ಸೌತ್ ಸ್ಟಾರ್ ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಶಾಕುಂತಲಂ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಹಾಗಂತ ಸಮಂತಾ ಸೈಲೆಂಟ್ ಆಗಿ ಮನೆಯಲ್ಲಿ ಕುಳಿತಿಲ್ಲ. ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಸಮಂತಾ ಸದ್ಯ ಹಿಂದಿ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಬಾಲಿವುಡ್ ಸ್ಟಾರ್ ವರುಣ್ ಧವನ್ ಜೊತೆ ಸಿಟಾಡೆಲ್ ನಲ್ಲಿ ನಟಿಸುತ್ತಿದ್ದಾರೆ. ಸಿಟಾಡೆಲ್ ಭಾರತದ ವರ್ಷನ್ ಸೀರಿಸ್‌ಗಾಗಿ ಸಮಂತಾ ಮತ್ತು ವರುಣ್ ಜೋಡಿಯಾಗಿದ್ದಾರೆ.
ಅಂದಹಾಗೆ ಸಮಂತಾ ಮತ್ತು ವರುಣ್ ಧವನ್ ಇಬ್ಬರೂ ಲಂಡನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಇಬ್ಬರೂ ಒಟ್ಟಿಗೆ ಹಾಜರಾಗಿದ್ದು ಸಿಟಾಡೆಲ್ ಪ್ರಿಮಿಯರ್‌ನಲ್ಲಿ. ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟನೆಯ ಸಿಟಾಡೆಲ್ ಸೀರಿಸ್ ರಿಲೀಸ್‌ಗೆ ರೆಡಿಯಾಗಿದೆ. ಲಂಡನ್‌ನಲ್ಲಿ ನಡೆದ ಪ್ರೀಮಿಯರ್ ನಲ್ಲಿ ಸಮಂತಾ ಮತ್ತು ವರುಣ್ ಭಾಗಿಯಾಗಿದ್ದರು.
ಈವೆಂಟ್ ನಲ್ಲಿ ಸಮಂತಾ ಎಲ್ಲರ ಗಮನ ಸೆಳೆದರು. ಕಪ್ಪು ಬಣ್ಣದ ಉಡುಪಿನಲ್ಲಿ ಮಿಂಚಿದ ಸಮಂತಾ ಅಭಿಮಾನಿಗಳ ಹೃದಯ ಗೆದ್ದರು. ಲೆಂಡನ್‌ನಲ್ಲಿ ಭರ್ಜರಿ ಪೋಸ್ ನೀಡಿರುವ ಸಮಂತಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಹರಿದುಬರುತ್ತಿದೆ.
ವರುಣ್ ಮತ್ತು ಸಮಂತಾ ಇಬ್ಬರೂ ಬ್ಲ್ಯಾಕ್ ಅಂಡ್ ಬ್ಲ್ಯಾಕ್ ಕಾಂಬಿನೇಷನ್ ಡ್ರೆಸ್ ನಲ್ಲಿ ಮಿಂಚಿದರು. ಕ್ಯಾಮರಾಗೆ ಮಸ್ತ್ ಪೋಸ್ ನೀಡಿರುವ ಈ ಜೋಡಿ ಫೋಟೋಗಳು ಗಮನ ಸೆಳೆಯುತ್ತಿವೆ.
ರುಸ್ಸೋ ಬ್ರದರ್ಸ್ ನಿರ್ಮಿಸಿದ, ಸಿಟಾಡೆಲ್ ಏಪ್ರಿಲ್ 28 ರಂದು ಪ್ರೈಮ್ ವಿಡಿಯೋದಲ್ಲಿ ಮೊದಲ ಪ್ರದರ್ಶನಗೊಳ್ಳಲಿದೆ. ಈ ಸರಣಿಯಲ್ಲಿ ಪ್ರಿಯಾಂಕಾ ಮತ್ತು ರಿಚರ್ಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿಟಾಡೆಲ್ ಭಾರತದ ವರ್ಷನ್‌ನಲ್ಲಿ ಸಮಂತಾ ಮತ್ತು ವರುಣ್ ನಟಿಸುತ್ತಿದ್ದಾರೆ. ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.