16 ವರ್ಷಕ್ಕೆ ಸಿನಿಮಾಕ್ಕೆ ಕಾಲಿಟ್ಟು ಫೇಮಸ್‌ ಆಗಿದ್ದ ರಂಭಾ ಈಗ ಹೇಗಿದ್ದಾರೆ ನೋಡಿ!

Published : Jun 05, 2021, 07:45 PM IST

ಸಲ್ಮಾನ್ ಖಾನ್ ಅವರ ಜುಡ್ವಾ (1997) ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ರಂಭಾ 45ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಜೂನ್ 5, 1976ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದ ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ. 1992ರ ತೆಲುಗು ಚಿತ್ರ ಆ ಒಕ್ಕಿ ಅಡಕ್ಕು ಮೂಲಕ ಅವರು ಸಿನಿಮಾಕ್ಕೆ ಬಂದರು. 17 ಬಾಲಿವುಡ್ ಮತ್ತು 100ಕ್ಕೂ ಹೆಚ್ಚು ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ ರಂಭಾ ಪ್ರಸ್ತುತ ಮಕ್ಕಳನ್ನು ಗ್ಲಾಮರ್ ಪ್ರಪಂಚದಿಂದ ದೂರವಿರಿಸುವಲ್ಲಿ ನಿರತರಾಗಿದ್ದಾರೆ. 

PREV
110
16 ವರ್ಷಕ್ಕೆ ಸಿನಿಮಾಕ್ಕೆ ಕಾಲಿಟ್ಟು  ಫೇಮಸ್‌ ಆಗಿದ್ದ ರಂಭಾ ಈಗ ಹೇಗಿದ್ದಾರೆ ನೋಡಿ!

ಚಿಕ್ಕ ವಯಸ್ಸಿನಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿಯರಲ್ಲಿ ರಂಭಾ ಅವರ ಹೆಸರು ಕೂಡ ಒಂದು. ಅವರು 16 ವರ್ಷದವಳಿದ್ದಾಗ, ಮಲಯಾಳಂ ಚಿತ್ರ 'ಸರ್ಗಂ' ಚಿತ್ರದಲ್ಲಿ ನಟಿಸಿದ್ದರು.

210

1995 ರಲ್ಲಿ 'ಜುಡ್ವಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಪಡೆದರು. ರಂಭಾ ಕೊನೆಯ ಬಾರಿಗೆ 11 ವರ್ಷಗಳ ಹಿಂದೆ 2010 ರ ತಮಿಳು ಚಿತ್ರ ಪೆನ್ ಸಿಂಗಂನಲ್ಲಿ ಕಾಣಿಸಿಕೊಂಡರು. 

310

ಇದರ ನಂತರ, ಸಿನಮಾದಿಂದ ದೂರವಾಗಿ ಕೆನಡಾ ಮೂಲದ ಉದ್ಯಮಿ ಇಂದ್ರನ್ ಪದ್ಮನಾಥನ್ ಅವರನ್ನು ವಿವಾಹವಾದರು. ರಂಭಾ ಕೆನಡಾಕ್ಕೆ ಸ್ಥಳಾಂತರಗೊಂಡರು.

410

2011ರ ಜನವರಿಯಲ್ಲಿ ಹಿರಿಯ ಮಗಳು ಲನ್ಯಾಗೆ ಜನ್ಮ ನೀಡಿದರೆ, ಮಾರ್ಚ್ 2015ರಲ್ಲಿ, ಕಿರಿಯ ಮಗಳು ಸಶಾ ಜನಿಸಿದಳು ಮತ್ತು 23 ಸೆಪ್ಟೆಂಬರ್ 2018 ರಂದು ಮಗನಿಗೆ ಜನ್ಮ ನೀಡಿದರು.

510

ಕೆಲವು ವರ್ಷಗಳ ನಂತರ, ರಂಭಾ ಮತ್ತು ಅವಳ ಪತಿ ನಡುವೆ ಭಿನ್ನಾಭಿಪ್ರಾಯ ಮೂಡಿದ್ದ ವರದಿಗಳು ಬಂದವು, ಈ ಕಾರಣದಿಂದಾಗಿ ಇಬ್ಬರೂ ಬೇರ್ಪಟ್ಟರು. ರಂಭಾಳನ್ನು ಮದುವೆಯಾಗುವ ಮೊದಲೇ ಪತಿ ಮದುವೆಯಾಗಿದ್ದರು ಮತ್ತು ಇದನ್ನು ರಂಭಾರಿಂದ ಮುಚ್ಚಿಟ್ಟರು, ಎನ್ನಲಾಗಿತ್ತು.

610

ಅಷ್ಟೇ ಅಲ್ಲ, ರಂಭಾಗೆ ತುಂಬಾ ಕಿರುಕುಳ ನೀಡಿದ್ದರು. ಹೆಣ್ಣು ಮಕ್ಕಳನ್ನು ಭೇಟಿಯಾಗಲು ಸಹ ಅವಕಾಶ ನೀಡಲಿಲ್ಲ ಎಂಬ ವರದಿಯ ಜೊತೆ 2018 ರಲ್ಲಿ, ರಂಭಾ ಅವರ ಆತ್ಮಹತ್ಯೆಯೂ ಸುದ್ದಿ ಬೆಳಕಿಗೆ ಬಂದಿತು. ವಾಸ್ತವವಾಗಿ, ಪ್ರಜ್ಞಾಹೀನ ಸ್ಥಿತಿಯಲ್ಲಿ ನಟಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ವರದಿಗಳು ಹೇಳಿದ್ದವು.

710

ಅವರು ಎಂದಿಗೂ ಆತ್ಮಹತ್ಯೆಗೆ ಪ್ರಯತ್ನಿಸಲಿಲ್ಲ. ಮನೆಯಲ್ಲಿ ಲಕ್ಷ್ಮಿ ಪೂಜೆಯ ಕಾರಣ ಇಡೀ ದಿನ ಉಪವಾಸ ಮಾಡಿದ್ದರು. ಮರುದಿನ ಸ್ವಲ್ಪ ಉಪಾಹಾರ ಸೇವಿಸಿ ಶೂಟಿಂಗ್‌ಗೆ ಹೋದಾಗ ಪ್ರಜ್ಞಾ ತಪ್ಪಿದ್ದರು. ಹತ್ತಿರದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ನಂತರ ರಂಭಾ ಅವರೇ ಈ ಘಟನೆ ಬಗ್ಗೆ ನಂತರ ಸ್ಪಷ್ಟನೆ ನೀಡಿದರು.
 
810

ಈಗ ರಂಭಾ ತನ್ನ ಫ್ಯಾಮಿಲಿ ಜೊತೆ ಟೊರೊಂಟೊದಲ್ಲಿ ವಾಸಿಸುತ್ತಾರೆ. 2018ರಲ್ಲಿ ಸಲ್ಮಾನ್ ದಬಾಂಗ್ ಸಿನಿಮಾಕ್ಕಾಗಿ ಟೊರೊಂಟೊದಲ್ಲಿದ್ದಾಗ ರಂಭಾ ತನ್ನ ಪತಿ ಮತ್ತು ಮಗಳ ಜೊತೆ ಭೇಟಿಯಾಗಿದ್ದರು. ಆ ಸಮಯದಲ್ಲಿ ಇಬ್ಬರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು.

910

ರಂಭಾ ಅವರು 'ದನ್ವೀರ್', 'ಜಂಗ್', 'ಕಹಾರ್', 'ಟ್ವಿನ್', 'ಸಜ್ನಾ', 'ಘರ್ವಾಲಿ ಬಹರ್ವಾಲಿ', 'ಬಂಧನ್', 'ಮೇನ್ ತೇರೆ ಪ್ಯಾರ್ ಮೇ ಪಾಗಲ್', 'ಕ್ರೋಧ್‌', 'ಡಾಟರ್ ನಂಬರ್ ಒನ್', 'ದಿಲ್ ಹಿ ದಿಲ್ ಮೇ', 'ಪ್ಯಾರ್ ದಿವಾನಾ ಹೋತಾ ಹೈ' ಸೇರಿದಂತೆ ಅನೇಕ ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
 
1010

ಸಲ್ಮಾನ್ ಖಾನ್ ಅವರಲ್ಲದೇ, ರಜನಿಕಾಂತ್, ಗೋವಿಂದ, ಅಕ್ಷಯ್ ಕುಮಾರ್, ಅಜಯ್ ದೇವಗನ್, ಮಿಥುನ್ ಚಕ್ರವರ್ತಿ ಮುಂತಾದ ಸೂಪರ್‌ಸ್ಟಾರ್‌ಗಳ ಜೊತೆಯೂ ಕೆಲಸ ಮಾಡಿದ್ದಾರೆ ರಂಭಾ.

click me!

Recommended Stories