ಸಮಂತಾ ಬ್ಯಾಕ್‌ ಪೋಸ್‌ ವೈರಲ್: ಮೊದಲ ಸಲ ಬ್ಯಾಕ್‌ಲೆಸ್‌ ಆದ ನಟಿ!

Published : Aug 17, 2023, 03:56 PM IST

ವಿಜಯ್‌ ದೇವರಕೊಂಡ ಹಾಗೂ ಸಮಂತಾ ರುತ್ ಪ್ರಭು ಅಭಿನಯದ ಖುಷಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಚಿತ್ರತಂಡ ಸಖತ್ತಾಗಿ ಸಿನಿಮಾ ಪ್ರಮೋಷನ್‌ನಲ್ಲಿ ತೊಡಗಿದೆ. ಖುಷಿ ಪ್ರಮೋಷನ್‌ನ ಭಾಗವಾಗಿ ಇತ್ತೀಚೆಗೆ ಮುತ್ತಿನ ನಗರಿ ಹೈದಾರಾಬಾದ್‌ನಲ್ಲಿ ಖುಷಿ ಸಿನಿಮಾದ ಮ್ಯೂಸಿಕ್ ಕನ್ಸರ್ಟ್‌ ನಡೆಯಿತು. ಈ ವೇಳೆ ವಿಜಯ್ ದೇವರಕೊಂಡ ಹಾಗೂ ನಟಿ ಸಮಂತಾ ಖುಷಿ ಸಿನಿಮಾದ ಹಾಡುಗಳಿಗೆ ಡಾನ್ಸ್‌ ಮಾಡಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ.  ಇದರ ಜೊತೆಗೆ ಸಮಂತಾ ಧರಿಸಿದ್ದ ಧಿರಿಸು ಎಲ್ಲರ ಗಮನ ಸೆಳೆದಿದೆ. 

PREV
110
ಸಮಂತಾ ಬ್ಯಾಕ್‌ ಪೋಸ್‌ ವೈರಲ್: ಮೊದಲ ಸಲ ಬ್ಯಾಕ್‌ಲೆಸ್‌ ಆದ ನಟಿ!
Samantha Ruth Prabhu at khushi movie promotion

ಖುಷಿ ಸಿನಿಮಾದ ಮ್ಯೂಸಿಕ್‌ ಕನ್ಸರ್ಟ್‌ಗೆ ಸೇರಿದ ಜನ ಸಾಗರದ ಮಧ್ಯೆ ಡಾನ್ಸ್ ಮಾಡಿದ ಖುಷಿ ಸಿನಿಮಾದ ಜೋಡಿ ಸಮಂತಾ & ವಿಜಯ ದೇವರಕೊಂಡ

210
Samantha Ruth Prabhu at khushi movie promotion

ಸಮಂತಾ ಹಾಗೂ ವಿಜಯ್‌ ಕೆಮೆಸ್ಟ್ರಿಗೆ ಮನಸೋತ ಜನಸಾಗರ, ಈ ಮ್ಯೂಸಿಕ್ ಕನ್ಸರ್ಟ್‌ನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

310
Samantha Ruth Prabhu at khushi movie promotion

ಮ್ಯೂಸಿಕ್ ಮ್ಯಾಜಿಕಲ್ ನೈಟ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ  ಸಮಂತಾ ಹಾಗೂ ವಿಜಯ್ ದೇವರಕೊಂಡ, ಫೋಟೋ ನೋಡಿದ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆ.

410
Samantha Ruth Prabhu at khushi movie promotion

ಕಾರ್ಯಕ್ರಮದಲ್ಲಿ ಹಾಲ್ಟರ್‌ ನೆಕ್‌ ಬ್ಯಾಕ್‌ಲೆಸ್ ಬ್ಲೌಸ್‌ ಜೊತೆ ಕೆಂಪು ಬಣ್ಣದ ಸಬ್ಯಸಾಚಿ ಸಾರಿಯಲ್ಲಿ ಮಿಂಚಿದ ಸಿಂಡ್ರೆಲ್ಲಾ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. 

510
Samantha Ruth Prabhu at khushi movie promotion

ಫೋಟೋ ನೋಡಿದ ನೆಟ್ಟಿಗರು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ.  ಇಷ್ಟೊಂದು ಚೆಂದ ಕಾಣುವುದರ ಹಿಂದೆ ಹಿಂದಿನ ದಿನದ ತಾಲೀಮು ಇದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

610
Samantha Ruth Prabhu at khushi movie promotion

ಸಮಂತಾ ಎಂದಿಗೂ ತಮ್ಮ ವಿಶೇಷ ದಿನಕ್ಕೂ ಹಿಂದಿನ ದಿನ ಸಿದ್ಧಗೊಳ್ಳುವುದನ್ನು ಮಿಸ್ ಮಾಡೋದಿಲ್ಲ ಅನ್ಸುತ್ತೆ ಎಂದು  ಕಾಮೆಂಟ್ ಮಾಡಿದ್ದಾರೆ. ಬ್ಯಾಕ್‌ ಲೆಸ್‌ ಬ್ಲೌಸ್‌ ಜೊತೆ ಸಮಂತಾ ಸಖತ್ ಹಾಟ್ ಆಗಿ ಕಾಣಿಸುತ್ತಿದ್ದು, ಆಕೆಯ ಬೆನ್ನು ನೋಡಿದ ಮೇಲೆ ಆಕೆಗೆ ಯಾರೂ ಬೆನ್ನಾಗಿ ನಿಲ್ಲುವ ಅಗತ್ಯವಿಲ್ಲ ಎಂದು ಕಾಣಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. 

710
Samantha Ruth Prabhu at khushi movie promotion

ಅಭಿಮಾನಿಗಳ ಅಭಿಮಾನದ ಸುರಿಮಳೆಗೆ ಸಮಂತಾ ಧನ್ಯವಾದ ಹೇಳಿದ್ದು, ಮ್ಯಾಜಿಕಲ್ ನೈಟ್‌ಗಾಗಿ ನಿಮಗೆ ಧನ್ಯವಾದಗಳು,  ಥಿಯೇಟರ್‌ನಲ್ಲಿ  ಸೆಪ್ಟೆಂಬರ್ ಒಂದರಂದು ಭೇಟಿಯಾಗೋಣ ಎಂದು ಸಮಂತಾ ಬರೆದುಕೊಂಡಿದ್ದಾರೆ. 

810
Samantha Ruth Prabhu at khushi movie promotion

ಇನ್ನೊಂದು ಪೋಸ್ಟ್‌ನಲ್ಲಿ ಮತ್ತಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಸಮಂತಾ ಅತೀಯಾದ ಪ್ರೀತಿಯೆಂಬುದೇ ಅಲ್ಲ, ಆದರೂ ಕೆಲವು ವಿಚಾರ ಮಿತಿ ಮೀರಿದರೂ ಸಾಕೆನಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ. ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೃತ್ಯ ಪ್ರದರ್ಶನದ ಪೋಟೋ ಶೇರ್ ಮಾಡಿದ್ದು ಸೆಪ್ಟೆಂಬರ್ ಒಂದರಿಂದ ನಿಮ್ಮೆಲ್ಲರಿಗೂ ಪ್ರೀತಿಯನ್ನು ಹಂಚುತ್ತೇವೆ ಎಂದು ಬರೆದುಕೊಂಡಿದ್ದಾರೆ.

910
Samantha Ruth Prabhu at khushi movie promotion

ಈ ಖುಷಿ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್‌ ನಿರ್ಮಿಸಿದ್ದು, ಈ ನಿರ್ಮಾಣ ಸಂಸ್ಥೆ ಕೂಡ ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ಮ್ಯೂಸಿಕ್ ಕನ್ಸರ್ಟ್‌ನ ವೀಡಿಯೋವನ್ನು ಪೋಸ್ಟ್ ಮಾಡಿದೆ. ವೀಡಿಯೋದಲ್ಲಿ ಅಭಿಮಾನಿಗಳು ಕುಣಿಯುತ್ತಾ ಕೂಗುತ್ತಾ ಸಂಭ್ರಮಿಸುವುದನ್ನು ಕಾಣಬಹುದಾಗಿದೆ

1010
Samantha Ruth Prabhu at khushi movie promotion

ಸೆಪ್ಟೆಂಬರ್ 1 ರಂದು ಖುಷಿ ಸಿನಿಮಾ ತೆರೆಗೆ ಅಪ್ಪಳಿಸಲಿದ್ದು, ತೆಲುಗು, ಕನ್ನಡ, ಮಲೆಯಾಳಂ ಭಾಷೆಯಲ್ಲಿ ಸಿನಿಮಾ ತೆರೆ ಕಾಣಲಿದೆ. ಈ ಸಿನಿಮಾಗೆ ಶಿವ ನಿರ್ವಾಣ ಕತೆ ಬರೆದಿದ್ದು, ಸಮಂತಾ ರುತ್ ಪ್ರಭು ಹಾಗೂ ವಿಜಯ್ ದೇವರಕೊಂಡ ಒಟ್ಟಿಗೆ ನಟಿಸುತ್ತಿರುವ 2ನೇ ಪ್ರಾಜೆಕ್ಟ್ ಇದಾಗಿದೆ.

Read more Photos on
click me!

Recommended Stories