ಅಭಿ-ಐಶ್ ದಾಂಪತ್ಯ ಬಿರುಕಿಗೆ ಫುಲ್‌ಸ್ಟಾಪ್, 17ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಕ್ಯೂಟ್‌ ಜೋಡಿ

First Published | Apr 21, 2024, 1:44 PM IST

ಮಾಜಿ ವಿಶ್ವಸುಂದರಿ  ಐಶ್ವರ್ಯಾ ರೈ ಬಚ್ಚನ್ ಮತ್ತು ಪತಿ ಅಭಿಷೇಕ್ ಬಚ್ಚನ್ ತಮ್ಮ 17 ನೇ ವಿವಾಹ ವಾರ್ಷಿಕೋತ್ಸವನ್ನು ಆಚರಿಸಿಕೊಂಡಿದ್ದಾರೆ. ಅವರ ಏಕೈಕ ಮಗಳು ಆರಾಧ್ಯ ಈ ಸುಂದರ ಕ್ಷಣಕ್ಕೆ ಸಾಕ್ಷಿಯಾದಳು.

ಐಶ್ವರ್ಯಾ ರೈ ಬಚ್ಚನ್ ಮತ್ತು ಬಿಗ್‌ ಬಿ ಕುಟುಂಬದ ಕುಡಿ ಅಭಿಷೇಕ್ ಬಚ್ಚನ್ ಮದುವೆಯಾಗಿ 17 ವರ್ಷವಾಗಿದೆ. 2007 ಏಪ್ರಿಲ್ 20 ರಂದು  ಇವರಿಬ್ಬರೂ ಮದುವೆಯಾದರು.

ಬಾಲಿವುಡ್‌ ನ ಸುಂದರ ಜೋಡಿ ಬೇರೆಯಾಗಿದೆ. ಜೊತೆಗಿಲ್ಲ ಐಶ್ವರ್ಯಾ ರೈ ಮನೆಬಿಟ್ಟು ಹೋಗಿ ಗಂಡನಿಂದ ದೂರಾಗಿದ್ದಾರೆ ಅಂತೆಲ್ಲ ಸುದ್ದಿ ಹಬ್ಬಿತ್ತು. ಅದಕ್ಕೆ ಈ ಇಬ್ಬರೂ ತಕ್ಕ ಉತ್ತರ ನೀಡಿದ್ದಾರೆ.

Tap to resize

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ತಮ್ಮ ಮದುವೆ ವಾರ್ಷಿಕೋತ್ಸವದ ದಿನ ತಮ್ಮ ಮಗಳೊಂದಿಗೆ  ಫೋಟೋವನ್ನು ಹಂಚಿಕೊಂಡು ಎಲ್ಲಾ ಗಾಸಿಪ್‌ ಸುದ್ದಿಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.

50 ವರ್ಷದ ಐಶ್ವರ್ಯಾ ಮತ್ತು 48 ವರ್ಷದ ಅಭಿಷೇಕ್ ಪ್ರೀತಿಸಿ ಮದುವೆಯಾದ ಬಾಲಿವುಡ್‌ನ ಕ್ಯೂಟ್‌ ಜೋಡಿ. ಮುಂಬೈನಲ್ಲಿ ನಡೆದಿದ್ದ ಈ  ಮದುವೆ ಬಾಲಿವುಡ್ ನ ಅದ್ದೂರಿ ಮದುವೆಗಳಲ್ಲಿ ಒಂದಾಗಿದೆ.

ಭಾರೀ ಭದ್ರತೆಯೊಂದಿಗೆ ಐಶ್ವರ್ಯಾ ಮತ್ತು ಅಭಿಷೇಕ್ ಮದುವೆ ನಡೆದಿತ್ತು.  ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಅಂದಿನ ಕಾಲಕ್ಕೆ ಮದುವೆಗೆ  ಬರೋಬ್ಬರಿ 6 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.

1994ರ  ವಿಶ್ವ ಸುಂದರಿ ಪಟ್ಟ ಪಡೆದ ಐಶ್ವರ್ಯಾ ರೈ 776 ಕೋಟಿ ರೂ ನೆಟ್‌ವರ್ತ್‌ ಹೊಂದಿದ್ದಾರೆ.  ಅಭಿಷೇಕ್‌ ಬಚ್ಚನ್ 280 ಕೋಟಿ  ರೂ ನೆಟ್‌ವರ್ತ್‌ ಹೊಂದಿದ್ದಾರೆ. 

Latest Videos

click me!