ಡ್ರಗ್ಸ್ ಜಾಲದಲ್ಲಿ ಸಿಲುಕಿ ಅರೆಸ್ಟ್ ಆದ ಟಾಪ್ ಸೆಲೆಬ್ರಿಟಿಗಳಿವರು..!

First Published Sep 12, 2020, 11:46 AM IST

ಬಾಲಿವುಡ್ ನಟಿ ರಿಯಾ ಚಕ್ರವರ್ತಿಯಿಂದ ತೊಡಗಿ ಡಾಬರ್ಟ್ ಡೌನಿ ತನಕ ಬಹಳಷ್ಟು ಜನ ಸೆಲೆಬ್ರಿಗಳು ಇದುವರೆಗೆ ಡ್ರಗ್ಸ್ ಸಂಬಂಧ ಆರೋಪಗಳಲ್ಲಿ ಬಂಧಿಸಲ್ಪಟ್ಟಿದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ

ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕವಸ್ತು ಜಾಲವನ್ನು ಪತ್ತೆ ಹಚ್ಚುತ್ತಿರುವ ಎನ್‌ಸಿಬಿ ಬಾಲಿವುಡ್‌ ಸ್ಟಾರ್‌ಗಳ ಮೇಲೆ ಬಲೆ ಬೀಸಿದೆ.
undefined
ರಿಯಾ ಚಕ್ರವರ್ತಿ ಬಾಯ್ಬಿಟ್ಟ ಹೆಸರುಗಳು ಯಾರದ್ದು, ಅವರಿಗಿನ್ನು ಎನ್‌ಸಿಬಿ ಶಾಕ್ ಕೊಡಲಿದೆ. ಈ ನಡುವೆ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲಿ ಡ್ರಗ್ಸ್ ವಿಚಾರವಾಗಿ ಅರೆಸ್ಟ್ ಆದ ಸೆಲೆಬ್ರಿಟಿಗಳಿವರು.
undefined
ರಿಯಾ ಚಕ್ರವರ್ತಿ: ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋವಿಕ್ ಚಕ್ರವರ್ತಿಯನ್ನು ಎನ್‌ಸಿಬಿ ಡ್ರಗ್ಸ್ ಸಂಗ್ರಹ, ಮಾರಾಟ ಡೀಲಿಂಗ್ ವಿಚಾರವಾಗಿ ಬಂಧಿಸಿದೆ.
undefined
ತನಿಖೆಯಲ್ಲಿ ನಟಿ ಹಲವು ಪ್ರಮುಖರ ಹೆಸರು ಬಾಯಿಬಿಟ್ಟಿದ್ದಾಳೆ. ಆಕೆಯ ಜಾಮೀನು ಅರ್ಜಿಯೂ ತಿರಸ್ಕರಿಸಲ್ಪಟ್ಟಿದೆ.
undefined
ಜಾನ್ ಲೆನ್ನನ್: ದ ಬಿಟಲ್ಸ್ ಸಿನಿಮಾದ ಜಾನ್ ಲೆನ್ನನ್ ಡ್ರಗ್ಸ್ ವಿಚಾರದಲ್ಲಿ ಅರೆಸ್ಟ್ ಆಗಿದ್ದರು. ಲಂಡನ್‌ನ ಅವರ ಮನೆಯಲ್ಲಿ ರೈಡ್ ನಡೆದಾಗ ಅವರು ಅರ್ಧ ಗ್ರಾಂ ಮಾರ್ಫಿನ್ ಹಾಗೂ 200 ಗ್ರಾಂ ಹಾಶಿಶ್ ಹೊಂದಿದ್ದರು.
undefined
ಮೊದಲು ಇದು ತಮಗೆ ಸಂಬಂಧಿಸಿದ ಡ್ರಗ್ಸ್ ಅಲ್ಲ ಎಂದು ದಂಪತಿ ನಿರಾಕರಿಸಿದ್ದರು. ನಂತರ ಇವರು ತಪ್ಪೊಪ್ಪಿಕೊಂಡಿದ್ದಾರೆ. ನಂತರ ಅವರನ್ನು ವಾರ್ನ್ ಮಾಡಿ 150 ಬ್ರಿಟಿಷ್ ಪವಂಡ್ಸ್ ದಂಡ ವಿಧಿಸಲಾಯಿತು.
undefined
ಮ್ಯಾಥ್ಯು ಮೆಕ್‌ಕೊನೌಘೆ: ಆಸ್ಕರ್ ನಟ ಮ್ಯಾಥ್ಯು 1999ರಲ್ಲಿ ಬಂಧಿತರಾಗಿದ್ದರು. ಇವರು ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿ, ಸಾಗಾಟ ಮಾಡಿದ್ದರು.
undefined
ನಟ 9 ಗಂಟೆ ಜೈಲಿನಲ್ಲಿದ್ದರು. 1000 ಅಮೆರಿಕನ್ ಡಾಲರ್ ಬಾಂಡ್‌ ನೀಡಿ ಅವರು ಹೊರಗೆ ಬಂದಿದ್ದರು. ನಂತರ ಅವರ ವಿರುದ್ಧ ಇದ್ದ ಡ್ರಗ್ಸ್ ಆರೋಪಗಳನ್ನು ಕೈಬಿಡಲಾಯಿತು.
undefined
ಸಂಜಯ್ ದತ್: ಬಾಲಿವುಡ್ ಬ್ಯಾಡ್ ಬಾಯ್ ಸಂಜಯ್ ದತ್ ಅಮ್ಮ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ನಂತರ ಡ್ರಗ್ಸ್ ತೆಗೆದುಕೊಳ್ಳಲು ಆರಂಭಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಡ್ರಗ್ಸ್ ಇಟ್ಟುಕೊಂಡಿದ್ದಕ್ಕಾಗಿ ನಟ 1982ರಲ್ಲಿ ಬಂಧಿಸಲ್ಪಟ್ಟಿದ್ದರು.
undefined
ಸುಮಾರು 5 ತಿಂಗಳ ಕಾಲ ನಟ ಜೈಲಿನಲ್ಲಿದ್ದರು. ನಂತರ ಅಮೆರಿಕದ ವಿಮೋಚನಾ ಪುನರ್ವಸತಿಗೆ ಸೇರಿಕೊಂಡರು. ನಂತರ ತಮ್ಮ ಡ್ರಗ್ಸ್ ಅಡಿಕ್ಷನ್‌ಗೆ ಚಿಕಿತ್ಸೆ ಪಡೆದರು.
undefined
ಜಿಮಿ ಹೆಂಡ್ರಿಕ್ಸ್: ರಾಕ್ ಗಿಟಾರಿಸ್ಟ್ ಜಿಮಿ ಹೆಂಡ್ರಿಕ್ಸ್ 1969ರಲ್ಲಿ ಬಂಧಿಸಲ್ಪಟ್ಟಿದ್ದರು. ಟೊರಂಟೋ ವಿಮಾನ ನಿಲ್ದಾಣದಲ್ಲಿ ಅವರ ಬ್ಯಾಗ್‌ನಲ್ಲಿ ಹೆರಾಯಿನ್ ಪತ್ತೆಯಾಗಿತ್ತು. ನಟನನ್ನು ಬಂಧಿಸಿ 10000 ಅಮೆರಿಕನ್ ಡಾಲರ್ ದಂಡದ ಮೇಲೆ ಜಾಮೀನು ಪಡೆದಿದ್ದರು. ನಂತರ ಪೊಲೀಸರೇ ತಮ್ಮ ಬ್ಯಾಗ್‌ನಲ್ಲಿ ಡ್ರಗ್ಸ್ ಹಾಕಿದ್ದರು ಎಂದು ಅವರು ಆರೋಪಿಸಿದ್ದಾರೆ.
undefined
ರಾಬರ್ಟ್ ಡೌನಿ: ಐರನ್ ಮ್ಯಾನ್ ಖ್ಯಾತಿಯ ರಾಬರ್ಟ್ ಡೌನಿ ಹಲವು ಬಾರಿ ಡ್ರಗ್ಸ್ ವಿಚಾರದಲ್ಲಿ ಬಂಧಿಸಲ್ಪಟ್ಟಿದ್ದರು. ಮರಿಜುವಾನಾ, ಕೊಕೇನ್, ಹೆರಾಯಿನ್ ಸೇರಿ ಡ್ರಗ್ಸ್ ಸಂಗ್ರಹ ಆರೋಪ ನಟನ ಮೇಲಿತ್ತು. ಈ ಆರೋಪದಲ್ಲಿ ನಟ ಜೈಲು ಪಾಲಾಗಿದ್ದರು. ನ್ಯಾಯಾಲಯದ ಆದೇಶದ ಮಾದಕವಸ್ತು ಪರೀಕ್ಷೆಗೆ ಹಾಜರಾಗಲು ವಿಫಲವಾದ ಕಾರಣ ಮಾದಕ ದ್ರವ್ಯ ಸೇವನೆ ಆರೋಪದಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಲಾಗಿತ್ತು.
undefined
12 ತಿಂಗಳ ಶಿಕ್ಷೆ ನಂತರ ನಟನನ್ನು ಬಿಡುಗಡೆ ಮಾಡಲಾಯಿತು. ಆದರೂ ನಟ ಡ್ರಗ್ಸ್ ವ್ಯಸನದಿಂದ ಹೊರಗೆ ಬರಲಾಗಲಿಲ್ಲ. ನಂತರ ಆತನ ಗೆಳತಿ ಸೂಸನ್ ಲೇವಿನ್ ಆತನನ್ನು ಬದಲಾಯಿಸಿದಳು. 2005ರಲ್ಲಿ ವಿವಾಹಿತರಾದ ಇವರು ಇತ್ತೀಚೆಗಷ್ಟೇ 15 ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ.
undefined
ಪೌಲ್ ಮೆಕ್‌ಕಾಟ್ರ್ನಿ: ಪೌಲ್ ಡ್ರಗ್ಸ್ ವಿಚಾರದಲ್ಲಿ ಬಂಧಿತನಾದ ಮತ್ತೊಬ್ಬ ಸೆಲೆಬ್ರಿಟಿ. ಇವರು ಟೋಕಿಯೋ ವಿಮಾನ ನಿಲ್ದಾಣದಲ್ಲಿ ಗಾಂಜಾ ಜೊತೆಗೆ 1980ರಲ್ಲಿ ಸಿಕ್ಕಿಹಾಕಿಕೊಂಡಿದ್ದರು.
undefined
ಜಪಾನ್‌ನಲ್ಲಿ ಡ್ರಗ್ಸ್ ಬ್ಯಾನ್ ಆಗಿರುವುದರಿಂದ ಅದನ್ನು ತಮ್ಮ ಜೊತೆ ತಂದಿದ್ದಾಗಿ ಇವರು ಒಪ್ಪಿಕೊಂಡಿದ್ದಾರೆ.
undefined
ಸ್ನೂಪ್ ಡಾಗ್: ರಾಪರ್ ಸ್ನೂಪ್ ಡಾಗ್‌ ನಾರ್ವೆ ಪ್ರವೇಶಿಸುವುದನ್ನು ತಡೆಯಲಾಯಿತು. 8 ಗ್ರಾಂ ಗಾಂಜಾವನ್ನು ವಿಮಾನ ನಿಲ್ದಾಣದ ಮೂಲಕ ಒಯ್ಯಲು ಪ್ರಯತ್ನಿಸಿದ್ದರು. ಸ್ವೀಡನ್‌ನಲ್ಲಿ ನಟನ ಕಾರು ವಶಪಡಿಸಿದ ಪೊಲೀಸರು ಆತನ ಡ್ರಗ್ಸ್ ಪರೀಕ್ಷೆ ಮಾಡಿದ್ದರು.
undefined
ಡ್ರಗ್ಸ್ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರೂ ಪರೀಕ್ಷೆಯಲ್ಲಿ ಟೆಸ್ಟ್ ಪಾಸಿಟಿವ್ ಬಂದಿತ್ತು. ನಂತರ ಕೇಸನ್ನು ಕೈಬಿಡಲಾಯಿತು. ಸ್ವೀಡಿಷ್‌ನಲ್ಲಿದ್ದಾಗ ಅಮೆರಿಕ ರಾಪರ್ ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಂದು ಸ್ವೀಡಿಷ್ ಪೊಲೀಸರು ಖಚಿತಪಡಿಸಲು ಸಾಧ್ಯವಾಗದ ಕಾರಣ ಆತನ ವಿರುದ್ಧದ ಪ್ರಕರಣವನ್ನು ಕೈಬಿಡಲಾಯಿತು.
undefined
click me!