Nayanthara: ದಯವಿಟ್ಟು ನನ್ನನ್ನು ಹೀಗೆ ಕರೀಬೇಡಿ, ಮುಜುಗರವಾಗುತ್ತೆ ಅಂದಿದ್ಯಾಕೆ ನಟಿ ನಯನತಾರಾ?

Published : Dec 11, 2023, 02:00 AM IST

ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾ ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಬಾಲಿವುಡ್‌ಗೂ ಕಾಲಿಟ್ಟಿರುವ ನಯನತಾರಾಗೆ ಡಿಮ್ಯಾಂಡ್ ಹೆಚ್ಚಿದೆ.

PREV
17
Nayanthara: ದಯವಿಟ್ಟು ನನ್ನನ್ನು ಹೀಗೆ ಕರೀಬೇಡಿ, ಮುಜುಗರವಾಗುತ್ತೆ ಅಂದಿದ್ಯಾಕೆ ನಟಿ ನಯನತಾರಾ?

ಜವಾನ್ ಸಿನಿಮಾ ಸಕಸ್ಸ್ ಖುಷಿಯಲ್ಲಿರುವ ನಟಿ ನಯನತಾರಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸೌತ್ ಸಿನಿಮಾ ಇಂಡಸ್ಟ್ರಿಯ ಲೇಡಿ ಸೂಪರ್ ಸ್ಟಾರ್ ನಯನತಾರಾಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ.

27

ದಕ್ಷಿಣ ಭಾರತದ ಅನೇಕ ಸ್ಟಾರ್ ಹೀರೋಗಳಿಗೆ ನಯನತಾರಾ ಲಕ್ಕಿ ಹೀರೋಯಿನ್ ಆಗಿದ್ದಾರೆ. ಕಿಂಗ್ ಖಾನ್ ಶಾರುಖ್ ಜೊತೆ ಜವಾನ್ ಸಿನಿಮಾ ಮೂಲಕ ನಯನತಾರಾ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಲೇಡಿ ಸೂಪರ್ ಸ್ಟಾರ್ ಹವಾ ಮತ್ತಷ್ಟು ಹೆಚ್ಚಿದೆ.

37

ನಯನತಾರಾ ಅವರನ್ನು ಫ್ಯಾನ್ಸ್‌ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯುತ್ತಾರೆ. ಈ ರೀತಿ ಕರೆಸಿಕೊಳ್ಳಲು ನಟಿಯರು ಕಾಯುತ್ತಿರುತ್ತಾರೆ. ಆದ್ರೆ ಅದ್ಯಾಕೋ ನಯನತಾರಾ ಮಾತ್ರ ನನ್ನನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೀಬೇಡ್ರಪ್ಪಾ ಎಂದಿದ್ದಾರೆ.

47

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಯನತಾರಾ ದಯವಿಟ್ಟು ನನ್ನನ್ನು ಲೇಡಿ ಸೂಪರ್‌ ಸ್ಟಾರ್ ಅಂತ ಕರೀಬೇಡಿ ನನಗೆ ಕೊಂಚ ಮುಜುಗರವಾಗುತ್ತದೆ ಎಂದು ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

57

ಜವಾನ್ ಸಿನಿಮಾ ಬಳಿಕ ನಟಿ ನಯನತಾರಾ ಅಭಿನಯದ ‘ಅನ್ನಪೂರ್ಣಿ’ ಸಿನಿಮಾ ಡಿಸೆಂಬರ್ 1 ರಂದು ರಿಲೀಸ್ ಆಗಿತ್ತು. ನೀಲೇಶ್ ಕೃಷ್ಣ ನಿರ್ದೇಶನದ ಈ ಸಿನಿಮಾ ಹೇಳಿಕೊಳ್ಳುವ ಯಶಸ್ಸು ನೀಡಲಿಲ್ಲ.

67

ನಯನತಾರಾ ಇದೀಗಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಹೌದು! ನಯನತಾರಾ ಕೂಡ ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದ್ದಾರೆ. ಈಗಾಗಲೇ 7 ಮಿಲಿಯನ್‌ಗೂ ಹೆಚ್ಚು ಜನರು ನಟಿಯನ್ನು ಫಾಲೋ ಮಾಡುತ್ತಿದ್ದಾರೆ.

77

ಸದ್ಯ ನಟಿ ನಯನತಾರಾ ಕಾಲಿವುಡ್ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿ ಮಕ್ಕಳೊಂದಿಗೆ ಹ್ಯಾಪಿಯಾಗಿದ್ದಾರೆ. ನಯನತಾರಾ ಹಾಗೂ ವಿಘ್ನೇಶ್ ದಂಪತಿಯ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ.

Read more Photos on
click me!

Recommended Stories