ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಚಿತ್ರಗಳಿಂದ ಕೊಂಚ ದೂರವೇ ಸರಿದಿದ್ದಾರೆ. ಆದರೆ ಸೋಷ್ಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಸದಾ ಕೆಲವೊಂದು ಫೋಟೋಗಳನ್ನು ಹಂಚಿಕೊಳ್ಳುವ ರಮ್ಯಾ, ಈ ಬಾರಿ ಗೆಳೆಯನ ಬರ್ತ್‌ಡೇ ಪಾರ್ಟಿಯ ಫೋಟೋ ಹಾಕಿದ್ದಾರೆ.
ಈ ಫೋಟೋಗೆ 'ನಮ್ಮ ಮನದಲ್ಲಿ ಅಚ್ಚಳಿಯದ ಕ್ಷಣಗಳಿಗೆ! ಜನ್ಮದಿನದ ಶುಭಾಶಯಗಳು ಸಂಜ್!' ಎಂದು ವಿಶ್ ಮಾಡಿದ್ದಾರೆ. ಮತ್ತು ಪಾರ್ಟಿ ಆರೇಂಜ್ ಮಾಡಿದ, ರಾತ್ರಿ ಪೂರಾ ಮ್ಯೂಸಿಕ್‌ನಲ್ಲಿ ಕುಣಿಸಿದ ಡಿಜೆಗೆ, ಟೇಬಲ್ ಸೆಟ್ಟಿಂಗ್ ಮಾಡಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ರಮ್ಯಾ ಹಂಚಿಕೊಂಡ ಫೋಟೋದಲ್ಲಿ ಸಂಜ್ ಅಲಿಯಾಸ್ ಸಂಜೀವ್ ಮೋಹನ್ ಹುಟ್ಟುಹಬ್ಬಕ್ಕಾಗಿ ನಟಿ ಗ್ರ್ಯಾಂಡ್ ಸೆಲೆಬ್ರೇಶನ್ ಆರೇಂಜ್ ಮಾಡಿರುವುದನ್ನು ಕಾಣಬಹುದು. ಜೊತೆಗೆ, ಆತನನ್ನು ಅಪ್ಪಿಕೊಂಡಿರುವ ಫೋಟೋವನ್ನು ಕೂಡಾ ಹಂಚಿಕೊಂಡಿದ್ದಾರೆ.
ಕಾಮೆಂಟ್ ಬಾಕ್ಸ್‌ನಲ್ಲಿ ರಿಪ್ಲೈ ಮಾಡಿರುವ ಸಂಜೀವ್, 'ನನ್ನ ಪ್ರೀತಿಯ ದಿವು, ಪರಿಪೂರ್ಣವಾದ, ಅತ್ಯುತ್ತಮ ರಾತ್ರಿಗಾಗಿ ಧನ್ಯವಾದಗಳು. ಇದು ತುಂಬಾ ಸರ್ಪ್ರೈಸ್ ಆಗಿತ್ತು !' ಎಂದಿದ್ದಾರೆ.
ಇದೀಗ ಸಂಜೀವ್ ಮೋಹನ್ ಯಾರೆಂಬ ಕುತೂಹಲ ರಮ್ಯಾ ಅಭಿಮಾನಿಗಳಲ್ಲಿ ಮೂಡಿದೆ. ದಿವ್ಯ ಸ್ಪಂದನಾ ಜೊತೆಗೆ ಕ್ಲೋಸ್ ಆಗಿರುವ ಫೋಟೋಗಳನ್ನು ಸಂಜೀವ್ ಇನ್ಸ್ಟಾ ಪೇಜ್‌ನಲ್ಲಿ 2018ರಿಂದಲೂ ಕಾಣಬಹುದು.
ಈ ಸಂಜೀವ್ ಮೋಹನ್ ಬೆಂಗಳೂರಿನ ರಿಚ್ಮಂಡ್ ರೋಡ್ ಸರ್ಕಲ್‌ನಲ್ಲಿರುವ ಪ್ರತಿಭಾ ಜುವೆಲ್ಲರಿಯ ಮಾಲೀಕರಾಗಿದ್ದಾರೆ. ಈ ಶಾಪ್‌ನ ಮಾಲೀಕ ನರಸಿಂಹುಲು ಚೆಟ್ಟಿಯ ಮೊಮ್ಮಗ ಹಾಗೂ ಮುರಳಿ ಮೋಹನ್ ಪುತ್ರ ಸಂಜೀವ್ ಮೋಹನ್ ಆಗಿದ್ದಾರೆ.
ಅಮೆರಿಕದ ಕ್ಯಾಲಿಫೋರ್ನಿಯಾದ ಜೆಮಾಲಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕದಿಂದ ಜೆಮಾಲಜಿಯಲ್ಲಿ ಪದವಿ ಪಡೆದಿದ್ದಾರೆ ಸಂಜೀವ್.
ಸಂಜೀವ್ ತಮ್ಮ ಪೋಸ್ಟ್‌ಗಳಲ್ಲಿ ರಮ್ಯಾಗೆ, ದಿವು, ಬೆಸ್ಟೀ ಎಂದು ಕರೆದಿರುವುದನ್ನು ನೋಡಿದಾಗ ಅವರಿಬ್ಬರೂ ಆಪ್ತಮಿತ್ರರು ಎಂಬುದು ಅರ್ಥವಾಗುತ್ತದೆ.
ನನಗೆ ತಿಳಿದಿರುವ ಪ್ರಾಮಾಣಿಕವಾದ, ಕಾಳಜಿಯುಳ್ಳ, ವಿನೋದ, ಸುಂದರ, ಬುದ್ಧಿವಂತ ಮತ್ತು ಹಾಸ್ಯದ ವ್ಯಕ್ತಿ ದಿವ್ಯಾ ಎಂದು ಸಂಜೀವ್ ಪೋಸ್ಟೊಂದರಲ್ಲಿ ಹೇಳಿರುವುದನ್ನು ಕಾಣಬಹುದು.