ಟ್ಯಾಲೆಂಟೆಡ್ ಸಮಂತಾ ಬಾಲಿವುಡ್‌ ಸಿನಿಮಾ ಯಾಕೆ ಮಾಡಲ್ಲ..? ಸ್ಟ್ರಾಂಗ್ ರೀಸನ್ ಹೇಳಿದ ನಟಿ

  • ಸೌತ್‌ ನಟಿ ಸಮಂತಾ ಬಾಲಿವುಡ್‌ ಸಿನಿಮಾ ಯಾಕೆ ಮಾಡಲ್ಲ ?
  • ಕಾಲಿವುಡ್, ಟಾಲಿವುಡ್‌ನಲ್ಲಿ ಮಿಂಚೋ ಹುಡುಗಿಗೆ ಬಾಲಿವುಡ್ ಎಂಟ್ರಿ ಸುಲಭ
  • ಬಾಲಿವುಡ್ ಸಿನಿಮಾ ಮಾಡದಿರೋಕೆ ಕಾರಣ ಹೇಳಿದ ಸಮಂತಾ
ತಮಿಳು ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿ ಜನಪ್ರಿಯ ನಟಿಯಾಗಿರುವ ಸಮಂತಾ ಅಕ್ಕಿನೇನಿ ಇದುವರೆಗೆ ಬಾಲಿವುಡ್‌ಗೆ ಕಾಲಿಟ್ಟಿಲ್ಲ.
ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಬಾಲಿವುಡ್‌ನಲ್ಲಿ ನಟಿಸದ ತಮ್ಮ ನಿರ್ಧಾರವನ್ನು ನಟಿ ವಿವರಿಸಿದ್ದಾರೆ.

ಹಿಂದಿ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಲು ಅವರು ಹೆದರುತ್ತಾರೆ ಎಂದು ಹೇಳಿದ್ದಾರೆ.
ಪ್ರಸ್ತುತ ಸಮಂತಾ ತಮ್ಮ ಮೊದಲ ಹಿಂದಿ ವೆಬ್ ಸಿರೀಸ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.
ಇದು ಡಿಜಿಟಲ್ ಜಾಗದಲ್ಲಿ ನಟಿಯ ಚೊಚ್ಚಲ ಪ್ರವೇಶ
ರಾಜ್ ಮತ್ತು ಡಿಕೆ ಅವರ ದಿ ಫ್ಯಾಮಿಲಿ ಮ್ಯಾನ್ ನ ಎರಡನೇ ಸೀಸನ್‌ನಲ್ಲಿ ಮನೋಜ್ ಬಾಜಪೇಯಿಗೆ ಒಪೊಸಿಟ್‌ನಲ್ಲಿ ಕಾಣಿಸಲಿದ್ದಾರೆ ಸಮಂತಾ
ಸಮಂತಾ ಅವರಿಗೆ ಹಿಂದಿ ಪ್ರಾಜೆಕ್ಟ್ ಸೈನ್ ಮಾಡಲು ಇಷ್ಟು ಸಮಯ ಯಾಕೆ ಬೇಕಾಯ್ತು ಎಂದು ಹೇಳಿದ್ದಾರೆ.
ಏಕೆಂದರೆ ನಾನು ಹೆದರುತ್ತೇನೆ. ಅಲ್ಲಿನ ಪ್ರತಿಭೆ ಅದ್ಭುತವಾಗಿದೆ. ನನಗೆ ಭಯವಾಗಿದೆ ಎಂದಿದ್ದಾರೆ ನಟಿ.
ರೊಮ್ಯಾಂಟಿಕ್ ಬಾಲಿವುಡ್ ಚಿತ್ರವೊಂದರಲ್ಲಿ ನಟಿಸಿದರೆ ಎದುರು ಜೋಡಿಯಾಗಲು ಬಯಸುವ ನಟನ ಹೆಸರನ್ನು ಸಹ ಸಮಂತಾಗೆ ಕೇಳಲಾಯಿತು.
ಅವರು ರಣಬೀರ್ ಕಪೂರ್ ಅವರನ್ನು ಆಯ್ಕೆ ಮಾಡಿದ್ದಾರೆ.
2010 ರಲ್ಲಿ, ಸಮಂತಾ ಯೆ ಮಾಯಾ ಚೆಸಾವ್ ಮೂಲಕ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟರು.
ನಂತರ ಇದನ್ನು ಹಿಂದಿಯಲ್ಲಿ ಏಕ್ ದಿವಾನಾ ಥಾ ಎಂದು ಸಿನಿಮಾ ಮಾಡಲಾಯಿತು.
ಡೂಕುಡು, ಈಗಾ, ಅಟ್ಟಾರಿಂಟಿಕಿ ದಾರೆಡಿ, ಕಥಿ, ಥೇರಿ ಮತ್ತು ರಂಗಸ್ಥಲಂನಂತಹ ಹಲವಾರು ಯಶಸ್ವಿ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
ನಟಿ ಸಮಂತಾ ಬಹುತೇಕ ಸೌತ್‌ನಟಾಪ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ
ನಟಿ ತಮ್ಮದೇ ಆದ ಫ್ಯಾಷನ್ ಬ್ರ್ಯಾಂಡ್ ಸಾಕಿವರ್ಲ್ಡ್‌ ಮೂಲಕ ಈಗ ಸಕ್ಸಸ್‌ಫುಲ್ ಬ್ಯುಸಿನೆಸ್ ವುಮೆನ್ ಆಗಿಯೂ ಗುರುತಿಸಿಕೊಂಡಿದ್ದಾರೆ

Latest Videos

click me!