Published : Dec 28, 2021, 10:00 PM ISTUpdated : Dec 28, 2021, 10:06 PM IST
ಮಿಸ್ ಯುನಿವರ್ಸ್ ( Miss Universe) ಹರ್ನಾಜ್ ಕೌರ್ ಸಂಧು (Harnaaz Sandhu) ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದು ನಾನು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಬಯೋಪಿಕ್ ಮಾಡಲು ಆಸೆಪಡುತ್ತೇನೆ ಎಂದಿದ್ದಾರೆ. ಪ್ರಿಯಾಂಕಾ ನನ್ನ ಜೀವನದ ಮೇಲೆ ಸಾಕಷ್ಟು ಪರಿಣಾಂ ಬೀರಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಹರ್ನಾಜ್ ಕೌರ್ ಸಂಧು ಅವರು ಅಪ್ರತಿಮ ಸುಂದರಿಯಾಗಿ ಹೊರಹೊಮ್ಮಿದಾಗ ಪ್ರಿಯಾಂಕಾ ಚೋಪ್ರಾ ಸಹ ಅವರನ್ನುಅಭಿನಂದಿಸಿದ್ದರು. 70 ನೇ ಮಿಸ್ ಯುನಿವರ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಹರ್ನಾಜ್ ಭುವನ ಸುಂದರಿಯಾಗಿ ಹೊರಹೊಮ್ಮಿದ್ದರು.
ಲಾರಾ ದತ್ತಾ ಸಹ 2000ನೇ ಇಸವಿಯಲ್ಲಿ ಭುವನ ಸುಂದರಿಯಾಗಿದ್ದರು. ಇದಾದ ನಂತರ ಆ ಗೌರವವನ್ನು ಮತ್ತೆ ಭಾರತದಕ್ಕೆ ಹರ್ನಾಜ್ ತಂದು ಕೊಟ್ಟರು.
36
ಸಂದರ್ಶನವೊಂದರಲ್ಲಿ ಹರ್ನಾಜ್ ಅವರಿಗೆ ನೀವು ಯಾವ ಸೆಲೆಬ್ರಿಟಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ಬಯಸುತ್ತೀರಿ ಎಂಬ ಪ್ರಶ್ನೆ ಕೇಳಿಬಂತು. ಆಗ ಹರ್ನಾಜ್ ಒಂದು ಕ್ಷಣವೂ ಯೋಚನೆ ಮಾಡದೆ ಪ್ರಿಯಾಂಕಾ ಚೋಪ್ರಾ ಎಂದು ಹೇಳಿದರು.
46
ಆಕೆ ಬೆಳೆದು ಬಂದ ರೀತಿಯೇ ಒಂದು ಸ್ಫೂರ್ತಿದಾಯಕ ಕತೆ. ಪ್ರತಿಯೊಬ್ಬರ ಜೀವನಕ್ಕೂ ಪ್ರಿಯಾಂಕಾ ಜೀವನ ಆದರ್ಶವಾಗಿ ನಿಲ್ಲುತ್ತದೆ ಎಂದು ಹೇಳಿದರು.
56
ಮಿಸ್ ಯುನಿವರ್ಸ್ ಗೆದ್ದು ಸಂಭ್ರಮದಲ್ಲಿದ್ದಾಗಲೂ ಹರ್ನಾಜ್ ಪ್ರಿಯಾಂಕಾ ಅವರ ಹೆಸರನ್ನು ಮತ್ತೆ ಮತ್ತೆ ಉಲ್ಲೇಖಿಸಿದ್ದರು. ನನ್ನ ಅಚ್ಚುಮೆಚ್ಚಿನ ತಾರೆ ಎಂದು ಹೇಳಿದ್ದರು.
66
ಮದುವೆಯ ನಂತರ ಹಾಲಿವುಡ್ ಅಂಗಳದಲ್ಲಿ ಕಾಣಿಸಿಕೊಳ್ಳುತ್ತಿರುವ ಪ್ರಿಯಾಂಕಾ ಚೋಪ್ರಾ ಗಂಡ ನಿಕ್ ಜೋನಾಸ್ ಹೆಸರನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಕೈಬಿಟ್ಟು ಸುದ್ದಿಯಾಗಿದ್ದರು. ಇಬ್ಬರ ನಡುವೆ ವಿರಸ ಕಾಣಿಸಿಕೊಂಡಿದೆ ಎಂದು ಹೇಳಲಾಗಿತ್ತು. ನಂತರ ಈ ವದಂತಿಗಳಿಗೆ ತೆರೆ ಬಿದ್ದಿತ್ತು.