Sanjana Anand: ಟಾಲಿವುಡ್‌ಗೆ ಎಂಟ್ರಿ ಕೊಟ್ಟ 'ಸಲಗ' ನಾಯಕಿ ಸಂಜನಾ!

Suvarna News   | Asianet News
Published : Mar 09, 2022, 12:28 PM IST

'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಸಂಜನಾ ಆನಂದ್, ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ನಿರ್ದೇಶಕರ ಜೊತೆ ಹೊಸ ಹೊಸ ಚಿತ್ರಗಳಿಗೆ ಸಹಿ ಮಾಡಿದ್ದು, ಇದೀಗ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.

PREV
15
Sanjana Anand: ಟಾಲಿವುಡ್‌ಗೆ ಎಂಟ್ರಿ ಕೊಟ್ಟ 'ಸಲಗ' ನಾಯಕಿ ಸಂಜನಾ!

'ಸಲಗ' (Salaga) ಖ್ಯಾತಿಯ ನಟಿ ಸಂಜನಾ ಆನಂದ್‌ (Sanjana Anand) ಇದೀಗ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಆ ಚಿತ್ರದ ಹೆಸರು 'ನೇನು ಮೀಕು ಬಾಗಾ ಕವಾಲ್ಸಿನಿವಾಡಿನಿ' (Nenu Meeku Baga Kavalsina Vaadini). ಈ ಮೂಲಕ ಮತ್ತೊಬ್ಬ ಕನ್ನಡ ನಟಿ ಟಾಲಿವುಡ್‌ಗೆ (Tollywood) ಕಾಲಿಟ್ಟಂತಾಗಿದೆ.

25

ಚಿತ್ರದಲ್ಲಿ ಸಂಜನಾ ಅವರದು ತೇಜು ಎಂಬ ಪಾತ್ರ. ಈ ಚಿತ್ರದ ಸಂಜನಾ ಅವರ ಫಸ್ಟ್‌ ಲುಕ್‌ (Firstlook) ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರದ ಬಗ್ಗೆ ವಿವರ ನೀಡಿದ ಸಂಜನಾ, ಈ ಸಿನಿಮಾ ಕಂಪ್ಲೀಟ್‌ ಲವ್‌ಸ್ಟೋರಿ. ಎರಡು ಶೇಡ್‌ನಲ್ಲಿ ನನ್ನ ಪಾತ್ರವಿದೆ. ಚಿತ್ರದ ಕೊನೆಯ ಭಾಗದ ಶೂಟಿಂಗ್‌ (Shooting) ನಡೆಯುತ್ತಿದೆ. 

35

'ಎಸ್‌ಆರ್‌ ಕಲ್ಯಾಣ ಮಂಟಪಂ' (SR Kalyana Mandapam) ಅನ್ನೋ ಚಿತ್ರದಲ್ಲಿ ನಟಿಸಿದ್ದ ಕಿರಣ್‌ ಅಬ್ಬಾವರಂ (Kiran Abbavaram) ಈ ಸಿನಿಮಾದ ಹೀರೋ. ಸಿನಿಮಾದುದ್ದಕ್ಕೂ ಟ್ವಿಸ್ಟ್‌ ಮತ್ತು ಟನ್ಸ್‌ರ್‍ ಇವೆ. ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕ ಕೋಡಿ ರಾಮಕೃಷ್ಣ ಅವರ ಮಗಳು ದಿವ್ಯಾ ದೀಪ್ತಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎನ್ನುತ್ತಾರೆ.

45

'ನಟನೆಗೆ ಆದ್ಯತೆ ಇರುವ ಚಿತ್ರಗಳಲ್ಲಿ ನಟಿಸಬೇಕು ಎಂಬುದು ನನ್ನಾಸೆ. ಸದ್ಯ ಅನೇಕ ಕನ್ನಡ, ತಮಿಳು, ತೆಲುಗು ಕತೆಗಳು ಬರುತ್ತಿವೆ. ಏಪ್ರಿಲ್‌ನಲ್ಲಿ ಒಂದು ಕನ್ನಡ ಸಿನಿಮಾ ಫೈನಲ್‌ ಆಗುವ ಸಾಧ್ಯತೆ ಇದೆ' ಎಂದೂ ಸಂಜನಾ ತಿಳಿಸಿದ್ದಾರೆ.

55

ಇನ್ನು ಸಂಜನಾ, ನಿರೂಪಕಿ ಹಾಗೂ ನಟಿ ಶೀತಲ್‌ ಶೆಟ್ಟಿ (Sheetal Shetty) ಮೊದಲ ಬಾರಿಗೆ ನಿರ್ದೇಶನ ಮಾಡಿರುವ 'ವಿಂಡೋಸೀಟ್‌' (Window Seat) ಸಿನಿಮಾದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದು,  'ರಂಗಿತರಂಗ' (Rangitaranga) ಖ್ಯಾತಿಯ ನಿರೂಪ್ ಭಂಡಾರಿ (Nirup Bhandari) ಈ ಚಿತ್ರಕ್ಕೆ ನಾಯಕನಾಗಿದ್ದಾರೆ. 

Read more Photos on
click me!

Recommended Stories