ಕೇರಳದ ಸಾಂಪ್ರದಾಯಿಕ ಸೀರೆ ಲುಕ್‌ನಲ್ಲಿ ದಕ್ಷಿಣದ ನಟಿಯರು!

Suvarna News   | Asianet News
Published : Aug 18, 2021, 04:29 PM IST

ಕೇರಳದ ಪ್ರಸಿದ್ಧ ಹಬ್ಬ ಓಣಂ. ಆಗಸ್ಟ್ 12 ರಿಂದ ಓಣಂ ಆರಂಭವಾಗಿದ್ದು ಆಚರಣೆ ಆಗಸ್ಟ್ 23ರವರೆಗೆ ಇರುತ್ತದೆ. ಮುಖ್ಯ ಸೆಲೆಬ್ರೆಷನ್ ಆಗಸ್ಟ್ 21 ರಂದು ನಡೆಯಲಿದೆ. ಈ ಸಂಧರ್ಭದಲ್ಲಿ ಕೇರಳದ ಸಾಂಪ್ರದಾಯಿಕ ಸೀರೆಯಲ್ಲಿ ದಕ್ಷಿಣ ಭಾರತದ ನಟಿಯರ ಫೋಟೋಗಳು ಇಲ್ಲಿವೆ.

PREV
18
ಕೇರಳದ ಸಾಂಪ್ರದಾಯಿಕ ಸೀರೆ ಲುಕ್‌ನಲ್ಲಿ ದಕ್ಷಿಣದ ನಟಿಯರು!

ಕೇರಳದ ಪ್ರಸಿದ್ಧ ಹಬ್ಬ ಓಣಂ ಸಂದರ್ಭದಲ್ಲಿ ಕೇರಳದ ಸಾಂಪ್ರದಾಯಿಕ ಸೀರೆಯಲ್ಲಿ ದಕ್ಷಿಣ ಭಾರತದ ನಟಿಯರ ಫೋಟೋಗಳು ಇಲ್ಲಿವೆ. ಸಮಂತಾ ಅಕ್ಕಿನೇನಿ ಅವರಿಂದ ಹಿಡಿದು, ಕಾವ್ಯ ಮಾಧವನ್, ನಯನತಾರಾವರೆಗೂ ಕಸವು ಸೀರೆಯಲ್ಲಿ ಮಿಂಚುತ್ತಿರುವ ಸೌತ್‌ ಸ್ಟಾರ್ಸ್‌.

28

ಈ ಸಾಂಪ್ರದಾಯಿಕ ಲುಕ್‌ನಲ್ಲಿ ನಯನತಾರಾ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ತನ್ನ ಕೂದಲನ್ನು ಕಟ್ಟದೆ ಮಿನಿಮಮ್‌ ಮೇಕಪ್‌ನೊಂದಿಗೆ ಕೇರಳದ ಸೀರೆ ಲುಕ್‌ ಅನ್ನು ಪೂರ್ಣಗೊಳಿಸಿದರು.
 

38

ಕಾವ್ಯಾ ಮಾಧವನ್ ಕೇರಳದ ಅತ್ಯಂತ ಪ್ರಸಿದ್ಧ ನಟಿಯರಲ್ಲಿ ಒಬ್ಬರು. ಸಹಜವಾಗಿ ಓಣಂ ಈ ನಟಿಗೆ ವಿಶೇಷ ಆಚರಣೆಯಾಗಿದೆ. ಕಾವ್ಯಾ ಮಾಧವನ್ ತನ್ನ ಸಾಂಪ್ರದಾಯಿಕ ಆಫ್-ವೈಟ್ ರೇಷ್ಮೆ ಸೀರೆಯನ್ನು ಕಾಂಟ್ರ್ಯಾಸ್ಟ್‌  
ಹಸಿರು ಬ್ಲೌಸ್‌ ಜೊತೆ ಮ್ಯಾಚ್‌ ಮಾಡಿದ್ದಾರೆ. ಕೂದಲಿಗೆ ಮುಡಿದಿರುವ ಮಲ್ಲಿಗೆ ನಟಿಯ ಸೌಂದರ್ಯವನ್ನು ಇನ್ನೂ ಹೆಚ್ಚಿಸಿದೆ.

48

ಕೀರ್ತಿ ಸುರೇಶ್ ಕೇರಳದ ಸಾಂಪ್ರದಾಯಿಕ ಹಾಫ್‌ ಸೀರೆಯಲ್ಲಿ ಹೀಗೆ ಕಾಣಿಸಿಕೊಂಡಿದ್ದರು. ಡಾಟೆಡ್‌ ಬ್ಲೌಸ್‌ ಅನ್ನು ನಟಿ ಸ್ಕರ್ಟ್‌ಗೆ ಮ್ಯಾಚ್‌ ಮಾಡಿದ್ದಾರೆ. ಮಿನಿಮಮ್‌ ಮೇಕಪ್ ಜೊತೆ  ಕೂದಲನ್ನು ಅರ್ಧ ಕಟ್ಟಿಕೊಂಡಿದ್ದಾರೆ ಕೀರ್ತಿ.

58

ಕೇರಳ ಕಸವು ಸೀರೆಯಲ್ಲಿ ಸಾಯಿ ಪಲ್ಲವಿ ಅವರ ಈ ಲುಕ್‌ ಸಕ್ಕತ್‌ ವೈರಲ್‌ ಆಗಿದೆ. ನಟಿಯ ಈ ಟ್ರೆಡಿಷನಲ್‌ ಡ್ರೆಸ್‌ ಅನ್ನು ಫ್ಯಾನ್ಸ್ ತುಂಬಾ ಮೆಚ್ಚಿಕೊಂಡಿದ್ದಾರೆ. ಚಿನ್ನದ ಆಭರಣಗಳೊಂದಿಗೆ ತನ್ನ ಲುಕ್‌ ಕಂಪ್ಲೀಟ್‌ ಮಾಡಿರುವ ಸಾಯಿ ಅವರ ಅಂದವನ್ನು ಮಲ್ಲಿಗೆ ಸುತ್ತಿದ ಹೇರ್‌ಸ್ಟೈಲ್‌ ಇನ್ನೂ ಹೆಚ್ಚಿಸಿದೆ.

68

ಮಂಜು ವಾರಿಯರ್ ಮಾಲಿವುಡ್‌ನ ಅತ್ಯಂತ ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಸಾಂಪ್ರದಾಯಿಕ ಸೀರೆಗಳನ್ನು ಧರಿಸುವುದರಲ್ಲಿ ಈ ನಟಿಯಿಂದ ಸ್ಫೂರ್ತಿ ಪಡೆಯಬಹುದು. ಈ ಫೋಟೋದಲ್ಲಿ ಅವರು ಕಸವು ಸೀರೆಯನ್ನು ಕೆಂಪು ಬ್ಲೌಸ್‌ ಜೊತೆ ಮ್ಯಾಚ್‌ ಮಾಡಿದ್ದಾರೆ.

78

ಸಮಂತಾ ಅಕ್ಕಿನೇನಿ ದಕ್ಷಿಣದ ಜನಪ್ರಿಯ ಹಾಗೂ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಸಮಂತಾರ ಸ್ಟೈಲ್‌ ಸ್ಟೇಟ್ಮೇಂಟ್‌ ಫೇಮಸ್‌. ಸಾಂಪ್ರದಾಯಿಕ ಅಥವಾ ಆಧುನಿಕ ಯಾವುದೇ ಔಟ್‌ಫಿಟ್‌ ಇರಲ್ಲಿ ನಟಿ ಗಮನ ಸೆಳೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಕೇರಳದ ಟ್ರೆಡಿಷನಲ್‌ ಸೀರೆಯ ಲುಕ್‌ ಅನ್ನು ಸಮಂತಾ ಹೀಗೆ ಕ್ಯಾರಿ ಮಾಡಿದ್ದಾರೆ. 

88

ನಟಿ ಕಲ್ಯಾಣಿ ಪ್ರಿಯದರ್ಶನ್ ಸ್ಪಾಗೆಟ್ಟಿ ಸ್ಟ್ರಾಪ್ ಬ್ಲೌಸ್‌ ಜೊತೆ ಗೋಲ್ಡನ್‌ ಟಿಶ್ಯೂ ಸೀರೆ ಧರಿಸಿದ್ದಾರೆ. ಸೀರೆಯ ಟ್ರೆಡಿಷನಲ್‌ ಲುಕ್‌ಗೆ ಪ್ರಿಯದರ್ಶಿನಿ ಅವರು ಮಾಡ್ರನ್‌ ಟಚ್‌ ನೀಡಿದ್ದಾರೆ.ಕಲ್ಯಾಣಿ ತನ್ನ ಲುಕ್‌ ಅನ್ನು ಕೆಂಪು ಬಳೆಗಳು ಮತ್ತು  ನೆಕ್‌ಪೀಸ್‌ನೊಂದಿಗೆ ಪೇರ್‌ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories