Bollywood Movie ಕೀಥಿ ಗೇಮ್ಸ್ ನಿರ್ದೇಶನದ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸೋಲು ಕಂಡಿದೆ. 12 ಕೋಟಿ ರೂ. ಬಜೆಟ್‌ನ ಈ ಚಿತ್ರ ಕೇವಲ 70 ಸಾವಿರ ರೂ. ಗಳಿಸಿದೆ. ಹೀರೋ ನಟನೆಯಿಂದಾಗಿಯೇ ಸಿನಿಮಾ ಸೋತಿದೆ ಎಂಬ ಟೀಕೆ ಕೇಳಿಬಂದಿದೆ.
ಕೆಲವೊಂದು ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯಲು ಸಂಪೂರ್ಣ ವಿಫಲವಾಗಿ, ಹಾಕಿದ ಬಂಡವಾಳವೂ ನಿರ್ಮಾಪಕರ ಜೇಬು ಸೇರ್ಪಡೆಯಾಗಲ್ಲ. ಕಥೆ, ಸಂಗೀತ, ಕಲಾವಿದರ ನಟನೆ ಸೇರಿದಂತೆ ಹಲವು ವಿಷಯಗಳು ಸಿನಿಮಾದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
25
ಕೀಥಿ ಗೇಮ್ಸ್ ನಿರ್ದೇಶನದ ಈ ಸಿನಿಮಾ ಫೆಬ್ರವರಿ 7ರಂದು ಬಿಡುಗಡೆಯಾಗಿತ್ತು. ಸಿನಿಮಾ ನೋಡಿದ ವೀಕ್ಷಕರು ಚಿತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಗೆ ಟಿವ್ ಕಮೆಂಟ್‌ಗಳನ್ನು ಬರೆದುಕೊಂಡಿದ್ದರು. ಆರಂಭದಿಂದಲೇ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ಸಿನಿಮಾ ಸೋಲು ಕಂಡಿತ್ತು .
35
ಈ ಸಿನಿಮಾದಲ್ಲಿ ಹಿಮೇಶ್ ರೆಶ್ಮಿಯಾ, ಪ್ರಭುದೇವ, ಜಾನಿ ಲೀವರ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು. 2010 ಫೆಬ್ರವರಿ 7ರಂದು 'ಕಜರಾ ರೇ' ಸಿನಿಮಾ ರಿಲೀಸ್ ಆಗಿತ್ತು. ಮಹೇಶ್ ಭಟ್ ಕಥೆಗೆ ಮಗಳು ಪೂಜಾ ಭಟ್ ಆಕ್ಷನ್ ಕಟ್ ಹೇಳಿದ್ದರು.
45
ಬಾಕ್ಸ್ ಆಫ್ ಇಂಡಿಯಾ ಪ್ರಕಾರ, ಈ ಸಿನಿಮಾ 12 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಆದ್ರೆ ಒಟ್ಟಾರೆಯಾಗಿ ಕೇವಲ 70 ಸಾವಿರ ರೂ. ಕಲೆಕ್ಷನ್ ಮಾಡಿತ್ತು. ಹಿಮೇಶ್ ರೆಶ್ಮಿಕಾ ನಟನೆಯಿಂದಾಗಿಯೇ ಸಿನಿಮಾಗೆ ಸೋಲಾಯ್ತು ಎಂಬ ವಿಮರ್ಶೆಗಳು ಕೇಳಿ ಬಂದಿದ್ದವು.
55
ಹಿಮೇಶ್ ರೆಶ್ಮಿಯಾ ನಟನೆಯ ಮೊದಲ ಸಿನಿಮಾ 'ಆಪ್ಕಾ ಸುರೂರ್' 2007ರಲ್ಲಿ ಬಿಡುಗಡೆಯಾಗಿತ್ತು. ಇದಾದ ಬಳಿಕ ಬಿಡುಗಡೆಯಾದ 'ಕರ್ಜ್', 'ರೇಡಿಯೋ', 'ದಮಾ ದಮ್', 'ದಿ ಎಕ್ಸ್‌ಪೋಸ್', 'ತೇರಾ ಸುರೂರ್' ಮತ್ತು 'ಹ್ಯಾಪಿ ಹಾರ್ಡಿ ಅಂಡ್ ಹೀರ್' ಸಿನಿಮಾಗಳು ಸೋಲ ಕಂಡಿವೆ.