ಬಹಳ ದಿನಗಳಿಂದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ನಡುವಿನ 'ಎಲ್ಲವೂ ಸರಿಯಿಲ್ಲ' ಎಂಬ ವರದಿಗಳು ಸದ್ದು ಮಾಡುತ್ತಿವೆ. ಸಮಂತಾ ಅಕ್ಕಿನೇನಿ ತಮ್ಮ ಹೆಸರಿನಿಂದ 'ಅಕ್ಕಿನೇನಿ' ಸರ್‌ನೇಮ್ ಅನ್ನು ತನ್ನ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ಗಳಿಂದ ಕೈಬಿಟ್ಟ ನಂತರ ವದಂತಿಗಳು ಬೆಳಕಿಗೆ ಬಂದವು. ದಂಪತಿಗಳ ಮದುವೆ ಮುರಿದು ಬೀಳಲು ಕೆಲವು ಕಾರಣಗಳನ್ನು ಮಾಧ್ಯಮಗಳು ಪಾಯಿಂಟ್ ಔಟ್ ಮಾಡಿವೆ.
'ಅಕ್ಕಿನೇನಿ' ಕುಟುಂಬದ ಸೊಸೆ ಸಮಂತಾ ತನ್ನ ಸೋಶಿಯಲ್ ಮೀಡಿಯಾ ಪೇಜ್‌ಗಳಿಂದ 'ಅಕ್ಕಿನೇನಿ' ಸರ್‌ನೇಮ್ ಬಿಟ್ಟಿದ್ದಲ್ಲದೇ ಈ ಜೋಡಿ ನಡುವಿನ ಅನೇಕ ಘಟನೆಗಳು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿವೆ.
ಸಮಂತಾ ಮುಂಬೈಗೆ ಶಿಫ್ಟ್ ಆಗಲು ಯೋಜಿಸಿದ್ದು ವದಂತಿಗಳಿಗೆ ಹೆಚ್ಚಿನ ಉತ್ತೇಜನವನ್ನು ನೀಡಿತು. ಅದೇ ಸಮಯದಲ್ಲಿ ನಾಗ ಚೈತನ್ಯ ಕೂಡ ತನ್ನ ಗಚಿಬೌಲಿಯ ನಿವಾಸವನ್ನು ತೊರೆದರು. ಅವರು ಈಗ ತನ್ನ ಹೆತ್ತವರೊಂದಿಗೆ ಇದ್ದಾರೆ.
ಇದರ ಜೊತೆಗೆ ಸಮಂತಾ ಅಕ್ಕಿನೇನಿ ಅವರ ಮಾವ ನಾಗಾರ್ಜುನ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ತಪ್ಪಿಸಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಫೋಟೋದಲ್ಲಿ ಇಡೀ ಕುಟುಂಬ ಗುರುತಿಸಲಾಯಿತು ಮತ್ತು ಆದರೆ ಸಮಂತಾ ಮಾತ್ರ ಕಾಣೆಯಾಗಿದ್ದರು.
ಸಮಂತಾ ನಾಗ ಚೈತನ್ಯ ಇಲ್ಲದೆ ಗೋವಾ ಪ್ರವಾಸ ಕೈಗೊಂಡರು. ಆಕೆಯ ಪತಿ ನಾಗ ಚೈತನ್ಯ ಗೋವಾ ಪ್ರವಾಸಕ್ಕೆ ಜೊತೆಯಾಗಿರಲಿಲ್ಲ.ಇದು ಈ ಕಪಲ್ ಡಿವೋರ್ಸ್ ತೆಗೆದು ಕೊಳ್ಳುತ್ತಿರುವ ರೂಮರ್‌ಗಳಿಗೆ ಇನ್ನಷ್ಟೂ ಬಲ ನೀಡಿತ್ತು.
ಸಮಂತಾ ತನ್ನ ವ್ಯಂಗ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಸಾರ್ಕ್ಯಾಸ್ಟಿಕ್ ಕೋಟ್‌ಗಳನ್ನು ಹಂಚಿಕೊಳ್ಳುವುದನ್ನು ಅವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ತನಗೆ ಅನಿಸದ
ಹೊರತು ಯಾವುದೇ ವದಂತಿಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದು ಸಮಂತಾ ಬಹಿರಂಗಪಡಿಸಿದರು. ಆದರೆ ಸಮಂತಾ ಈ ವಂದತಿಯನ್ನು ನಿರಾಕರಿಸಲಿಲ್ಲ ಕೂಡ.
ಇತ್ತೀಚೆಗೆ ಬಿಡುಗಡೆಯಾದ ನಾಗ ಚೈತನ್ಯರ ಲವ್ ಸ್ಟೋರಿ 2021 ರ ಟ್ರೇಲರ್ ಬಗ್ಗೆ ಸಮಂತಾ ಯಾವುದೇ ರೀತಿ ಪ್ರತಿಕ್ರಿಯಿಸಿಲ್ಲ. ಇದು ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಅವರ ವಿಚ್ಛೇದನದ ರೂಮರ್ ಇನ್ನೂ ದೃಢವಾಗಲು ಕಾರಣವಾಗಿದೆ.