ನಮ್ಮ ಆಹಾರ ನಾವೇ ಬೆಳೆಯೋದು ಕೂಲ್ ಅಂತಾರೆ ಸಮಂತಾ: ಇಲ್ನೋಡಿ ಫೋಟೋಸ್

First Published | Sep 13, 2020, 11:42 AM IST

ಲಾಕ್‌ಡೌನ್ ಘೋಷಿಸಿದ ಮೇಲೆ ನಟಿ ಸಮಂತಾ ಅಕ್ಕಿನೇನಿ ಗಾರ್ಡನಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಫಿಟ್‌ನೆಟ್‌, ಯೋಗ, ಜಿಮ್ ಜೊತೆ ಟೆರೇಸ್ ಗಾರ್ಡನಿಂಗ್ ಕೂಡಾ ನೊಡ್ಕೊಳ್ತಾರೆ ನಟಿ. ಇಲ್ಲಿವೆ ಫೋಟೋಸ್

ಟೆರೇಸ್‌ ಮೇಲೆ ತರಕಾರಿ ಬೆಳೆಸಿ ಅದನ್ನೇ ಬಳಸುತ್ತಿದ್ದಾರೆ ನಟಿ ಸಮಂತಾ.
ಫ್ರೆಶ್ ಸೊಪ್ಪು ತರಕಾರಿ, ಟೊಮೆಟೋ, ಕ್ಯಾರೆಟ್‌ ಎಲ್ಲವೂ ಅವರ ಗಾರ್ಡನ್‌ನಲ್ಲಿದೆ.
Tap to resize

ನಾವು ಗಿಡ ಮಾಡುವ. ನೀವು ಬೀಜ ಬಿತ್ತುವಾಗ ಗಮನಿಸಬೇಕಾದ ವಿಚಾರಗಳು ಎಂದು ವಿಡಿಯೋ ಮಾಡಿ ಟಿಪ್ಸ್ ಕೊಡ್ತಾರೆ ನಟಿ.
ಬೀಜ ಬಿತ್ತೋದು ಹೇಗೆ ಅಂತಾನೂ ನಟಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಉದ್ದನೆ ಬರೆದು ಟಿಪ್ಸ್ ಕೊಟ್ಟಿದ್ದಾರೆ.
ಬೀಜಗಳ ಆಯ್ಕೆ, ಅವುಗಳ ಗುಣಮಟ್ಟ ಎಲ್ಲವನ್ನೂ ವಿವರಿಸಿದ್ದಾರೆ ನಟಿ ಸಮಂತಾ.
ಕೈ ತುಂಬಾ ಕ್ಯಾರೆಟ್‌ ಹಿಡಿದುಕೊಂಡು ಕ್ಯಾರೆಟ್ ಜ್ಯೂಸ್, ಕ್ಯಾರೆಟ್ ಪಚಡಿ, ಕ್ಯಾರೆಟ್ ಹಲ್ವ, ಕ್ಯಾರೆಟ್ ಫ್ರೈ, ಕ್ಯಾರೆಟ್ ಪಕೋಡ, ಕ್ಯಾರೆಟ್ ಇಡ್ಲಿ, ಕ್ಯಾರೆಟ್ ಸಮೋಸ ಎಂದು ಬರೆದು ವಾರ ಪೂರ್ತಿ ಇದನ್ನೇ ತಿನ್ನೋದು ಅಂತ ಹಾಸ್ಯವಾಗಿ ಹೇಳಿದ್ದಾರೆ ನಟಿ.
ಹಾಗೆಯೇ ಗ್ರೋ ಗ್ರೀನ್‌ಗಾಗಿ ತಮ್ಮನ್ನು ಬೆಂಬಲಿಸಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.
ನಮ್ಮ ಆಹಾರವನ್ನು ನಾವೇ ಬೆಳೆಸುವುದು ತುಂಬಾ ಕೂಲ್ ಅಂತ ಖುಷಿ ವ್ಯಕ್ತಪಡಿಸಿದ್ದಾರೆ ನಟಿ. ಹಾಗೆಯೇ ನೀವು ನನ್ನೊಡನೆ ಸೇರಿ ಎಂದು ಕರೆ ಕೊಟ್ಟಿದ್ದಾರೆ.

Latest Videos

click me!