ಸಂಜಯ್ ದತ್ ಈ ಮಾತನ್ನು 1993 ರಲ್ಲಿ ಹಂಚಿಕೊಂಡಿದ್ದರು. ಸಂಜಯ್ ದತ್ ಮತ್ತು ಐಶ್ವರ್ಯಾ ರೈ ಪತ್ರಿಕೆಯ ಮುಖಪುಟವೊಂದಕ್ಕೆಶೂಟ್ ಮಾಡಬೇಕಾಗಿತ್ತು.
undefined
ಆ ಸಮಯದಲ್ಲಿ ಐಶ್ವರ್ಯಾ ಇನ್ನೂ ಸಿನಿಮಾಕ್ಕೆ ಬಂದಿರಲಿಲ್ಲ. ಆಕೆ ಕೇವಲ ಮಾಡೆಲಿಂಗ್ ಹಾಗೂ ಕೆಲವು ಆಡ್‌ಗಳಲ್ಲಿ ಕೆಲಸ ಮಾಡುತ್ತಿದ್ದಳು.
undefined
ಕೋಲ್ಡ್ ಡ್ರಿಂಕ್ ಜಾಹೀರಾತಿನಲ್ಲಿ ಐಶ್ವರ್ಯಾಳನ್ನು ನೋಡಿದ ನಂತರ ಪ್ರಜ್ಞೆ ತಪ್ಪಿದೆ ಎಂದು ಸಂಜಯ್ ದತ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
undefined
ಐಶ್ವರ್ಯಾಳನ್ನು ಮೊದಲ ಬಾರಿಗೆ ನೋಡಿದಾಗ ಅವರು ದಿಗ್ಭ್ರಮೆಗೊಂಡು 'ಈ ಸುಂದರ ಹುಡುಗಿ ಯಾರು? ಎಂದು ಕೇಳಿದರಂತೆ.
undefined
ಆದರೆ, ಸಂಜಯ್ ದತ್ ಸಹೋದರಿಯರು ಐಶ್ವರ್ಯದಿಂದ ದೂರವಿರಲು ಸ್ಟ್ರಿಕ್ಟ್ ವಾರ್ನ್ ಮಾಡಿದರು.
undefined
ವಾಸ್ತವವಾಗಿ, ಆ ಹೊತ್ತಿಗೆ ಸಂಜು ಬಾಬಾ ಇಮೇಜ್ ಬ್ಯಾಡ್ ಬಾಯ್ ಆಗಿ ಮಾರ್ಪಟ್ಟಿತ್ತು ಮತ್ತು ಅವರ ಆಫೇರ್ಸ್ಕಥೆಗಳನ್ನು ಪ್ರತಿಯೊಬ್ಬರೂ ತಿಳಿದಿದ್ದರು.
undefined
'ನನ್ನ ಸಹೋದರಿಯರು ಐಶ್ವರ್ಯಾಳನ್ನು ತುಂಬಾ ಇಷ್ಷಪಡುತ್ತಾರೆ. ಆಗಲೇ ಆಕೆಯನ್ನು ಭೇಟಿಯಾಗಿದ್ದರು. ಐಶ್ ಅವರಿಗೆ ತುಂಬಾ ಸುಂದರವಾಗಿ ಕಾಣುತ್ತಿದ್ದಳು. ಆಕೆಯನ್ನು ಪಟಾಯಿಸಲು ಪ್ರಯತ್ನಿಸಬೇಡ. ಅವಳ ಫೋನ್ ನಂಬರ್ ಕೇಳಬೇಡ ಅಥವಾ ಹೂಗಳನ್ನು ಕಳುಹಿಸುಬೇಡ ಎಂದು ಸಹೋದರಿಯರು ಸಂಜಯ್‌ಗೆ ಎಚ್ಚರಿಸಿದ್ದರು' ಎಂದು ಸಂಜಯ್ ದತ್ ಹೇಳಿದರು
undefined
ಅಂದಹಾಗೆ, 'ಐಶ್ವರ್ಯಾ ಚಿತ್ರಗಳಿಗೆ ಬಂದರೆ ಆಕೆಯ ಸೌಂದರ್ಯ ಕಳೆದುಹೋಗುತ್ತದೆ. ಅವರ ತರ್ಕವೆಂದರೆ ನೀವು ಗ್ಲಾಮರ್ ಉದ್ಯಮವನ್ನು ಪ್ರವೇಶಿಸಿದರೆ,ಎಲ್ಲವೂ ಬದಲಾಗಲು ಪ್ರಾರಂಭವಾಗುತ್ತದೆ, ನೀವು ಪ್ರಬುದ್ಧರಾಗಲು ಪ್ರಾರಂಭಿಸುತ್ತೀರಿ ಮತ್ತು ಮುಗ್ಧತೆಯನ್ನು ಕಳೆದುಕೊಳ್ಳುತ್ತೀರಿ' ಎಂದು ಕಿವಿಮಾತು ಹೇಳಿದ್ದರಂತೆಸಂಜಯ್.
undefined
ಸಂಜಯ್ ದತ್ ಐಶ್ವರ್ಯಾ ಅವರನ್ನು ಹೊಗಳುತ್ತಾ ಅವರು ರಸ್ತೆಯ ಮೇಲೆ ನಿಂತರೆ, ಎಲ್ಲಾ ವಾಹನಗಳು ಆಕೆಗಾಗಿ ನಿಲ್ಲುತ್ತವೆ. ಅದೇ ಸಮಯದಲ್ಲಿ, ಸ್ವತಃ ನಟಬಂದು ನಿಂತರೆ, ಜನರು ಅವರ ಮೇಲೆ ಗಾಡಿಯನ್ನು ಹತ್ತಿಸುತ್ತಾರೆ ಎಂದಿದ್ದರು, ಸಂಜಯ್
undefined
ಈ ಘಟನೆಯ ಒಂದು ದಶಕದ ನಂತರ, ಸಂಜಯ್ ದತ್ ಮತ್ತು ಐಶ್ವರ್ಯಾ ರೈ 'ಶಬ್ಡ್' ಮತ್ತು 'ಹಮ್ ಕಿಸಿ ಕಹಿನ್ ನಹಿನ್' ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು.
undefined