2015ರಲ್ಲಿ 8ನೇ ತರಗತಿಯಲ್ಲಿ ಇದ್ದಾಗ ಯಾವ ಜಾಗದಲ್ಲಿ ನಟ ಸೂರ್ಯರನ್ನು ಭೇಟಿ ಮಾಡಲು ಬಯಸಿ, ಅದು ಆಗದೇ ಇದ್ದಾಗ ಆ ಪುಟ್ಟ ಬಾಲಕಿ ಬೇಸರ ಪಟ್ಟಿದ್ದರೋ, ಇದೀಗ ಅದೇ ಜಾಗದಲ್ಲಿ ಸೂರ್ಯ ಸಿನಿಮಾದ ನಾಯಕಿಯಾಗಿ, ಜೊತೆಯಾಗಿ ಎಂಟ್ರಿ ಕೊಟ್ಟ ನಟಿ ಯಾರು ಗೊತ್ತಾ?
ನಟಿ ಮಮಿತಾ ಬೈಜು ಅವರ ಸಿನಿ ಪಯಣದಲ್ಲಿ ಈಗ ಒಂದು ಸುಂದರ ‘ಫುಲ್ ಸರ್ಕಲ್’ ಕ್ಷಣ ನಡೆದಿದೆ. ತಮಿಳು ನಟ ಸೂರ್ಯ ಅವರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿರುವುದು ಅವರಿಗೆ ಕೇವಲ ಸಿನಿಮಾ ಅವಕಾಶವಲ್ಲ, ಬಾಲ್ಯದ ಒಂದು ಕನಸು ನನಸಾದ ಕ್ಷಣವೂ ಹೌದು.
27
2015ರ ಆ ದಿನ ಇನ್ನೂ ನೆನಪಿದೆ!
ಮಮಿತಾ ಬೈಜು 8ನೇ ತರಗತಿಯಲ್ಲಿ ಓದುತ್ತಿದ್ದಾಗ ಸೂರ್ಯ ಕೇರಳದ ಲುಲು ಮಾಲ್‌ಗೆ ಕಾರ್ಯಕ್ರಮವೊಂದಕ್ಕಾಗಿ ಬಂದಿದ್ದರು. ಆಗ ಸೂರ್ಯರನ್ನು ಒಮ್ಮೆ ಭೇಟಿಯಾಗಬೇಕು ಎಂಬುದು ಪುಟ್ಟ ಮಮಿತಾ ಅವರ ದೊಡ್ಡ ಆಸೆಯಾಗಿತ್ತು.
37
ಆದರೆ ಅಂದು ಸೂರ್ಯರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ
ಸೂರ್ಯರನ್ನು ಹತ್ತಿರ ಹೋಗಿ ಫೋಟೋ ತೆಗೆಸಿಕೊಳ್ಳಬೇಕು ಎಂದು ಮಮಿತಾ ಬಹಳ ಆಸೆಪಟ್ಟಿದ್ದರೂ, ಪೋಷಕರು ಅವರನ್ನು ಕಾರ್ಯಕ್ರಮಕ್ಕೆ ಕರೆದೊಯ್ಯಲು ಒಪ್ಪಲಿಲ್ಲ. ಹೀಗಾಗಿ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗುವ ಅವಕಾಶ ಅವರ ಕೈತಪ್ಪಿತು.
ಮಮಿತಾ ಅವರ ಸಹೋದರ ಹಾಗೂ ಸ್ನೇಹಿತರು ಸೂರ್ಯರನ್ನು ಭೇಟಿಯಾಗಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಆ ಫೋಟೋವನ್ನು ಮಮಿತಾಗೆ ತೋರಿಸಿದಾಗ, ತಾನು ಮಾತ್ರ ಸೂರ್ಯರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂಬ ಬೇಸರ ಮತ್ತಷ್ಟು ಹೆಚ್ಚಾಗಿತ್ತು.
57
ವರ್ಷಗಳು ಕಳೆದವು… ಕಥೆ ಬದಲಾಯಿತು!
ಕಾಲ ಬದಲಾಯಿತು. ಆ ಪುಟ್ಟ ಫ್ಯಾನ್ ಬೆಳೆದು ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಬಾಲ್ಯದ ಆ ನೆನಪು ಮಾತ್ರ ಮಮಿತಾ ಅವರ ಮನಸ್ಸಿನಲ್ಲಿ ಉಳಿದಿತ್ತು. ಮಲಯಾಲಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಮಮಿತಾ, ಈಗ ಸ್ಟಾರ್ ನಟರೊಂದಿಗೆ ನಟಿಸುತ್ತಿದ್ದಾರೆ.
67
ಮತ್ತೆ ಅದೇ ಲುಲು ಮಾಲ್’ನಲ್ಲಿ ಸೂರ್ಯನಿಗೆ ನಾಯಕಿಯಾಗಿ ಎಂಟ್ರಿ!
ವರ್ಷಗಳ ನಂತರ ಅದೇ ಲುಲು ಮಾಲ್‌ಗೆ ಮಮಿತಾ ಮತ್ತೆ ಬಂದರು. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿತ್ತು. ಅಂದು ಸೂರ್ಯರನ್ನು ಭೇಟಿಯಾಗಲು ಸಾಧ್ಯವಾಗದ ಬೇಸರಗೊಂಡಿದ್ದ ಹುಡುಗಿ, ಇಂದು ಅವರ ಸಿನಿಮಾದ ನಾಯಕಿಯಾಗಿ ಅವರ ಪಕ್ಕದಲ್ಲೇ ನಿಂತಿದ್ದರು!
77
ಫ್ಯಾನ್‌ನಿಂದ ನಾಯಕಿಯವರೆಗೆ…
ಒಮ್ಮೆ ದೂರದಿಂದ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಬೇಕು ಎಂದು ಹಂಬಲಿಸಿದ್ದ ಮಮಿತಾ, ಇಂದು ಅದೇ ನಟನೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಫ್ಯಾನ್ ಆಗಿ ಆರಂಭವಾದ ಅವರ ಅಭಿಮಾನ, ಇಂದು ಸಿನಿಮಾ ಲೋಕದ ಸುಂದರ ಅಧ್ಯಾಯವಾಗಿ ಬದಲಾಗಿದೆ. 2015ರಲ್ಲಿ ಅಪೂರ್ಣವಾಗಿದ್ದ ಆ ಭೇಟಿಯ ಕ್ಷಣ, ವರ್ಷಗಳ ಬಳಿಕ ನಾಯಕಿಯಾಗುವ ಮೂಲಕ ಪೂರ್ಣಗೊಂಡಿದೆ. ಇದೇ ನಿಜವಾದ ‘ಫುಲ್ ಸರ್ಕಲ್’ ಮೂಮೆಂಟ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.