ವಿಚ್ಛೇದನದ ಬಳಿಕ ಮೊದಲ ಬಾರಿಗೆ ಕಪಿಲ್‌ ಶೋನಲ್ಲಿ ಕಾಣಿಸಿದ ಸಾನಿಯಾ ಮಿರ್ಜಾ, ಫೋಟೋ ವೈರಲ್

First Published | Apr 21, 2024, 5:38 PM IST

ಬಾಲಿವುಡ್‌ ಕಿರುತೆರೆಯಲ್ಲಿ ಕಾಮಿಡಿ ಶೋ ನಡೆಸಿಕೊಡುವ ಕಪಿಲ್ ಶರ್ಮಾ ಅವರ ಶೋನಲ್ಲಿ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಸೋಶಿಯಲ್‌ ಮೀಡಿಯಾ ಇನ್ಸ್ಟಾದಲ್ಲಿ ಹಾಕಿಕೊಂಡಿರುವ ಫೋಟೋದಿಂದ ಈ ವಿಚಾರ ಬಹಿರಂಗವಾಗಿದೆ.
 

ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನ ಸೆಟ್‌ಗಳಲ್ಲಿ ಇರುವ ಫೋಟೋ ಅದಾಗಿದ್ದು, ಸಾನಿಯಾ ಕೆಂಪು ಬಟ್ಟೆಯನ್ನು ಧರಿಸಿ ಸೋಫಾದಲ್ಲಿ ಕುಳಿತಿರುವುದು ಕಂಡುಬಂದಿದೆ. ಫೋಟೋದ ಹಿಂದೆ ನೆಟ್‌ಫ್ಲಿಕ್ಸ್‌ನ ಐಕಾನಿಕ್ 'ಎನ್' ಚಿಹ್ನೆಯ ದಿಂಬು ಕೂಡ ಕಾಣಿಸಿದೆ. 
 

ಕಪಿಲ್ ಶರ್ಮಾ ಅವರ ಕಾಮಿಡಿ ಶೋನಲ್ಲಿ ಸಾನಿಯಾ ಮಿರ್ಜಾ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕ್ರೀಡಾತಾರೆ ತಮ್ಮ ಸಹೋದರಿ ಅನಮ್ ಮಿರ್ಜಾ ಅವರೊಂದಿಗೆ ಕಾರ್ಯಕ್ರಮದಲ್ಲಿ ಕಾಣಿಸಿದ್ದರು. ಇದಕ್ಕೂ ಮೊದಲು ತಮ್ಮ ಗೆಳತಿ ಬಾಲಿವುಡ್‌ ನಿರ್ಮಾಪಕಿ  ಫರಾ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದರು.

Tap to resize

ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಈ ಬಾರಿ ಕಾಣಿಸಿಕೊಂಡಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ  ಪಾಕಿಸ್ತಾನಿ ಕ್ರಿಕೆಟಿಗ ಶೋಯಿಬ್‌ ಮಲ್ಲಿಕ್‌ ಅವರಿಂದ ವಿಚ್ಚೇಧನ ಪಡೆದ ಬಳಿಕ ಮೊದಲ ಬಾರಿ ಸಾನಿಯಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

ಹೀಗಾಗಿ ಈ ಶೋ ನಲ್ಲಿ ಸಾನಿಯಾ ಏನು ಮಾತನಾಡಬಹುದು ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಫೋಟೋವನ್ನು ಸಾನಿಯಾ ಪೋಸ್ಟ್ ಮಾಡುತ್ತಿದ್ದಂತೆಯೇ ವೈರಲ್ ಆಗಿದೆ.

ಸಾನಿಯಾ ಯಾವಾಗಲೂ ತನ್ನ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕರ ಕಣ್ಣುಗಳಿಂದ ದೂರವಿಟ್ಟಿದ್ದಾಳೆ.  ಕ್ರಿಕೆಟಿಗ ವಿಚ್ಛೇದನ ನೀಡಿ  ವರ್ಷಗಳು ಕಳೆದು ಶೋಯೆಬ್  ಮೂರನೇ  ಮದುವೆಯಾಗುವ ಹೊತ್ತಿಗೆ ಸಾನಿಯಾ ವಿಚ್ಛೇದನ  ಬೆಳಕಿಗೆ ಬಂದಿತ್ತು. 

2022ರಿಂದಲೂ ಸಾನಿಯಾ ಶೋಯೆಬ್ ಪ್ರತ್ಯೇಕಗೊಂಡಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಲೇ ಇತ್ತು. ಆದರೆ ಸಾನಿಯಾ ಆಗಲಿ ಶೋಯೆಬ್ ಆಗಲಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರಲಿಲ್ಲ, ಅಲ್ಲದೇ ಇಬ್ಬರೂ ಎಲ್ಲೂ ಜೊತೆಯಾಗಿ ಕಾಣಿಸಿಕೊಳ್ಳದೇ ಹಲವು ವರ್ಷಗಳೇ ಆಗಿತ್ತು.

ದುಬೈನಲ್ಲೇ ವಾಸಿಸುತ್ತಿರುವ ಸಾನಿಯಾ ಮಿರ್ಜಾ ಕುಟುಂಬ ಹೈದರಾಬಾದ್‌ ನಲ್ಲಿದೆ.  ಅವರ ದುಬೈ ಮನೆ ಅತ್ಯಂತ ಐಶಾರಾಮಿಯಾಗಿದೆ.  ಸಾನಿಯಾರ ನಿವ್ವಳ ಮೌಲ್ಯ  ಸರಿ ಸುಮಾರು 216 ಕೋಟಿಯಾಗಿದೆ. ಭಾರತದಲ್ಲೂ ಸಾನಿಯಾ ಆಸ್ತಿ ಹೊಂದಿದ್ದಾರೆ.

Latest Videos

click me!