ಸಲ್ಮಾನ್‌ ಖಾನ್‌ ಸಹೋದರಿ ಮದುವೆ ಮುರಿದಿದ್ದರಾ ನಟಿ ಯಾಮಿ ಗೌತಮ್‌?

Suvarna News   | Asianet News
Published : Jun 05, 2021, 07:28 PM ISTUpdated : Jun 05, 2021, 07:34 PM IST

ಬಾಲಿವುಡ್‌ ನಟಿ ಯಾಮಿ ಗೌತಮ್, ನಿರ್ದೇಶಕ ಆದಿತ್ಯ ಧಾರ್ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಯಾಮಿ ತಮ್ಮ ಮದುವೆ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಗೋಹರ್‌ನಲ್ಲಿ ಯಾಮಿಯ ವಿವಾಹ ಬಹಳ ಸರಳವಾಗಿ ನಡೆದಿದೆ. ಕೋವಿಡ್ ಪ್ರೋಟೋಕಾಲ್ ಅಡಿಯಲ್ಲಿ ಕೇವಲ 18 ಜನರು ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು, ಅದರಲ್ಲಿ ಕೇವಲ 5 ಜನರು ಹುಡುಗನ ಕಡೆಯವರು. ಅಂದಹಾಗೆ, ಒಂದು ಕಾಲದಲ್ಲಿ ಯಾಮಿ ಹೆಸರು ನಟ ಪಾಲ್ಕಿತ್ ಸಾಮ್ರಾಟ್ ಅವರೊಂದಿಗೂ ಕೇಳಿ ಬಂದಿತ್ತು  ಇದು ಪುಲ್ಕಿತ್ ಮತ್ತು ಅವರ ಪತ್ನಿ ಶ್ವೇತಾ ರೋಹಿರಾ ನಡುವೆ ವಿಚ್ಛೇದನಕ್ಕೆ ಕಾರಣವಾಯಿತು ಎಂಬ ಆರೋಪಗಳಿವೆ. ಸಂಬಂಧದಲ್ಲಿ ಶ್ವೇತಾ ಸಲ್ಮಾನ್ ಖಾನ್ ಅವರ ರಾಖಿ ಸಹೋದರಿ.

PREV
113
ಸಲ್ಮಾನ್‌ ಖಾನ್‌ ಸಹೋದರಿ ಮದುವೆ ಮುರಿದಿದ್ದರಾ ನಟಿ ಯಾಮಿ ಗೌತಮ್‌?

ಯಾಮಿ ಗುಪ್ತಾ ಮದುವೆಯ ಪೋಟೋವನ್ನು ಶೇರ್‌ ಮಾಡಿಕೊಂಡು  ಕ್ಯಾಪ್ಷನ್‌ನಲ್ಲಿ ಮೊದಲಿಗೆ ಪರ್ಷಿಯನ್ ಕವಿ ರೂಮಿಯ ಸಾಲುಗಳನ್ನು ಬರೆದುಕೊಂಡಿದ್ದಾರೆ. 

213

ಈ ವಿಶೇಷ ಸಂದರ್ಭವನ್ನು ನಾವು ನಮ್ಮ ಆಪ್ತರು ಮತ್ತು ಕುಟುಂಬದೊಂದಿಗೆ ಆಚರಿಸಿದ್ದೇವೆ. ಇಂದು ನಾವು ಸ್ನೇಹ ಮತ್ತು ಪ್ರೀತಿಯ ಹೊಸ ಆರಂಭವನ್ನು ಮಾಡುತ್ತಿದ್ದೇವೆ. ಆದ್ದರಿಂದ ನಿಮ್ಮ ಎಲ್ಲ ಪ್ರೀತಿ ಮತ್ತು ಶುಭಾಶಯಗಳು ಬೇಕಾಗುತ್ತವೆ. ಲವ್‌ - ಯಾಮಿ ಮತ್ತು ಆದಿತ್ಯ ಎಂದು ಬರೆದಿದ್ದಾರೆ.

313

ಮದುವೆಯಲ್ಲಿ ಯಾಮಿ ಡಾರ್ಕ್‌ ರೆಡ್‌ ಸೀರೆಯ ಜೊತೆ ದೊಡ್ಡ ಮಾಂಗ್ ಟಿಕಾ, ಮೂಗುಬೊಟ್ಟು ಮತ್ತು ನೆಕ್ಲೆಸ್‌ ಧರಿಸಿದ್ದರು. ಕೈ ತುಂಬಾ ಬಳೆಗಳನ್ನು ಧರಿಸಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.

413

ಅದೇ ಸಮಯದಲ್ಲಿ,  ಆದಿತ್ಯ ಬಿಳಿ ಶೆರ್ವಾನಿ ಮತ್ತು ಪೇಟದಲ್ಲಿ ಕಂಡುಬಂದರು. ಜೊತೆಗೆ ರೆಡ್‌ ಬಾರ್ಡರ್‌ ಹೊಂದಿರುವ ಬಿಳಿ ದುಪಟ್ಟಾವನ್ನು ಧರಿಸಿದ್ದರು. 
 
513

ದಿಯಾ ಮಿರ್ಜಾ, ಜಾಕ್ವೆಲಿನ್ ಫರ್ನಾಂಡೀಸ್, ನೇಹಾ ಧೂಪಿಯಾ, ಭೂಮಿ ಪೆಡ್ನೇಕರ್, ವಿಕ್ರಾಂತ್ ಮಾಸ್ಸಿ ಮುಂತಾದ ಅನೇಕ ಸೆಲೆಬ್ರೆಟಿಗಳು ದಂಪತಿಯನ್ನು ಅಭಿನಂದಿಸಿದ್ದಾರೆ.

613

ಉರಿ ದಿ ಸರ್ಜಿಕಲ್ ಸ್ಟ್ರೈಕ್ ಆದಿತ್ಯ ಧಾರ್ ಅವರ  ಚೊಚ್ಚಲ ಚಿತ್ರವಾಗಿದ್ದು, ಇದಕ್ಕಾಗಿ ಅವರು ಬೆಸ್ಟ್‌ ಡೈರೆಕ್ಟರ್‌ ನ್ಯಾಷನಲ್‌ ಆವಾರ್ಡ್‌ ಪಡೆದರು. ಆದಿತ್ಯ ಬರಹಗಾರ ಹಾಗೂ ಗೀತರಚನೆಕಾರರೂ ಹೌದು.

713

ಯಾಮಿ ಇನ್ಸ್ಟಾಗ್ರಾಮ್‌ನಲ್ಲಿ ಮೆಹಂದಿ ಸಮಾರಂಭದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ, ಅವರು ಆರೆಂಜ್‌ ಸಲ್ವಾರ್ ಸೂಟ್ ಧರಿಸಿರುತ್ತಾರೆ. 

813

ವಿಕಿ ಡೋನರ್‌ ಚಿತ್ರದೊಂದಿಗೆ ಬಾಲಿವುಡ್ ವೃತ್ತಿ ಜೀವನ ಪ್ರಾರಂಭಿಸಿದ ಯಾಮಿ ಗೌತಮ್, ಅನೇಕ ಪ್ರಸಿದ್ಧ ಟಿವಿ ಶೋ ಮತ್ತು ಜಾಹೀರಾತುಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಬಾದ್ಲಾಪುರ, ಆಕ್ಷನ್ ಜಾಕ್ಸನ್, ಸನಮ್ ರೇ, ಜುನೂನಿಯತ್, ಕಾಬಿಲ್, ಸರ್ಕಾರ್ 3, ಬಟ್ಟಿ ಗುಲ್ ಮೀಟರ್ ಚಾಲು, ಬಾಲಾದಲ್ಲಿ ಕೆಲಸ ಮಾಡಿದ್ದಾರೆ.
 
913

ಹಿಮಾಚಲ ಪ್ರದೇಶದ ಬಿಲಾಸ್ಪುರ್ ಜಿಲ್ಲೆಯವರಾದ ಯಾಮಿ ಗೋಹರ್‌ನಲ್ಲಿ ತಮ್ಮದೇ ಆದ ಮನೆಯನ್ನು ಖರೀದಿಸಿದ್ದು, ಆಗಾಗ ಭೇಟಿಕೊಡುತ್ತಾರೆ. ಯಾಮಿಯ  ತಾಯಿಯ ಅಜ್ಜಿ ಧರ್ಮಶಾಲಾದಲ್ಲಿದ್ದಾರೆ. ಆದರೆ, ಯಾಮಿಯ ಕುಟುಂಬ ಚಂಡೀಗಡದಲ್ಲಿ ನೆಲೆಸಿದೆ.
 
1013

ಯಾಮಿ ಗೌತಮ್ ಮತ್ತು ನಟ ಪುಲ್ಕಿತ್ ಸಾಮ್ರಾಟ್ ಅವರ ಕ್ಲೋಸ್ನೆಸ್‌ ಒಂದು ಕಾಲದಲ್ಲಿ ಬಿ ಟೌನ್‌ನ ಚರ್ಚೆಯ ವಿಷಯವಾಗಿತ್ತು. ಪುಲ್ಕಿತ್ ಅವರು 2014 ರ ನವೆಂಬರ್‌ನಲ್ಲಿ ಶ್ವೇತಾ ಅವರನ್ನು ವಿವಾಹವಾದರು ಈ ಮಧ್ಯೆ, ಅವಳು ಗರ್ಭಿಣಿಯಾಗಿದ್ದಲ್ಲದೇ ಗರ್ಭಪಾತವೂ ಆಗಿತ್ತು.

1113

ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದಾಗ, ಪುಲ್ಕಿತ್ ತನ್ನ ಹೆಂಡತಿಯನ್ನು ನೋಡಿಕೊಳ್ಳುವ ಬದಲು ಯಾಮಿ ಗೌತಮ್‌ ಜೊತೆ ಕಾಲ ಕಳೆಯುತ್ತಿದ್ದರು. ಈ ಕಾರಣಕ್ಕೆ ದಂಪತಿಗಳ ನಡುವೆ ಶುರವಾದ ಜಗಳ ಅಂತಿಮವಾಗಿ ಮದುವೆಯಾದ 11 ತಿಂಗಳೊಳಗೆ ವಿಚ್ಛೇದನಕ್ಕೆ ತಲುಪಿತು.

1213

'ಸನಮ್ ರೇ' ಮತ್ತು 'ಜುನೂನಿಯತ್' ಚಿತ್ರಗಳ ಸಮಯದಲ್ಲಿ ಹತ್ತಿರವಾದ ಪುಲ್ಕಿತ್-ಯಾಮಿ ದೀರ್ಘ ಕಾಲದವರೆಗೆ ಡೇಟಿಂಗ್ ನಡೆಸಿ, ಬೇರೆಯಾದರು.
 
1313

'ಯಾಮಿ ನನ್ನ ಮದುವೆ ಮುರಿದರು. ಅಂತಿಮವಾಗಿ ನನ್ನ ಭ್ರಮೆಯಿಂದ ಹೊರಬಂದಿದ್ದೇನೆ. ಒಬ್ಬ ವ್ಯಕ್ತಿಯ ಮಧ್ಯ ಬರುವವರೆಗೂ ನಮ್ಮ ನಡುವೆ ಎಲ್ಲವೂ ಚೆನ್ನಾಗಿತ್ತು,' ಎಂದು ಸಂದರ್ಶನವೊಂದರಲ್ಲಿ ಶ್ವೇತಾ ರೋಹಿರಾ ಹೇಳಿದ್ದರು.

click me!

Recommended Stories