ಮಹಿಳಾ ಅಭಿಮಾನಿ ಎದೆಯಲ್ಲಿ ಸಲ್ಮಾನ್ ಖಾನ್ ಟ್ಯಾಟೂ; ನೆಟ್ಟಿಗರಿಂದ ಸಖತ್ ಟ್ರೋಲ್

Published : Dec 28, 2022, 03:36 PM IST

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹುಚ್ಚು ಮಹಿಳಾ ಅಭಿಮಾನಿ ಎದೆಯ ಮೇಲೆ ಟ್ಯಾಟ್ ಹಾಕಿಸಿಕೊಂಡಿದ್ದಾರೆ. ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. 

PREV
16
ಮಹಿಳಾ ಅಭಿಮಾನಿ ಎದೆಯಲ್ಲಿ ಸಲ್ಮಾನ್ ಖಾನ್ ಟ್ಯಾಟೂ; ನೆಟ್ಟಿಗರಿಂದ ಸಖತ್ ಟ್ರೋಲ್

ಬಾಲಿವುಡ್ ಸ್ಟಾರ್, ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್ ಸಲ್ಮಾನ್ ಖಾನ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 57ನೇ ವಂತಸಕ್ಕೆ ಕಾಲಿಟ್ಟಿರುವ ನಟ ಸಲ್ಮಾನ್ ಖಾನ್ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಂಡರು. ಸಲ್ಮಾನ್ ಖಾನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಅನೇಕ ಬಾಲಿವುಡ್ ಸ್ಟಾರ್ ಹಾಜರಿದ್ದರು. ಹುಟ್ಟುಹಬ್ಬದ ಹಿಂದಿನ ದಿನ ನಡೆದ ಪಾರ್ಟಿಯಲ್ಲಿ ಅನೇಕರು ಭಾಗಿಯಾಗಿದ್ದರು. 
 

26

ಸಲ್ಮಾನ್ ಖಾನ್ ನೋಡಲು, ವಿಶ್ ಮಾಡಲು ಅವರ ನಿವಾಸದ ಮುಂದೆ ಅಭಿಮಾನಿಗಳ ದಂಡೇ ನೆರದಿತ್ತು. ಮನೆ ಮುಂದೆ ಸೇರಿದ್ದ ಜನರಿಗೆ ದರ್ಶನ ನೀಡಿ ಅವರ ಶುಭಾಶಯ ಸ್ವೀಕರಿಸಿದರು. ಸಲ್ಮಾನ್ ಖಾನ್ ಅವರಿಗೆ ಸಖತ್ ಕ್ರೇಸಿ ಅಭಿಮಾನಿಗಳಿದ್ದಾರೆ. ಅದರಲ್ಲೂ ಸಲ್ಮಾನ್ ಅವರನ್ನು ಹುಚ್ಚರಂತೆ ಪ್ರೀತಿಸುವ, ಇಷ್ಟ ಪಡುವ ಅನೇಕ ಮಹಿಳಾ ಅಭಿಮಾನಿಗಳಿದ್ದಾರೆ. 

36

ಅದರಲ್ಲೂ ಒಬ್ಬರು ಮಹಿಳಾ ಅಭಿಮಾನಿ ಸಲ್ಮಾನ್ ಹುಟ್ಟುಹಬ್ಬದ ದಿನ ಅಚ್ಚರಿ ಮೂಡಿಸಿದರು. ಎದೆಯ ಮೇಲೆ ಸಲ್ಮಾನ್ ಖಾನ್ ಟ್ಯಾಟೂ ಹಾಕಿಸಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಸಲ್ಮಾನ್ ಮಹಿಳಾ ಅಭಿಮಾನಿಯ ಹುಚ್ಚು ಅಭಿಮಾನವನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ತರಹೇವಾರಿ ಕಾಮೆಂಟ್ ಮಾಡಿ ಕಾಲೆಳೆಯುತ್ತಿದ್ದಾರೆ. 

46

ಲೈಮ್‌ಲೈಟ್‌ಗೆ ಬರಲು ಮಾಡುವ ಗಿಮಿಕ್ ಇದು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, 'ನನ್ನ ಪೋಷಕರಾಗಿದ್ದರೆ ನನ್ನನ್ನು ಪುಡಿ ಪುಡಿ ಮಾಡುತ್ತಿದ್ದರು' ಎಂದು ಹೇಳಿದ್ದಾರೆ.  
 

56

ಸಲ್ಮಾನ್ ಖಾನ್ ಅದ್ದೂರಿ ಪಾರ್ಟಿಯಲ್ಲಿ ಅನೇಕ ಬಾಲಿವುಡ್ ಸ್ಟಾರ್ ಭಾಗಿಯಾಗಿದ್ದರು. ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾರಿಯ ಹುಟ್ಟುಹಬ್ಬದ ವಿಶೇಷ ಎಂದರೆ ಸಲ್ಮಾನ್ ಖಾನ್ ಗೆಳೆಯ ಶಾರುಖ್ ಖಾನ್ ಎಂಟ್ರಿ. ಪಾರ್ಟಿಯಲ್ಲಿ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಇಬ್ಬರೂ ತಬ್ಬಿಕೊಂಡು, ಕೈ ಕೈ ಹಿಡಿದು ಕ್ಯಾಮರಾಗೆ ಪೋಸ್ ನೀಡಿದ್ದರು. ಅಭಿಮಾನಿಗಳತ್ತ ಕೈ ಬೀಸಿ ಪ್ರೀತಿ ವ್ಯಕ್ತಪಡಿಸಿದ್ದರು. 

66

ಸಲ್ಮಾನ್ ಖಾನ್ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ಶಾರುಖ್ ಖಾನ್ ಪಠಾಣ್ ಸಿನಿಮಾದಲ್ಲೂ ಒಂದು ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಟೈಗರ್3 ಮುಗಿಸಿರುವ ಸಲ್ಮಾನ್ ಸದ್ಯ ಕಿಸಿ ಕ ಬಾಯ್ ಕಿಸಿ ಕಿ ಜಾನ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.  

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories