ಡಾರ್ಲಿಂಗ್ ಪ್ರಭಾಸ್‌ ಸಿನಿಮಾಗೆ ಕಂಡೀಷನ್ ಹಾಕಿದ ಡೈರೆಕ್ಟರ್ ಸಂದೀಪ್ ರೆಡ್ಡಿ ವಾಂಗಾ! ನಿಂಗಿದು ಬೇಕಿತ್ತಾ?

Published : Feb 08, 2025, 07:37 PM IST

ಸ್ಪಿರಿಟ್‌ ಸಿನಿಮಾ ಅಪ್ಡೇಟ್: ಕೇವಲ 3 ಸಿನಿಮಾಗಳನ್ನು ನಿರ್ದೇಶನ  ಮಾಡಿ ಪ್ಯಾನ್ ಇಂಡಿಯಾ ಲೆವೆಲ್ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ಸಂದೀಪ್‌ ರೆಡ್ಡಿ ವಂಗಾ ಅವರು ಡಾರ್ಲಿಂಗ್ ಪ್ರಭಾಸ್ ಅವರೊಂದಿಗೆ 'ಸ್ಪಿರಿಟ್‌' ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಆರಂಭವಾಗುವುದಕ್ಕೆ ಮುನ್ನವೇ ಪ್ಯಾನ್ ಇಂಡಿಯಾ ನಟ ಪ್ರಭಾಸ್‌ಗೆ ಸಂದೀಪ್‌ ರೆಡ್ಡಿ ವಂಗಾ ಒಂದು ಕಂಡೀಷನ್ ಹಾಕಿದ್ದಾರೆ.

PREV
15
ಡಾರ್ಲಿಂಗ್ ಪ್ರಭಾಸ್‌ ಸಿನಿಮಾಗೆ ಕಂಡೀಷನ್ ಹಾಕಿದ ಡೈರೆಕ್ಟರ್ ಸಂದೀಪ್ ರೆಡ್ಡಿ ವಾಂಗಾ! ನಿಂಗಿದು ಬೇಕಿತ್ತಾ?

ಸಂದೀಪ್‌ ರೆಡ್ಡಿ ವಂಗಾ ಮೂರು ಸಿನಿಮಾಗಳಿಂದಲೇ ಪ್ಯಾನ್‌ ಇಂಡಿಯಾ ಡೈರೆಕ್ಟರ್‌ ಆಗಿ, ಟಾಪ್‌ ಡೈರೆಕ್ಟರ್ಸ್‌ ಲಿಸ್ಟ್‌ ಸೇರಿದ್ದಾರೆ. ಮೂರು ಸಿನಿಮಾಗಳಿಂದ ಈ ಹೆಸರು ಗಳಿಸೋದು ಸಾಮಾನ್ಯದ ಮಾತಲ್ಲ. ಇದು ಅಪರೂಪದ ಸಾಧನೆ. ಹೀಗಾಗಿ ಸಂದೀಪ್‌ ರೆಡ್ಡಿ ವಂಗಾ ಸಿನಿಮಾ ಅಂದ್ರೆ ಕುತೂಹಲ ಇದ್ದೇ ಇರುತ್ತೆ. ಈಗ ಪ್ರಭಾಸ್‌ ಜೊತೆ ಸಿನಿಮಾ ಮಾಡ್ತಿದ್ದಾರೆ. 

25

ಪ್ರಭಾಸ್‌ ತರಹದ ಸ್ಟಾರ್‌ ನಟ ಸಿಕ್ಕಿದರೆ ಸಂದೀಪ್‌ ರೆಡ್ಡಿ ಏನ್‌ ಮಾಡ್ತಾರೋ ಊಹಿಸೋಕೂ ಆಗಲ್ಲ. ಈಗ ಸ್ಪಿರಿಟ್‌ ಸಿನಿಮಾ ಮೇಲೆ ಅದೇ ರೀತಿ ನಿರೀಕ್ಷೆ ಇದೆ. ಚಿತ್ರ ಇನ್ನೂ ಶುರುವಾಗಿಲ್ಲ. ಆದರೆ ನಿರೀಕ್ಷೆ ಮಾತ್ರ ಭಾರಿ ಇದೆ. ಈ ನಡುವೆ ಒಂದು ಇಂಟ್ರೆಸ್ಟಿಂಗ್‌ ಅಪ್ಡೇಟ್‌ ಸಿಕ್ಕಿದೆ. ಪ್ರಭಾಸ್‌ಗೆ ಸಂದೀಪ್‌ ಹಾಕಿರೋ ಕಂಡೀಷನ್‌ ಶಾಕ್‌ ಕೊಡುತ್ತದೆ.
 

35

ಚಿತ್ರ ಶುರುವಾಗೋಕೆ ಇನ್ನೂ ಸಮಯ ಇದೆ. ಈ ವರ್ಷ ದ್ವಿತೀಯಾರ್ಧದಲ್ಲಿ ಶುರುವಾಗುತ್ತೆ. ಪ್ರಭಾಸ್‌ ಅಭಿನಯದ ಸಲಾರ್, ಫೌಜಿ ಚಿತ್ರೀಕರಣ ಮುಗಿಯಬೇಕು. ಆಮೇಲೆ ಸ್ಪಿರಿಟ್‌ ಶುರುವಾಗುತ್ತದೆ. ಪ್ರಭಾಸ್‌ ಸಲಾರ್, ಫೌಜಿ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಎರಡನ್ನೂ ಬ್ಯಾಲೆನ್ಸ್‌ ಮಾಡುತ್ತಿದ್ದಾರೆ. ಆದರೆ ಸ್ಪಿರಿಟ್‌ಗೆ ಅದು ಬೇಡ ಅಂತೆ. ತಮ್ಮ ಸಿನಿಮಾ ಚಿತ್ರೀಕರಣದಲ್ಲಿ ಮಾತ್ರ ಭಾಗವಹಿಸಬೇಕು ಅಂತ ಸಂದೀಪ್‌ ರೆಡ್ಡಿ ಕಂಡೀಷನ್‌ ಹಾಕಿದ್ದಾರಂತೆ.

45

ಸಲಾರ್, ಫೌಜಿ ಮುಗಿದ ಮೇಲೆ ತಮ್ಮ ಸಿನಿಮಾ ಶುರು ಮಾಡೋಣ ಅಂತ ನಿರ್ಧರಿಸಿದ್ದಾರಂತೆ. ಅದಕ್ಕೆ ಒಂದು ತಿಂಗಳು ರೆಸ್ಟ್‌ ತಗೋಬೇಕು ಅಂತ ಪ್ರಭಾಸ್‌ಗೆ ಹೇಳಿದ್ದಾರಂತೆ. ಈ ಎರಡೂ ಸಿನಿಮಾ ಮುಗಿದ ಮೇಲೆ ಪ್ರಭಾಸ್‌ ಒಂದು ತಿಂಗಳು ರೆಸ್ಟ್‌ ತಗೋತಾರೆ. ಆಮೇಲೆ ಸ್ಪಿರಿಟ್‌ ಶುರುವಾಗುತ್ತದೆ.

ಆಮೇಲೆ ಕಂಟಿನ್ಯೂಯಸ್‌ ಆಗಿ ತಮ್ಮ ಸಿನಿಮಾದಲ್ಲಿ ಮಾತ್ರ ಇರಬೇಕು. ಬೇರೆ ಯಾವ ಚಿತ್ರದಲ್ಲೂ ಭಾಗವಹಿಸಬಾರದು ಅಂತ ಸಂದೀಪ್‌ ಹೇಳಿದ್ದಾರಂತೆ. ಡಾರ್ಲಿಂಗ್‌ ಕೂಡ ಅದಕ್ಕೆ ಒಪ್ಪಿದ್ದಾರಂತೆ. ಇದರಲ್ಲಿ ಎಷ್ಟು ನಿಜ ಅಂತ ಗೊತ್ತಾಗಬೇಕಿದೆ. 

55

ಈ ಚಿತ್ರದಲ್ಲಿ ಡಾರ್ಲಿಂಗ್‌ ಪ್ರಭಾಸ್ ಮೂರು ವಿಭಿನ್ನ ಶೇಡ್ಸ್‌ ಇರೋ ಪಾತ್ರದಲ್ಲಿ ಕಾಣಿಸಿಕೊಳ್ತಾರಂತೆ. ಪವರ್‌ಫುಲ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಳ್ತಾರೆ ಅಂತ ಸಂದೀಪ್‌ ಈಗಾಗಲೇ ಹೇಳಿದ್ದಾರೆ. ಅಂತಾರಾಷ್ಟ್ರೀಯ ಡ್ರಗ್ಸ್‌ ಮಾಫಿಯಾ ಕಥೆ ಇರೋ ಸಿನಿಮಾ ಇದು.

ಪ್ರಭಾಸ್‌ ಪಾತ್ರ ಪಾಸಿಟಿವ್‌, ನೆಗೆಟಿವ್‌ ಶೇಡ್ಸ್‌ನಲ್ಲಿ ಇರುತ್ತೆ ಅಂತ ಗೊತ್ತಾಗಿದೆ. ಊಹಿಸಲಾಗದ ಲುಕ್‌ನಲ್ಲಿ ಕಾಣಿಸಿಕೊಳ್ತಾರಂತೆ. ಸಂದೀಪ್‌ ರೆಡ್ಡಿ ವಂಗಾ ಪ್ರಭಾಸ್‌ರನ್ನ ಹೇಗೆ ತೋರಿಸ್ತಾರೆ ಅನ್ನೋದನ್ನ ನೋಡಬೇಕು. ಪ್ರಭಾಸ್‌ ಫ್ಯಾನ್ಸ್‌ಗೆ ಹಬ್ಬನೇ ಸಿಗುತ್ತೆ ಅನ್ನೋದ್ರಲ್ಲಿ ಡೌಟೇ ಇಲ್ಲ.

Read more Photos on
click me!

Recommended Stories