ಅಂದಹಾಗೆ 90 ದಶಕದಲ್ಲಿ ಸಲ್ಮಾನ್ ಮತ್ತು ಸಂಗೀತಾ ಇಬ್ಬರ ಲವ್ ಸ್ಟೋರಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇಬ್ಬರೂ ಮದುವೆಯಾಗಲಿದ್ದಾರೆ ಅಂತನೆ ಎಲ್ಲರೂ ಅಂದುಕೊಂಡಿದ್ದರು. ಅಷ್ಟೆಯಲ್ಲದೇ ಇಬ್ಬರ ಮದುವೆ ಕಾರ್ಡ್ ಕೂಡ ಪ್ರಿಂಟ್ ಆಗಿತ್ತು ಎನ್ನಲಾಗಿದೆ. ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಮದುವೆ ಮುರಿದು ಬಿತ್ತು ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತೆ.