Samantha
ಈ ವರ್ಷದ ಅಕ್ಟೋಬರ್‌ನಲ್ಲಿ ಸಮಂತಾ ಅಕ್ಕಿನೇನಿ(Samantha) ಮತ್ತು ನಾಗ ಚೈತನ್ಯ ತಮ್ಮ ವಿಚ್ಚೇದನೆಯನ್ನು ಘೋಷಿಸಿದ ನಂತರ ನಟಿ ತಮ್ಮ Instagram ಹ್ಯಾಂಡಲ್‌ನಿಂದ ಇಬ್ಬರ ಹಲವಾರು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ತನ್ನ ಮಾಜಿ ಪತಿ ಹುಟ್ಟುಹಬ್ಬದಂದು ವಿಶ್ ಮಾಡದಿದ್ದಕ್ಕಾಗಿ ನೆಟ್ಟಿಗರಿಂದ ಟ್ರೋಲ್ ಆಗಿದ್ದರು ಫ್ಯಾಮಿಲಿ ಮ್ಯಾನ್2 ನಟಿ.
ಆದರೂ ನಟಿ ನವೆಂಬರ್ 26, ಶುಕ್ರವಾರದಂದು ತನ್ನ ಮಾಜಿ ಮಾವ ನಾಗಾರ್ಜುನ ಅವರ ಸ್ಟುಡಿಯೋಗೆ ಭೇಟಿ ನೀಡಿದಾಗ ನಟಿ ಅಕ್ಕಿನೇನಿ ಕುಟುಂಬದೊಂದಿಗಿನ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಅವರು ಹೈದರಾಬಾದ್‌ನ(Hyderabad) ಅನ್ನಪೂರ್ಣ ಸ್ಟುಡಿಯೋಸ್‌ಗೆ ಆಗಮಿಸಿದ ಸುದ್ದಿ ವೈರಲ್ ಆಗುತ್ತಿದ್ದಂತೆ, ಅವರ ಭೇಟಿಗೆ ಕಾರಣವೇನು ಎಂದು ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದರು. ಗುಣಶೇಖರ್ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಲು ಅವರು ಸ್ಟುಡಿಯೋದಲ್ಲಿದ್ದರು ಎನ್ನಲಾಗಿದೆ. ಶಾಕುಂತಲಂ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
ನಾಗ ಚೈತನ್ಯ ಮತ್ತು ಸಮಂತಾ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವದ ಕೆಲವೇ ದಿನಗಳ ಮೊದಲು ವಿಚ್ಚೇದನೆ ಘೋಷಣೆ ಮಾಡಿದರು. ಅದೇ ತಿಂಗಳ ನಂತರ ಸಮಂತಾ ತನ್ನ ಇನ್ಸ್ಟಾಗ್ರಾಮ್ನಿಂದ ಮಾಜಿ ಪತಿ ಜೊತೆಗಿನ ತನ್ನ ಫೋಟೋಗಳನ್ನು ಸಹ ಡಿಲೀಟ್ ಮಾಡಿದ್ದರಯ. ನಟರು 2017 ರಲ್ಲಿ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್‌ನಲ್ಲಿ ಮದುವೆಯಾಗಿದ್ದರು.
ಡೌನ್‌ಟೌನ್ ಅಬ್ಬೆ ಖ್ಯಾತಿಯ BAFTA-ವಿಜೇತ ಚಲನಚಿತ್ರ ನಿರ್ಮಾಪಕ ಫಿಲಿಪ್ ಜಾನ್ ನಿರ್ದೇಶಿಸಲಿರುವ ಅರೇಂಜ್‌ಮೆಂಟ್ಸ್ ಆಫ್ ಲವ್‌ನಲ್ಲಿ ನಟಿ ತನ್ನ ಅಂತರರಾಷ್ಟ್ರೀಯ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಲಿದ್ದಾರೆ.
'ಅರೇಂಜ್‌ಮೆಂಟ್ಸ್ ಆಫ್ ಲವ್' ಎಂಬುದು ಭಾರತೀಯ ಲೇಖಕ ಟೈಮೆರಿ ಎನ್. ಮುರಾರಿಯವರ ಅದೇ ಶೀರ್ಷಿಕೆಯ 2004 ರ ಹೆಚ್ಚು ಮಾರಾಟವಾದ ಕಾದಂಬರಿಯ ರೂಪಾಂತರವಾಗಿದೆ. ಸಮಂತಾ ತನ್ನ ಸ್ವಂತ ಪತ್ತೇದಾರಿ ಏಜೆನ್ಸಿಯನ್ನು ನಡೆಸುತ್ತಿರುವ 27 ವರ್ಷದ ಪ್ರಗತಿಪರ ದ್ವಿಲಿಂಗಿ ತಮಿಳು ಮಹಿಳೆಯ ಪಾತ್ರವನ್ನು ಮಾಡಲಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್‌ನ ಎರಡನೇ ಸೀಸನ್‌ನಲ್ಲಿ ರಾಜಿ ಪಾತ್ರವನ್ನು ನಿರ್ವಹಿಸಿದ ನಂತರ ಸಮಂತಾ ಅಕ್ಕಿನೇನಿ ಅವರ ಜನಪ್ರಿಯತೆಯು ಗಗನಕ್ಕೇರಿತು.