ಈ ಚಿತ್ರದ ಮೂಲಕ ಸಾರಾ ತಮ್ಮ ಬಹುಮುಖ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

48
Atrangi Re

'ಅತ್ರಂಗಿ ರೇ' ಚಿತ್ರದಲ್ಲಿ ಸಾರಾ 'ರಿಂಕು' ಎಂಬ ಸವಾಲಿನ ಪಾತ್ರ ಮಾಡಿದರು. ಈ ಪಾತ್ರವು ಹೆಣ್ಣಿನ ವಿಚಿತ್ರ ನಡವಳಿಕೆ, ಎಮೋಷನಲ್, ಸೂಕ್ಷ್ಮ ಸ್ವಭಾವದ ಪಾತ್ರವದು.. ಅವರ ಮುಕ್ತ ನಟನೆಯು ಅವರನ್ನು ಸಾಂಪ್ರದಾಯಿಕ ನಾಯಕಿಯ ಚೌಕಟ್ಟಿನಿಂದ ಹೊರತಂದು, ಹಲವು ಭಾವನಾತ್ಮಕ ಪಾತ್ರಗಳು ಕಲಿಯಲು ಅವಕಾಶ ಮಾಡಿಕೊಟ್ಟಿತು. ಇದು ಅವರ ಪ್ರಯೋಗಶೀಲತೆ ಪರಿಚಯಿಸಿತು.

58
Zara Hatke Zara Bachke

'ಜರಾ ಹಟ್ಕೆ ಜರಾ ಬಚ್ಕೆ' ಚಿತ್ರದಲ್ಲಿ ಸಾರಾ 'ಸೋಮ್ಯಾ' ಪಾತ್ರದ ಮೂಲಕ ಆಧುನಿಕ ಮದುವೆಯ ಸಂಕೀರ್ಣತೆಗಳನ್ನ ತೆರೆದಿಟ್ಟರು. ಈ ಪಾತ್ರದಲ್ಲಿ ಅವರು ಹಾಸ್ಯ, ಫೀಲಿಂಗ್ದೈ, ನಂದಿನ ಜೀವನದ ವಾಸ್ತವ ಘಟನೆಗಳನ್ನು ಸಹಜವಾಗಿ ಅಭಿನಯಿಸಿದರು. ವಿಕ್ಕಿ ಕೌಶಲ್ ಜೊತೆಗಿನ ಅವರ ಕೆಮಿಸ್ಟ್ರಿ ಮತ್ತು ಹಾಸ್ಯದಿಂದ ಗಂಭೀರ ದೃಶ್ಯಗಳಿಗೆ ಸುಲಭವಾಗಿ ಬದಲಾಗುವ ಅವರ ಸಾಮರ್ಥ್ಯ ಚಿತ್ರದ ಯಶಸ್ಸಿಗೆ ಕಾರಣವಾಯಿತು.

68
Metro... In Dino

'ಮೆಟ್ರೋ... ಇನ್ ದಿನೋ' ಚಿತ್ರದ ಮೂಲಕ ಸಾರಾ ಆಧುನಿಕ ಸಂಬಂಧಗಳು ಮತ್ತು ಎಮೋಷನಲ್ ಅಟ್ಯಾಚ್‌ಮೆಂಟ್ ಸುತ್ತ ಹೆಣೆದ ಕಥೆಯ ಭಾಗವಾದರು. ಈ ಚಿತ್ರವು ಅವರಿಗೆ ವಿಭಿನ್ನ ಅನುಭವ ನೀಡಿತು. ಜೊತೆಗೆ, ಹೆಚ್ಚು ಸೂಕ್ಷ್ಮ ಮತ್ತು ತೀವ್ರವಾದ, ದೊಡ್ಡ ಪಾತ್ರಗಳತ್ತ ಅವರ ಬೆಳವಣಿಗೆಯನ್ನು ಮುಂದುವರಿಸಿತು.

78
Pati Patni Aur Woh Do

ಅಲ್ಲಿನ ಅನುಭವಗಳೊಂದಿಗೆ ಈಗ ಸಾರಾ ಅಲಿಖಾನ್ ಅವರು 'ಪತಿ ಪತ್ನಿ ಔರ್ ವೋ ದೋ' ಚಿತ್ರದೊಂದಿಗೆ ಸಾರಾ ಹೊಸ ಪಾತ್ರಗಳು ಮತ್ತು ಕಥೆಗಳೊಂದಿಗೆ ಪ್ರಯೋಗ ಮುಂದುವರಿಸಿದ್ದಾರೆ. ಈ ಚಿತ್ರವು ಅವರ ಚೈತನ್ಯ, ಕಾಮಿಕ್ ಟೈಮಿಂಗ್ ಮತ್ತು ಭಾವನೆಗಳನ್ನು ಹೊಸ ಕಥೆಯಲ್ಲಿ ತೋರಿಸಲು ಅವರಿಗೆ ಮತ್ತೊಂದು ಅವಕಾಶ ಸಿಕ್ಕಿತು. ಇದು ಅವರ ಸಿನಿ ಪಯಣಕ್ಕೆ ಮತ್ತೊಂದು ಹೊಸ ಅಧ್ಯಾಯ ಸೇರಿಸಿತು

88
A Journey Still Unfolding

ಇಂದು ಸಾರಾ ಅಲಿಖಾನ್ ನಟನೆಯನ್ನು ಮೀರಿ ಬೆಳೆದಿದ್ದಾರೆ. ಅವರ ಸಂವಹನ ಮತ್ತು ಜನರೊಂದಿಗೆ ಬೆರೆಯುವ ಶೈಲಿಯು ಅವರ ಜನಪ್ರಿಯತೆಗೆ ಪ್ರಮುಖ ಕಾರಣವಾಗಿದೆ. ಅವರ ಮುಕ್ತ ಮಾತುಕತೆ, ಸಹಜ ಸಂವಾದಗಳ ಮೂಲಕ ಅವರು ಸಿನಿಮಾಗಳಾಚೆಗೂ ಪ್ರೇಕ್ಷಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. 'ಕೇದಾರನಾಥ'ದ 'ಮುಕ್ಕು' ಪಾತ್ರದಿಂದ ಹಿಡಿದು 'ಪತಿ ಪತ್ನಿ ಔರ್ ವೋ ದೋ' ವರೆಗೆ, ಪ್ರತಿ ಪಾತ್ರವೂ ಅವರ ಬೆಳವಣಿಗೆಗೆ ಹೊಸ ಆಯಾಮ ನೀಡಿದೆ. ಈ ಪಯಣ ಇನ್ನೂ ಮುಗಿದಿಲ್ಲ. ಸಾರಾ ಮುಂದೆ 'ಉಡ್ತಾ ತೀರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಸಿನಿ ಬದುಕಿಗೆ ಮತ್ತೊಂದು ರೋಚಕ ಅಧ್ಯಾಯ ಸೇರಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories