Sanya Malhotra Steals Sarees: ಸಿನೆಮಾ ಸೆಟ್‌ನಿಂದ ಸೀರೆ ಕದ್ದ ಸಾನ್ಯಾ ಮಲ್ಹೋತ್ರಾ

Published : Dec 28, 2021, 10:06 PM ISTUpdated : Dec 28, 2021, 11:26 PM IST

Sanya Malhotra stole sarees: ಬಾಲಿವುಡ್ ನಟಿ ಶೂಟಿಂಗ್ ಸೆಟ್‌ನಿಂದ ಸೀರೆ ಕದ್ದಿದ್ದಾರೆ. ಹೌದು. ಮೀನಾಕ್ಷಿ ಸುಂದರೇಶ್ವರ್ ಸಿನಿಮಾದ ಸೆಟ್‌ನಿಂದ ಸೀರೆ ಕದ್ದಿದ್ದಾರೆ ಸಾನ್ಯಾ

PREV
18
Sanya Malhotra Steals Sarees: ಸಿನೆಮಾ ಸೆಟ್‌ನಿಂದ ಸೀರೆ ಕದ್ದ ಸಾನ್ಯಾ ಮಲ್ಹೋತ್ರಾ

ಸಾನ್ಯಾ ಮಲ್ಹೋತ್ರಾ ನಟನೆಯ ಮೀನಾಕ್ಷಿ ಸುಂದರೇಶ್ವರ್ ಸಿನಿಮಾದಲ್ಲಿ ನಟಿ ಚಂದದ ಕಾಟನ್ ಸಿಲ್ಕ್ ಸೀರೆಗಳಲ್ಲಿ ಮಿಂಚಿದ್ದರು. ಅದ್ಭುತ ಸೀರೆ ಕಲೆಕ್ಷನ್ ಈ ಸಿನಿಮಾದಲ್ಲಿದೆ. ತಮಿಳು ಸೊಸೆಯ ಪಾತ್ರದಲ್ಲಿ ಸಾನ್ಯಾ ರೇಶ್ಮೆ ಸೀರೆಗಳಲ್ಲಿ ಸಖತ್ ಆಗಿ ಕಾಣಿಸಿದ್ದಾರೆ.

28

ಸಿನಿಮಾ ಪೂರ್ತಿ ಬಹುತೇಕ ಸೀರೆಯಲ್ಲಿಯೇ ನಟಿಸಿದ ನಟಿ ಶೂಟಿಂಗ್ ಸಂದರ್ಭವೇ ಸೀರೆಯ ಬಗ್ಗೆ ಲವ್ ಆಗಿರುವುದನ್ನು ಒಪ್ಪಿಕೊಂಡಿದ್ದಾರೆ.

38

ಸಿನಿಮಾದಿಂದ ಸೀರೆ ಬಗ್ಗೆಯೇ ವಿಶೇಷ ಪ್ರೀತಿ ಬೆಳೆಸಿಕೊಂಡ ನಟಿ ಸೀರೆಯುಡುವುದನ್ನು ಇಷ್ಟಪಡಲು ಆರಂಭಿಸಿದ್ದಾರೆ. ಈ ಸೀರೆ ಪ್ರೀತಿಯಿಂದ ಸಿನಿಮಾ ಸೆಟ್‌ನಿಂದ ಕೆಲವು ಸೀರೆಗಳನ್ನು ಕದ್ದಿರುವುದಾಗಿ ನಟಿ ರಿವೀಲ್ ಮಾಡಿದ್ದಾರೆ.

48

2021ರ ಉತ್ತಮ ನೆನಪುಗಳನ್ನು ಹಂಚಿಕೊಂಡ ನಟಿ, ಮೀನಾಕ್ಷಿ ಸುಂದರೇಶ್ವರ್ ಸಿನಿಮಾವನ್ನು ಲಾಕ್‌ಡೌನ್ ನಂತರ ಶೂಟ್ ಮಾಡಿದೆವು. ನಾನು ಸೆಟ್‌ಗೆ ಮರಳಲು ಕ್ಯಾಮೆರಾ ಮುಂದೆ ಬರಲು ಉತ್ಸುಕಳಾಗಿದ್ದೆ.

58

ನನಗೆ ಮೀನಾಕ್ಷಿಯಾಗಿ ರೆಡಿಯಾಗೋದೇ ಒಂದು ಖುಷಿಯಾಗಿತ್ತು. ನನ್ನಲ್ಲಿ ಆ ಸೀರೆಗಳು ಇನ್ನೂ ಇವೆ. ನಾನವುಗಳನ್ನು ಸೆಟ್‌ನಿಂದ ಕದ್ದಿದ್ದೇನೆ. ಅದರಲ್ಲಿ ಒಂದನ್ನು ನನ್ನ ಫ್ರೆಂಡ್‌ನ ಮದುವೆಗೂ ಉಟ್ಟಿದ್ದೇನೆ ಎಂದಿದ್ದಾರೆ ಸಾನ್ಯಾ.

68

ಮದುರೈನ ಇಂಡಿಪೆಂಡೆಂಟ್ ಹುಡುಗಿ ಮೀನಾಕ್ಷಿಯ ಪಾತ್ರದಲ್ಲಿ ಕಾಣಿಸಿಕೊಂಡ ಸಾನ್ಯಾ ಜೊತೆ ನಟ ಅಭಿಮನ್ಯು ದಸ್ಸಾನಿ ಪತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

78

ಹೊಸದಾಗಿ ಮದುವೆಯಾಗಿ ಲಾಂಗ್ ಡಿಸ್ಟೇಷನ್ ರಿಲೇಷನ್‌ಶಿಪ್‌ನಲ್ಲಿ ಅವರು ಅನುಭವಿಸುವ ನೋವಿನ ಕುರಿತಾಗಿದೆ ಸಿನಿಮಾ. ವಿವೇಕ್ ಸೋನಿ ಬರೆದು ನಿರ್ದೇಶಿಸಿದ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿತ್ತು.

88

ಅವರು ಈ ಪ್ರಾಜೆಕ್ಟ್ ಏಕೆ ಕೈಗೆತ್ತಿಕೊಂಡರು ಎಂಬುದರ ಬಗ್ಗೆ ಮಾತನಾಡಿ, ಇದು ನನಗೆ ಮೊದಲ ನೋಟದಲ್ಲೇ ಇಷ್ಟವಾಗಿತ್ತು. ನಾನು ಮೊದಲು ಸ್ಕ್ರಿಪ್ಟ್ ಅನ್ನು ಕೇಳಿದಾಗ, ನನಗೆ ಅದರೊಂದಿಗೆ ಸಂಬಂಧ ಇದೆ ಅನಿಸಿತು. ಒಬ್ಬ ಪ್ರೇಕ್ಷಕಳಾಗಿ ನಾನು ಸರಳವಾದ ಪ್ರೇಮಕಥೆಯನ್ನು ವೀಕ್ಷಿಸಲು ಹಂಬಲಿಸುತ್ತಿದ್ದೆ, ಆ ಪಾತ್ರ ಮತ್ತು ಸ್ಕ್ರಿಪ್ಟ್‌ಗೆ ನಾನು ಆಕರ್ಷಿತಳಾಗಿದ್ದೇನೆ ಎಂದಿದ್ದಾರೆ.

Read more Photos on
click me!

Recommended Stories