ಸಲ್ಮಾನ್‌ಗೆ ಮಗಳನ್ನು ಕೊಡಲು ನಿರಾಕರಿಸಿದ ಜೂಹಿ ಚಾವ್ಲಾ ತಂದೆ
First Published | May 23, 2020, 7:53 PM ISTಬಾಲಿವುಡ್‌ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಎಷ್ಟೋ ಜನಪ್ರಿಯ ಅವರ ಅಫೇರ್‌ಗಳು ಅಷ್ಟೇ ಫೇಮಸ್. ಹಲವು ವರ್ಷಗಳಿಂದ ಹಿಂದಿ ಸಿನಿಮಾರಂಗದಲ್ಲಿ ತಮ್ಮ ನಟನೆಯಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ಸಲ್ಲುಬಾಯ್ ಸಾಕಷ್ಟು ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡುತ್ತಲೇ ಬಂದಿದ್ದಾರೆ. ಹಲವು ನಟಿಯರ ಜೊತೆ ಡೇಟಿಂಗ್ ನೆಡೆಸಿದರೂ ಇನ್ನೂ ಬ್ರಹ್ಮಚಾರಿಯಾಗೇ ಉಳಿದಿದ್ದಾರೆ ಸಲ್ಮಾನ್ ಖಾನ್. ಸಂಗೀತಾ ಬಿಜ್ಲಾನಿಯಿಂದ ಹಿಡಿದು ಸೋಮಿ ಅಲಿ, ಐಶ್ವರ್ಯಾ ರೈ , ಕತ್ರೀನಾ ಕೈಫ್ ಜೊತೆಯ ಸಲ್ಮಾನ್‌ರ ಅಫೇರ್ ಎಲ್ಲರಿಗೂ ತಿಳಿದಿರುವ ವಿಷಯವೆ. ಆದರೆ ಬಾಡ್‌ಬಾಯ್ ಸಲ್ಮಾನ್ ನಟಿ ಜೂಹಿ ಚಾವ್ಲಾರನ್ನು ಮದುವೆಯಾಗಲು ಬಯಸಿದ್ದರಂತೆ ಈ ವಿಷಯ ಇದೀಗ ವೈರಲ್ ಆಗಿದೆ.