ಒಂದು ಮಹಿಳೆಯಾಗಿ ಹೊರಗೆ ಬಂದು ದುಡಿಯಲು, ಮಹಿಳೆಯನ್ನು ಹೆಚ್ಚಿನ ಸಂದರ್ಭದಲ್ಲಿ ವಸ್ತುವಾಗಿ ಮಾತ್ರ ಕಾಣುವ ಗ್ಲಾಮರ್ ಇಂಡಸ್ಟ್ರಿಯಲ್ಲಿ ಬದುಕಲು, ಪ್ರೀತಿಯಲ್ಲಿ ಬೀಳಲು, ಪ್ರೀತಿಯಿಂದ ಕೆಳಗೆ ಬೀಳಲು, ಹೀಗಾದರೂ ಮತ್ತೆ ಎದ್ದು ನಿಂತು ಹೋರಾಡಲು ಬಹಳಷ್ಟು ಧೈರ್ಯ ಹಾಗೂ ಶಕ್ತಿ ಬೇಕು.ನನ್ನ ವಿಚ್ಛೇದನೆ ನನ್ನ ವೈಯಕ್ತಿಕ ವಿಚಾರ. ಅದರ ಬಗ್ಗೆ ನೀವು ಮಾತನಾಡಬಾರದು. ನಮ್ಮ ಸಂಗತಿ ಖಾಸಗಿಯಾಗಿರಬೇಕೆಂಬ ನಮ್ಮ ಉದ್ದೇಶ. ಇದರ ಬಗ್ಗೆ ನೀವು ಬೇಕಾಬಿಟ್ಟಿಯಾಗಿ ಮಾತನಾಡುವ ಅವಶ್ಯಕತೆ ಇಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದರು.