ಮನೆಗೆ ಬಂದವರಿಗೆ ಧೈರ್ಯ ತುಂಬಿ ಕಳಿಸಿದ ಸೋನು ಸೂದ್

First Published | May 24, 2021, 8:16 PM IST

ಮುಂಬೈ (ಮೇ  24) ಕೊರೋನಾ ಕಾಲದ ರಿಯಲ್ ಹೀರೋ ನಟ ಸೋನು ಸೂದ್ ಅವರ ಮನೆಗೆ ಜನರು ನೆರವು ಕೇಳಿಕೊಂಡು ಹೋಗಿದ್ದಾರೆ. ಸೋನು ಸಹ ಅಷ್ಟೇ ಸಾವಧಾನವಾಗಿ ಎಲ್ಲವನ್ನು ಆಲಿಸಿ ಭರವಸೆ  ತುಂಬಿದ್ದಾರೆ.

ಭಾನುವಾರ ಮುಂಬೈನ ಸೋನು ಸೂದ್ ಮನೆ ಮುಂದೆ ಜನರು ನೆರವು ಕೇಳಿಕೊಂಡು ತೆರಳಿದ್ದರು.
ಸೋನು ಸೂದ್ ಅವರೆ ಹೊರಗೆ ಬಂದು ಎಲ್ಲರನ್ನು ವಿಚಾರಿಸಿದ್ದಾರೆ.
Tap to resize

ಈ ವೇಳೆ ಜನರು ನಟನ ಕಾಲಿಗೆ ಬೀಳಲು ಮುಂದಾಗಿದ್ದು ನಟ ಅವರನ್ನು ಸಮಾಧಾನಪಡಿಸಿದ್ದಾರೆ.
ನೊಂದವರಿಗೆ ಸಾಂತ್ವನ ಹೇಳಿದ ಸೋನು ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕ ಬರೆದುಕೊಂಡಿದ್ದಾರೆ.
ಕೊರೋನಾ ಸಂಕಷ್ಟದಿಂದ ತಮ್ಮವರನ್ನು ಕಳೆದುಕೊಂಡವರು ನನ್ನ ಬಳಿಗೆ ಬಂದಿದ್ದರು. ಅವರಿಗೆ ಧೈರ್ಯ ತುಂಬಿದ್ದೇನೆ ಎಂದಿದ್ದಾರೆ.
ಕೊರೋನಾ ಸಂಕಷ್ಟದಲ್ಲಿ ಕಾರ್ಮಿಕರಿಗೆ, ನೊಂದವರಿಗೆ ಸೋನು ನೆರವು ನೀಡಿಕೊಂಡೆ ಬಂದಿದ್ದಾರೆ.
ಕಳೆದ ಲಾಕ್ ಡೌನ್ ನಲ್ಲಿ ಕಾರ್ಮಿಕರು ಊರಿಗೆ ತೆರಳಲು ಸೋನು ನೆರವಾಗಿದ್ದರು.
ಬೆಂಗಳೂರಿನನಲ್ಲಿ ಆಖ್ಸಿಜನ್ ಸಮಸ್ಯೆ ಆದಾಗಲೂ ಸ್ಪಂದಿಸಿದ್ದರು. ಪ್ರವಾಹದಲ್ಲಿ ಪುಸ್ತಕ ಕಳೆದುಕೊಂಡಿದ್ದ ಬಾಲಕಿಗೆ ನೆರವಾಗಿದ್ದರು .

Latest Videos

click me!