ಸ್ಪೇನ್‌ನಲ್ಲಿ ದೀಪಿಕಾ, ತಮ್ಮ ಹೊಸ ಮನೆ ಫೋಟೋ ಹಂಚಿಕೊಂಡ ನಟಿ!

First Published | Mar 8, 2022, 5:12 PM IST

ಪ್ರಸ್ತುತ ದೀಪಿಕಾ ಪಡುಕೋಣೆ (Deepika Padukone) ಅವರು ಸ್ಪೇನ್‌ನಲ್ಲಿದ್ದಾರೆ. ನಟಿ ದೀಪಿಕಾ ಪಡುಕೋಣೆ ಶಾರುಖ್‌ ಖಾನ್‌ (Shahrukh Khan) ಜೊತೆಯ ತಮ್ಮ ಮುಂದಿನ ಸಿನಿಮಾ ಪಠಾಣ್‌ (Pathaan) ಶೂಟಿಂಗ್‌ಗಾಗಿ ಅಲ್ಲಿಗೆ ತೆರಳಿದ್ದಾರೆ. ಈ ಸಮಯದ ಕೆಲವು ಫೋಟೋಗಳನ್ನು ದೀಪಿಕಾ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
 

ದೀಪಿಕಾ ಹೊಸ ಮನೆ

ಕಳೆದ ವಾರ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮುಂಬೈ ವಿಮಾನ ನಿಲ್ದಾಣದಲ್ಲಿ ಟರ್ಟಲ್‌ನೆಕ್ ಸ್ವೆಟರ್ ಮತ್ತು ಕೆಂಪು ಕ್ಯಾಪ್‌ ಜೊತೆಗೆ ಹೊಳೆಯುವ ಕೆಂಪು ಚರ್ಮದ ಪ್ಯಾಂಟ್‌ನಲ್ಲಿ ಪೋಸ್ ನೀಡಿದ್ದಾರೆ.ದೀಪಿಕಾ ಈ ಔಟ್‌ಫಿಟ್‌ ಜೊತೆ ಎಲೆಕ್ಟ್ರಿಕ್ ಪಿಂಕ್ ಸ್ಟಿಲೆಟ್ಟೊಗಳನ್ನು ಧರಿಸಲು ಆಯ್ಕೆಮಾಡಿಕೊಂಡಿದ್ದರು ಮತ್ತು ಆದಕ್ಕಾಗಿ ಸಾಕಷ್ಟು ಟ್ರೋಲ್‌ ಸಹ ಆಗಿದ್ದಾರೆ.

ಪಠಾಣ್ ಚಿತ್ರೀಕರಣಕ್ಕೆ ಸ್ಫೇನ್‌ಗೆ

ಶಾರುಖ್ ಖಾನ್ ಜೊತೆಗಿನ ಪಠಾಣ್ ಚಿತ್ರೀಕರಣಕ್ಕಾಗಿ ದೀಪಿಕಾ ಪ್ರಸ್ತುತ ಸ್ಪೇನ್‌ನಲ್ಲಿದ್ದಾರೆ ಮತ್ತು ವೀಕೆಂಡ್‌ನಲ್ಲಿ, ದೀಪಿಕಾ ಅವರು ಶೂಟಿಂಗ್‌  ಪ್ರಾರಂಭಿಸುವ ಮೊದಲು ವಿಶ್ರಾಂತಿ ಪಡೆಯುತ್ತಿದ್ದರು.  

Tap to resize

ಫೋಟೋ ಶೇರ್ ಮಾಡಿ ಕೊಂಡ ದೀಪಿಕಾ

ದೀಪಿಕಾ ಭಾನುವಾರ ತನ್ನ Instagram ಸ್ಟೋರಿಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು 'ಎಸ್ಕೇಪ್ ಟೈಮ್' ಎಂದು ಕ್ಯಾಪ್ಷನ್‌ ನೀಡಿದ್ದಾರೆ. ದೀಪಿಕಾ ತಮ್ಮ ವಿಮಾನದಿಂದ ತೆಗೆದ ಫೋಟೋ ಪೋಸ್ಟ್ ಮಾಡಿದ್ದಾರೆ.
 

ಹೊಸ ಮನೆ

ನಟಿ ತಾನು ಉಳಿದುಕೊಂಡಿರುವ ಸ್ಥಳದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು ಆ ಫೋಟೋಗೆ 'ಹೊಸ ಮನೆ' ಎಂದು ಕ್ಯಾಪ್ಷನ್‌ ನೀಡಿದ್ದಾರೆ.  ಆದರೆ ಇದು ತಾತ್ಕಾಲಿವಾಗಿ ಅವರ ಹೊಸ ಮನೆಯಾಗಿದೆ.

ಜನವರಿ 25ಕ್ಕೆ ಪಠಾಣಿ ಚಿತ್ರ ರಿಲೀಸ್

ದೀಪಿಕಾ, ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್‌ ಚಿತ್ರವು ಜನವರಿ 25, 2023 ರಂದು ಬಿಡುಗಡೆಯಾಗಲಿದೆ. ದೀಪಿಕಾ ಜೊತೆಗೆ, ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಮುಂಬೈ ವಿಮಾನ ನಿಲ್ದಾಣದಲ್ಲಿ ಕಳೆದ ವಾರ ಸ್ಪೇನ್‌ಗೆ ತೆರಳಿದ ಫೋಟೋ ವೈರಲ್‌ ಆಗಿತ್ತು. 

ಪ್ರಿಯಾ ರಂಚಲ್ ಸಹ ಸ್ಪೇನ್‌ನಲ್ಲಿ

ಎಸ್‌ ಆರ್‌ ಕೆ ತನ್ನ ಸೆಕ್ಯೂರಿಟಿ ಜೊತೆ ಒಬ್ಬರೇ ಹೊರಟರೆ, ಜಾನ್ ಅಬ್ರಹಾಂ ಮತ್ತು ಪ್ರಿಯಾ ರುಂಚಲ್‌ ಜೊತೆಗೆ ಸ್ಪೇನ್‌ಗೆ ತೆರಳುತ್ತಿರುವುದನ್ನು ಗುರುತಿಸಲಾಯಿತು.

ಪಠಾಣ್ ಟೀಸರ್ ಬಿಡುಗಡೆ

ಕಳೆದ ವಾರ, ದೀಪಿಕಾ ಅವರು ಪಠಾಣ್‌ನ ಟೀಸರ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದರು,ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ, ಪಠಾಣ್  ಆಕ್ಷನ್-ಥ್ರಿಲ್ಲರ್ ಎಂದು ಹೇಳಲಾಗಿದೆ.

Latest Videos

click me!