ಕಬೀರ್ ಸಿಂಗ್ ಸ್ಟೈಲಲ್ಲೇ ಸಹ ನಟಿ ಕಿಯಾರಾ ಹುಟ್ಟು ಹಬ್ಬದ ಶುಭ ಕೋರಿದ ಶಾಹೀದ್
First Published | Jul 31, 2020, 7:45 PM ISTಶಾಹಿದ್ ಕಪೂರ್ ಅಭಿನಯದ ಚಿತ್ರ 'ಕಬೀರ್ ಸಿಂಗ್' ಫೇಮ್‌ನ ನಟಿ ಕಿಯಾರಾ ಅಡ್ವಾಣಿ 28ನೇ ಹುಟ್ಟುಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ಜುಲೈ 31, 1992 ರಂದು ಮುಂಬೈನಲ್ಲಿ ಜನಿಸಿದ ಕಿಯಾರಾಗೆ ಯಾವುದೇ ಸಿನಿಮಾ ಹಿನ್ನೆಲೆ ಇರಲಿಲ್ಲ. ಮೊದಲು ಅವರ ತಂದೆಗೆ ಮಗಳು ಚಲನಚಿತ್ರಗಳಲ್ಲಿ ಕೆಲಸ ಮಾಡುವುದು ಇಷ್ಟಪಡಲಿಲ್ಲ, ಒಂದು ದಿನ ಅಮೀರ್ ಖಾನ್‌ರ '3 ಈಡಿಯಟ್ಸ್' ಸಿನಿಮಾ ನೋಡಿ ತಮ್ಮ ಮಗಳಿಗೆ ನಟನೆಯನ್ನು ಕೆರಿಯರ್ ಮಾಡಿಕೊಳ್ಳಲು ಅವಕಾಶ ನೀಡಿದರು. ಆದರೆ ಬಾಲಿವುಡ್‌ಗೆ ಬರುವ ಮೊದಲು ಬೇಬಿ ಕ್ರೀಚ್ ನಡೆಸುತ್ತಿದ್ದರು. ಇಂಥ ಪ್ರತಿಭಾನ್ವಿತ ನಟಿಗೆ ಶಾಹೀದ್ ಕಪೂರ್, ರಣವೀರ್ ಸಿಂಗ್ ಸೇರಿ ಬಾಲಿವುಡ್ ಸೆಲೆಬ್ರಿಟಿಗಳು ವಿಭಿನ್ನವಾಗಿ ವಿಶ್ ಮಾಡಿದ್ದಾರೆ.