Salman Khan ಬಾಳಲ್ಲಿ ಬಿರುಗಾಳಿ: ಮೃದು ಆಹಾರ ತಿನ್ನಲೂ ಆಗದ ಭೀಕರ ಕಾಯಿಲೆ- ಶಾಕಿಂಗ್​ ವಿಷ್ಯ ರಿವೀಲ್

Published : Sep 28, 2025, 05:48 PM IST

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು 'ಆ*ತ್ಮಹತ್ಯೆ ಕಾಯಿಲೆ' ಎಂದು ಕರೆಯಲ್ಪಡುವ ಟ್ರೈಜಿಮಿನಲ್ ನರಶೂಲೆ ಎಂಬ ಗಂಭೀರ ಆರೋಗ್ಯ ಸ್ಥಿತಿಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಕಾಯಿಲೆಯು ಉಂಟುಮಾಡುವ ಅಸಹನೀಯ ಮುಖದ ನೋವಿನಿಂದಾಗಿ ತಾವು ಸಾವಿನ ಬಗ್ಗೆಯೂ ಯೋಚಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.  

PREV
110
ಸಲ್ಮಾನ್​ ಖಾನ್​ ಬಾಳಲ್ಲಿ ಬಿರುಗಾಳಿ

ವಯಸ್ಸು 60 ಆದರೂ ಮೊನ್ನೆ ಮೊನ್ನೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 20ರ ಹರೆಯದ ಬೆಡಗಿಯರ ಜೊತೆಗೂ ರೊಮಾನ್ಸ್‌ ಮಾಡುವಲ್ಲಿ ಎತ್ತಿದ ಕೈ ಎನ್ನಿಸಿಕೊಂಡಿರುವ ಬಾಲಿವುಡ್‌ ನಟರಲ್ಲಿ ಒಬ್ಬರು ಸಲ್ಮಾನ್‌ ಖಾನ್‌. ಕಟ್ಟುಮಸ್ತಾದ ದೇಹ ನೋಡಿದವರು ಅಬ್ಬಾ ನಟನಿಗೆ ಇಷ್ಟು ವಯಸ್ಸಾಯ್ತಾ ಎಂದು ಅಚ್ಚರಿಪಟ್ಟುಕೊಳ್ಳುವುದು ಇದೆ. ಆದರೆ ಬಣ್ಣದ ಲೋಕ ಹೊರಗಡೆಯಿಂದ ನೋಡುವಂತೆ ಇರುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಸಲ್ಮಾನ್‌ ಖಾನ್‌ ಅವರ ಬದುಕು.

210
ಆ*ತ್ಮಹತ್ಯೆ ಕಾಯಿಲೆ ಬಗ್ಗೆ ನಟ

ಬಾಲಿವುಡ್‌ ಭಾಯಿಜಾನ್‌ ಎಂದೇ ಫೇಮಸ್‌ ಆಗಿರೋ ಸಲ್ಮಾನ್‌ ಖಾನ್‌ (Salman Khan ) ಅವರು ಟ್ರೈಜಿಮಿನಲ್ ನರಶೂಲೆ ಎಂಬ ಗಂಭೀರ ಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಇದನ್ನು "ಆ*ತ್ಮಹತ್ಯೆ ಕಾಯಿಲೆ" ಎಂದೂ ಕರೆಯುತ್ತಾರೆ. ಇದು ಅಸಹನೀಯ ಮುಖದ ನೋವನ್ನು ಉಂಟುಮಾಡುವ ಕಾರಣ ಇದನ್ನು ಹೀಗೆ ಕರೆಯಲಾಗುತ್ತದೆ. ಈ ಮೂಲಕ ಸಲ್ಮಾನ್​ ಖಾನ್​ ಶಾಕಿಂಗ್​ ವಿಷ್ಯವನ್ನು ರಿವೀಲ್​ ಮಾಡಿದ್ದಾರೆ.

310
ಬ್ರೈನ್ ಅನ್ಯೂರಿಸಮ್ ಸಮಸ್ಯೆ

ಕೆಲ ತಿಂಗಳ ಹಿಂದೆಯೂ ನಟ ಈ ಬಗ್ಗೆ ಮಾತನಾಡಿದ್ದರು. ಆತ್ಮ*ಹತ್ಯೆಗೆ ಯತ್ನ ಮಾಡಿರುವುದಾಗಿ ಹೇಳಿದ್ದರು. ಆಗ ಅವರು ತಮಗೆ ಬ್ರೈನ್ ಅನ್ಯೂರಿಸಮ್ ಸಮಸ್ಯೆ ಬಗ್ಗೆ ಹೇಳಿದ್ದರು. ಬ್ರೈನ್ ಅನ್ಯೂರಿಸಮ್ ಎಂದರೆ ಮಿದುಳಿನ ರಕ್ತನಾಳದಲ್ಲಿ ಊತ ಅಥವಾ ಬಲೂನ್ ಆಕಾರದ ರಚನೆ ಉಂಟಾಗುವುದು. ಇದು ರಕ್ತನಾಳದ ದುರ್ಬಲ ಸ್ಥಳದಿಂದ ಉಂಟಾಗುತ್ತದೆ. ಹೆಚ್ಚಿನ ಅನ್ಯೂರಿಸಮ್ ಗಳು ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ, ಅದು ಛಿದ್ರವಾದರೆ, ಅದು ಮಾರಣಾಂತಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದಿದ್ದರು.

410
ಅಸಹನೀಯ ನೋವು

ಇದೀಗ ಅವರು ಟ್ರೈಜಿಮಿನಲ್ ನರಶೂಲೆ ಬಗ್ಗೆ ಮಾತನಾಡಿದ್ದಾರೆ. ಇದು ಅಸಹನೀಯ ಮುಖದ ನೋವನ್ನು ಉಂಟುಮಾಡುತ್ತದೆ. ಇದು ನರವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ಇದು ಮುಖದಲ್ಲಿನ ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ, ಹಠಾತ್, ತೀಕ್ಷ್ಣವಾದ, ವಿದ್ಯುತ್ ಆಘಾತದಂತಹ ನೋವನ್ನು ಉಂಟುಮಾಡುತ್ತದೆ, ಇದು ತಿನ್ನುವಂತಹ ಸರಳ ಕೆಲಸಗಳನ್ನು ಸಹ ನೋವಿನಿಂದ ಕೂಡಿಸುತ್ತದೆ.

510
ಟ್ರೈಜಿಮಿನಲ್ ನ್ಯೂರಾಲ್ಜಿಯಾ ನರಗಳ ಸಮಸ್ಯೆ

ಸುಲಭದಲ್ಲಿ ಹೇಳಬೇಕಾದರೆ, ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂದರೆ ಮುಖದಲ್ಲಿ ತೀವ್ರವಾದ ನೋವು ಉಂಟುಮಾಡುವ ನರಗಳ ಅಸ್ವಸ್ಥತೆಯಾಗಿದೆ. ಈ ನೋವು ವಿದ್ಯುತ್ ಆಘಾತದಂತೆ ಭಾಸವಾಗುತ್ತದೆ. ಟ್ರೈಜಿಮಿನಲ್ ನರವು ಮುಖದಿಂದ ನೋವು, ಸ್ಪರ್ಶ ಮತ್ತು ತಾಪಮಾನದ ಸಂವೇದನೆಗಳನ್ನು ಮೆದುಳಿಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಲ್ಮಾನ್‌ ಖಾನ್‌ ಅವರ ಈ ಕಾಯಿಲೆಯನ್ನು ಸ್ಯೂಸೈ*ಡ್‌ ಡಿಸೀಜ್‌ ಎಂದೂ ಕರೆಯುತ್ತಾರೆ.

610
ನರಗಳ ಮೇಲಿನ ಒತ್ತಡ

ಈ ಸ್ಥಿತಿಗೆ ಮುಖ್ಯ ಕಾರಣ ನರಗಳ ಮೇಲಿನ ಒತ್ತಡ. ನರ ಸಂಕುಚಿತಗೊಂಡಾಗ ಅದು ಮೆದುಳಿಗೆ ತಪ್ಪಾದ ಸಂಕೇತಗಳನ್ನು ಕಳುಹಿಸುತ್ತದೆ, ಮುಖದಲ್ಲಿ ತೀಕ್ಷ್ಣವಾದ, ವಿದ್ಯುತ್ ಆಘಾತದಂತಹ ನೋವನ್ನು ಉಂಟುಮಾಡುತ್ತದೆ. ಈ ನೋವು ಯಾವ ಪರಿಯಲ್ಲಿ ಇದೆ ಎಂದರೆ, ಈ ನೋವಿನಿಂದಾಗಿ ಅವರು ಅಗಿಯಲು ಸಾಧ್ಯವಾಗದ ಕಾರಣ ಆಮ್ಲೆಟ್ ತಿನ್ನಲು ಅವರಿಗೆ ಒಂದೂವರೆ ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದಾರೆ.

710
ಆತ್ಮ*ಹತ್ಯೆಯ ಬಗ್ಗೆ ಯೋಚನೆ

ಇದನ್ನು ಸಲ್ಮಾನ್‌ ಖಾನ್‌ ಅವರು ಹೇಳಿರುವುದು ಸಾಕಷ್ಟು ವರದಿಯಾಗಿತ್ತು. ಆದರೆ ಇದೇ ಸಮಸ್ಯೆಯಿಂದಾಗಿ ತಾವು ಆತ್ಮ*ಹತ್ಯೆಯ ಬಗ್ಗೆ ಯೋಚನೆ ಮಾಡಿರುವುದಾಗಿ ನಟಿ ಹೇಳಿರುವುದು ಇದೀಗ ಬಹಿರಂಗಗೊಂಡಿದ್ದು, ಇದರಿಂದ ಬಾಲಿವುಡ್‌ ಬೆಚ್ಚಿಬಿದ್ದಿದೆ. ಜೊತೆಗೆ, ಅಭಿಮಾನಿಗಳು ಇದನ್ನು ಕೇಳಿ ದಂಗಾಗಿದ್ದಾರೆ.

810
ಸಾಯುವ ಹಾದಿ...

ಇಂಥ ಸಮಸ್ಯೆಗಳಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ತಿಳಿಯದೇ ಕೆಲವು ಸಲ ಸಾಯುವ ಹಾದಿಯನ್ನೂ ತುಳಿಯುವ ಪ್ರಯತ್ನ ಮಾಡಿದೆ. ಆದರೆ ಬೇರೆ ಬೇರೆ ಕಾರಣಗಳಿಂದ ಹಾಗೆ ಮಾಡಲು ಆಗಲಿಲ್ಲ ಎಂದಿದ್ದಾರೆ. ಇದೇ ಸಮಸ್ಯೆಯಿಂದ ಮತ್ತೆ ನಟನಿಗೆ ಅದೇ ಯೋಚನೆ ಬಂದರೆ ಹೇಗಪ್ಪಾ ಎಂದು ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ.

910
ಮದುವೆಯಾಗಲ್ಲ ಎಂದಿದ್ದ ಸಲ್ಮಾನ್​

ಅಷ್ಟಕ್ಕೂ ಸಲ್ಮಾನ್‌ ಖಾನ್‌ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಇವರ ಹೆಸರು ಕೆಲವು ನಟಿಯರ ಜೊತೆ ಕೇಳಿಬಂದಿದ್ದರೂ, ಇವರ ವಿರುದ್ಧ ಗಂಭೀರ ಆರೋಪಗಳು ಇದ್ದರೂ, ಮದುವೆಯಂತೂ ಆಗಿಲ್ಲ ಸಲ್ಲುಭಾಯಿ. ಈ ಬಗ್ಗೆ ಷೋನಲ್ಲಿ ಮಾಹಿತಿ ಕೇಳಿದಾಗ ತಾವು ಏಕೆ ಮದುವೆಯಾಗಿಲ್ಲ ಎನ್ನುವುದನ್ನು ಅವರು ಬಹಿರಂಗಪಡಿಸುವ ಸಮಯದಲ್ಲಿ ರೋಗದ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ವಿವಿಧ ರೋಗಗಳು ಇವೆ. ಇದರ ಜೊತೆಗೆ ನಾನು ನಟನೆ ಮಾಡುವಾಗ ಫ್ರ್ಯಾಕ್ಚರ್ ಆಗುತ್ತದೆ.

1010
ಅಪ್ಪ ಆಗ್ತೇನೆ ಎಂದಿದ್ದ ನಟ

ನರಶೂಲೆ, ಮೆದುಳಿನಲ್ಲಿ ರಕ್ತನಾಳದ ಉರಿಯೂತ, ಎವಿಎಂ ಸಮಸ್ಯೆ ಇದ್ದರೂ ನಾನು ಈಗಲೂ ಕೆಲಸ ಮಾಡುತ್ತಿದ್ದೇನೆ. ಈ ಮಧ್ಯೆ ಪತ್ನಿ ಮೂಡ್ ಹಾಳಾಯಿತು ಎಂದರೆ ವಿಚ್ಛೇದನ ಕೊಟ್ಟು ಅರ್ಧ ಆಸ್ತಿಯನ್ನು ತೆಗೆದುಕೊಂಡು ಹೋಗಿಬಿಡಬಹುದು. ನಾನು ಯುವಕನಾಗಿದ್ದರೆ ಹೆಚ್ಚು ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲವನ್ನೂ ಮತ್ತೆ ಗಳಿಸಬಹುದಿತ್ತು. ಆದರೆ, ಈ ವಯಸ್ಸಲ್ಲಿ ಮತ್ತೆ ಮೊದಲಿನಿಂದ ಆರಂಭಿಸಬೇಕು ಎಂದರೆ ಅದು ಅಸಾಧ್ಯ’ ಎಂದು ತಮಾಷೆಯ ರೂಪದಲ್ಲಿ ಹೇಳಿದ್ದರು. ಆದರೆ ಈಚೆಗಷ್ಟೇ ತಾವು ಶೀಘ್ರದಲ್ಲಿಯೇ ಅಪ್ಪ ಆಗಿಯೇ ಆಗುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಶಾಕ್​ ಕೊಟ್ಟಿದ್ದರು.

Read more Photos on
click me!

Recommended Stories