ಸಾಯಿ ಪಲ್ಲವಿ, ರಶ್ಮಿಕಾ, ದೇವರಕೊಂಡ: ಬೋರ್ಡ್‌ ಎಕ್ಸಾಂ ಅಂಕ ತಿಳಿದರೆ ಶಾಕ್‌ ಆಗುತ್ತೆ!

First Published | Sep 15, 2021, 6:41 PM IST

ಸಮಂತಾ ಅಕ್ಕಿನೇನಿಯಿಂದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರವರೆಗೆ  ದಕ್ಷಿಣದ ಈ ಸ್ಟಾರ್ಸ್‌ನ 10-12ನೇ ತರಗತಿಯ ಬೋರ್ಡ್‌ ಎಕ್ಸಾಂನ ಅಂಕಗಳನ್ನು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.  ಈ ದಕ್ಷಿಣ ಸೂಪರ್‌ ಸ್ಟಾರ್‌ಗಳ ಬೋರ್ಡ್ ಎಕ್ಸಾಂನ ಫಲಿತಾಂಶಗಳನ್ನು ನೋಡೋಣ 

ದಕ್ಷಿಣ ಭಾರತದ ನಟರು ತಮ್ಮ ಅದ್ಭುತ ನಟನಾ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ. ಅನೇಕರು ಹಿಂದಿ ಸಿನಿಮಾಕ್ಕೂ ಪ್ರವೇಶಿಸುತ್ತಿದ್ದಾರೆ. ಅದಲ್ಲದೆ, ಅನೇಕ ದಕ್ಷಿಣ ಚಿತ್ರಗಳನ್ನು ಹಿಂದಿಯಲ್ಲಿ ರೀಮೇಕ್ ಮಾಡುವುದನ್ನು ನಾವು ನೋಡಿದ್ದೇವೆ. ಭಾರತದ ಇತರ ರಾಜ್ಯಗಳು ದಕ್ಷಿಣದ ಸ್ಟಾರ್‌ ಬಗ್ಗೆ  ಗಮನಿಸಲು ಆರಂಭಿಸಿವೆ.  ಸೌತ್‌ನ ಕೆಲವು ತಾರೆಯರ 10 ನೇ ಮತ್ತು 12 ನೇ ಬೋರ್ಡ್ ಎಕ್ಸಾಂನ ಮಾರ್ಕ್ಸ್‌ ಇಲ್ಲಿವೆ. ಅದನ್ನು ನೋಡಿದರೆ  ಅವರು ಕೇವಲ ಅದ್ಭುತ ನಟರಲ್ಲ ಆದರೆ ಅತ್ಯುತ್ತಮ ವಿದ್ಯಾರ್ಥಿಗಳು ಎಂದು ತೋರಿಸುತ್ತದೆ.
 

ವಿಜಯ್ ದೇವರಕೊಂಡ:
ಅರ್ಜುನ್ ರೆಡ್ಡಿ, ಡಿಯರ್‌ ಕಾಮ್ರೆಡ್‌, ಗೀತಾ ಗೋವಿಂದಂ, ನೋಟಾ ಇತ್ಯಾದಿ ಹಿಟ್‌ ಸಿನಿಮಾಗಳ ನಂತರ ವಿಜಯ್ ದೇವರಕೊಂಡ ಅವರನ್ನು ಪಕ್ಕದ ಮನೆಯ ಹುಡುಗ ಎಂದು ಕರೆಯುತ್ತಾರೆ. ಅನೇಕ ವರದಿಗಳ ಪ್ರಕಾರ, ನಟ 10 ನೇ ತರಗತಿಯಲ್ಲಿ  80% ಮತ್ತು 12 ನೇ ತರಗತಿಯಲ್ಲಿ  75% ಗಳಿಸಿದರು.  

Tap to resize

ರಶ್ಮಿಕಾ ಮಂದಣ್ಣ:
ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಮಿಷನ್ ಮಜ್ನು ಮತ್ತು ಅಮಿತಾಬ್ ಬಚ್ಚನ್ ಜೊತೆ ಗುಡ್‌ಬೈ ಮೂಲಕ ಬಾಲಿವುಡ್  ಪಾದಾರ್ಪಣೆ ಮಾಡಿದ್ದಾರೆ. ಅವರು ಪ್ರಸ್ತುತ ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್ (ಭಾಗ 1) ಬಿಡುಗಡೆಗಾಗಿ ಕಾಯುತ್ತಿದ್ದಾರೆ. 10 ನೇ ತರಗತಿಯಲ್ಲಿ  88% ಮತ್ತು 12 ನೇ ತರಗತಿಯಲ್ಲಿ 82% ಗಳಿಸಿದ್ದ ರಶ್ಮಿಕಾ ಓದಿನಲ್ಲೂ ಮುಂದಿದ್ದರು.

ಸಮಂತಾ ಅಕ್ಕಿನೇನಿ: 
ಈ ದಿನಗಳಲ್ಲಿ ತಮ್ಮ ಪರ್ಸನಲ್‌ ಲೈಫ್‌ನಿಂದ ಸುದ್ದಿಯಲ್ಲಿದ್ದಾರೆ. ಅವರ ಮದುವೆ ಈಗ ಡಿವೋರ್ಸ್‌ ಹಂತ ತಲುಪಿದೆ ಎಂಬ ವಂದತಿಗಳು ಎಲ್ಲಾ ಕಡೆ ಹರಿದಾಡುತ್ತಿವೆ. ನಟಿ  10 ನೇ ತರಗತಿಯಲ್ಲಿ 88.7% ಮತ್ತು 12 ರಲ್ಲಿ 72% ಗಳಿಸಿದ್ದರು.

ಸಾಯಿ ಪಲ್ಲವಿ:
ಜಾರ್ಜಿಯಾದ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಿಂದ ಎಂಬಿಬಿಎಸ್ ಮುಗಿಸಿ ತರಬೇತಿಯ ಮೂಲಕ ಡಾಕ್ಟರ್‌ ಆಗಿದ್ದಾರೆ ನ್ಯಾಚುರಲ್‌ ಬ್ಯೂಟಿ ಸಾಯಿ ಪಲ್ಲವಿ. ಅವರು 10 ನೇ ತರಗತಿಯಲ್ಲಿ 88% ಮತ್ತು 12 ರಲ್ಲಿ 85% ಗಳಿಸಿದ್ದರು. ಸಾಯಿ ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಇದು ಸೆಪ್ಟೆಂಬರ್ 24 ರಂದು ಚಿತ್ರಮಂದಿರಗಳಿಗೆ ಬರಲಿದೆ.
 

ಕಾಜಲ್ ಅಗರ್ವಾಲ್:
ಈ ದಿನಗಳಲ್ಲಿ ಕಾಜಲ್‌ ಅಗರ್ವಾಲ್‌ ಪತಿ ಗೌತಮ್ ಕಿಚ್ಲು  ಜೊತೆಯ ತಮ್ಮ ಕ್ಯೂಟ್‌ ಫೋಟೋಗಳಿಂದ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರು ತಮ್ಮ ಮದುವೆಯ ನಂತರ ತಮ್ಮ ಮೊದಲ ಗಣಪತಿ ಹಬ್ಬದ  ಝಲಕ್‌ಗಳನ್ನು ಹಂಚಿಕೊಂಡರು.  ನಟಿ 10 ನೇ ತರಗತಿಯಲ್ಲಿ 80% ಮತ್ತು 12 ರಲ್ಲಿ 71% ಅಂಕ ಗಳಿಸಿದ್ದಾರೆ.

ವಿಜಯ್ ಸೇತುಪತಿ:
ವಿಜಯ್ ಸೇತುಪತಿ ಅವರ ಇತ್ತೀಚಿಗೆ ಬಿಡುಗಡೆಯಾದ  ತಮಿಳು ಸಿನಿಮಾ  ತುಘಲಕ್ ದರ್ಬಾರ್‌  ಎಲ್ಲರ ಮೆಚ್ಚುಗೆ ಗಳಿಸಿದೆ. ವಿಜಯ್ ಸೇತುಪತಿ 10ನೇ ಮತ್ತು 12ನೇ ತರಗತಿಯಲ್ಲಿ 70% ಗಳಿಸಿದ್ದಾರೆ. ಅವರು ಶೀಘ್ರದಲ್ಲೇ ಅಣ್ಣಬೆಲ್ಲೆ ಸೇತುಪತಿ, ಕಾತು ವಾಕುಲಾ ಎರಡು ಕಾದಲ್, ಮಾಮನಿಥನ್, ವಿಕ್ರಮ್ ಮೊದಲಾದ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿತ್ಯಾ ಮೆನನ್:
ನಟಿ ನಿತ್ಯಾ ಮೆನನ್‌  ಪ್ರಸ್ತುತ ಚೆನ್ನೈನಲ್ಲಿ ತನ್ನ ಮುಂಬರುವ ಚಿತ್ರ  ತಿರುಚಿತ್ರಂಬಲಂ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇವರು  ಕ್ರಮವಾಗಿ 10 ಮತ್ತು 12ನೇ ತರಗತಿಯಲ್ಲಿ 75% ಹಾಗೂ 72%  ಅಂಕ ಗಳಿಸಿದ್ದಾರೆ.

Latest Videos

click me!