ಹೊಸ ಸಾಹಸಕ್ಕೆ ಕೈ ಹಾಕಿದ ಸಮಂತಾ ರುತ್‌ ಪ್ರಭು: ಹೊಸ ಪ್ರೊಡಕ್ಷನ್ ಹೌಸ್ ಆರಂಭ!

Published : Dec 11, 2023, 05:03 PM IST

ಸಮಂತಾ ರುತ್ ಪ್ರಭು ದಕ್ಷಿಣ ಭಾರತದ ಫೇಮಸ್‌ ಸೆಲೆಬ್ರಿಟಿ. ತನ್ನ ತೆರೆಯ ಮೇಲಿನ ಅಭಿನಯದಿಂದ ಎಲ್ಲರನ್ನೂ ಬೆರಗುಗೊಳಿಸಿರುವ ಸಮಂತಾ ಅವರು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈಗ ನಟಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. 

PREV
17
ಹೊಸ ಸಾಹಸಕ್ಕೆ ಕೈ ಹಾಕಿದ ಸಮಂತಾ ರುತ್‌ ಪ್ರಭು: ಹೊಸ  ಪ್ರೊಡಕ್ಷನ್ ಹೌಸ್ ಆರಂಭ!

ಅವರು ಇಂದು Instagram ನಲ್ಲಿ ಅಭಿಮಾನಿಗಳ ಜೊತೆ ಹೊಸ ಸುದ್ದಿಯನ್ನು ಹಂಚಿಕೊಂಡು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಸಮಂತಾ ಅವರು ತಾವು  ನಿರ್ಮಾಪಕಿಯಾಗುತ್ತಿರುವ ಬಗ್ಗೆ ಬಹಿರಂಗಪಡಿಸಿದ್ದಾರೆ

27

ಸಮಂತಾ ರುತ್‌ ಫ್ರಭು ಅವರು ತನ್ನ ಹೊಸ ನಿರ್ಮಾಣ ಕಂಪನಿಯಾದ ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಅನ್ನು ಪ್ರಾರಂಭಿಸುವುದಾಗಿ ಸೋಶಿಯಲ್‌ ಮೀಡಿಯಾದಲ್ಲಿ ಘೋಷಿಸಿದರು. 

37

ಅವರು ತಮ್ಮ ಟ್ರಾಲಾಲಾ ಮೂವಿಂಗ್ ಪಿಕ್ಚರ್ಸ್ ಕುರಿತು ವೀಡಿಯೊ ಪೋಸ್ಟ್ ಮಾಡಿದ್ದಾರೆ. ಇದು ಅಂತರ್ಜಾಲದಲ್ಲಿ ಶೀಘ್ರವಾಗಿ ಜನಪ್ರಿಯವಾಯಿತು.

 

47

'ನನ್ನ ನಿರ್ಮಾಣ ಸಂಸ್ಥೆಯನ್ನು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ, ತ್ರಲಾಲಾ ಮೂವಿಂಗ್ ಪಿಕ್ಚರ್ಸ್ @tralalamoving Pictures ತ್ರಲಾಲಾ ಮೂವಿಂಗ್ ಪಿಕ್ಚರ್ಸ್ ಹೊಸ ಯುಗದ ಅಭಿವ್ಯಕ್ತಿ ಮತ್ತು ಚಿಂತನೆಯ ವಿಷಯವನ್ನು ಪ್ರತಿನಿಧಿಸುವ ಗುರಿ ಹೊಂದಿದೆ. ಇದು ಪೋಷಣೆಯ ಸ್ಥಳ.  ನಮ್ಮ ಸಾಮಾಜಿಕ ರಚನೆಯ ಶಕ್ತಿ ಮತ್ತು ಸಂಕೀರ್ಣತೆ ಕಥೆಗಳನ್ನು ಆಹ್ವಾನಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಮತ್ತು ಚಲನಚಿತ್ರ ನಿರ್ಮಾಪಕರಿಗೆ ಅರ್ಥಪೂರ್ಣ, ಅಧಿಕೃತ ಮತ್ತು ಸಾರ್ವತ್ರಿಕವಾದ ಕಥೆಗಳನ್ನು ಹೇಳಲು ಒಂದು ವೇದಿಕೆ' ಎಂದು ಸಮಂತಾ ವೀಡಿಯೋ ಜೊತೆ ಬರೆದಿದ್ದಾರೆ.


 

57

ಅಭಿಮಾನಿಗಳು ಮಾತ್ರವಲ್ಲದೆ  ಚಿತ್ರರಂಗದ ನಂದಿನಿ ರೆಡ್ಡಿ, ಪಾರ್ವತಿ, ಅನುಪಮಾ ಪರಮೇಶ್ವರನ್ ಮತ್ತು ಹಲವಾರು ಇತರ ಸ್ನೇಹಿತರು ಸಮಂತಾ ಅವರಿಗೆ ಅಭಿನಂದಿಸಿ ಕಾಮೆಂಟ್ ಮಾಡಿದ್ದಾರೆ.


 

67

ಈಗ ಮೈಯೋಸಿಟಿಸ್ ಎಂಬ ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ರುತ್ ಪ್ರಭು ನಟನೆಯಿಂದ ಹಿಂದೆ ಸರಿದಿದ್ದಾರೆ. ಕೊನೆಯದಾಗಿ ನಟಿ ವಿಜಯ್ ದೇವರಕೊಂಡ  ಅವರ ಜೊತೆ ರೊಮ್ಯಾಟೀಕ್‌ ಡ್ರಾಮಾ ಕುಶಿಯಲ್ಲಿ ಕಾಣಿಸಿಕೊಂಡಿದ್ದರು. .

 
 

77

ಅವರು ಮುಂದಿನ ದಿನಗಳಲ್ಲಿ ಸಿಟಾಡೆಲ್‌ನ ಭಾರತೀಯ ರಿಮೇಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ವರುಣ್ ಧವನ್ ಸಹ ನಟಿಸಲಿದ್ದಾರೆ. ಇದನ್ನು ರಾಜ್ ಮತ್ತು ಡಿಕೆ ನಿರ್ದೇಶಿಸಲಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories