ಲಾಸ್ ಎಂಜಲೀಸ್(ಮೇ 24) ಗಂಡ ನಿಕ್ ಜತೆ ಕಾಣಿಸಿಕೊಂಡಾಗಲೆಲ್ಲ ನಟಿ ಪ್ರಿಯಾಂಕಾ ಚೋಪ್ರಾ ಸುದ್ದಿ ಮಾಡುತ್ತಾರೆ. ಅವರು ಧರಿಸಿ ಆಗಮಿಸುವ ವಿಶೇಷ ಡ್ರೆಸ್ ಎಲ್ಲರನ್ನು ಸೆಲೆಯುತ್ತದೆ. ಪ್ರಿಯಾಂಕಾ ಚೋಪ್ರಾ ಈ ಸಲ ಬಿಲ್ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದರು. ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡ ಬೆಡಗಿ ಸೋಶಿಯಲ್ ಮೀಡಿಯಾದಲ್ಲಿಯೂ ಹವಾ ಸೃಷ್ಟಿಸಿದರು. ಭಾನುವಾರ ರಾತ್ರಿ ಅದ್ದೂರಿಯಾಗಿ ಬಿಲ್ ಬೋರ್ಡ್ ಮ್ಯೂಸಿಕ್ ಅವಾರ್ಡ್ಸ್ 2021 ಕಾರ್ಯಕ್ರಮ ಆರಂಭವಾಯಿತು. ತಮ್ಮ ಫ್ಯಾಷನ್ ಸೆನ್ಸ್ ನಿಂದ ಪ್ರಿಯಾಂಕಾ ಹಾಲಿವುಡ್ ಮಂದಿಯನ್ನು ಸೆಳೆದಿದ್ದಾರೆ. ಬಾಲಿವುಡ್ ನಲ್ಲಿ ಮಿಂಚಿದ್ದ ಪ್ರಿಯಾಂಕಾ ನಂತರ ತಮಗಿಂತ ಕಿರಿಯ ನಿಕ್ ಜೋನಾಸ್ ಅವರನ್ನು ವಿವಾಹವಾಗಿದ್ದರು. ಪ್ರಶಸ್ತಿ ಕಾರ್ಯಕ್ರಮಗಳಿಗೆ ವಿಶಿಷ್ಟ ವಿನ್ಯಾಸದ ಉಡುಗೆ ತೊಟ್ಟು ಬರುವ ಪ್ರಿಯಾಂಕ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ. Priyanka Chopra attends the Billboard Music Awards with Nick Jonas in a daring gold ‘naked’ dress ಮ್ಯೂಸಿಕ್ ಅವಾರ್ಡ್ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚು