ಕಾಯಿಲೆ, ಯಾತನೆ ಬಗ್ಗೆ ಬಾಯಿ ಬಿಟ್ಟ ಸುಶ್ಮಿತಾ ಸೇನ್‌!

First Published May 22, 2020, 7:51 PM IST

ಭಾರತಕ್ಕೆ ಮೊದಲ ಮಿಸ್‌ ಯುನಿವರ್ಸ್‌ ಕೀರಿಟ ದೊರಕಿಸಿಕೊಟ್ಟ ಕೀರ್ತಿ ಸುಶ್ಮಿತಾ ಸೇನ್‌ಳದ್ದು.  26 ವರ್ಷಗಳ ಹಿಂದೆ ಮೇ 22ರಂದೇ ಸುಶ್ಮಿತಾ ಮಿಸ್‌ ಯೂನಿವರ್ಸ್‌ ಆಗಿ ಜಯಗಳಿಸಿದ್ದರು. 44 ವರ್ಷದವಾದರೂ  ಬೆಂಗಾಳಿ ಚೆಲುವೆಯ ಜನಪ್ರಿಯತೆ ಕಡಿಮೆಯಾಗಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್ ಇರುವ ಸುಶ್ಮಿತಾ ತಮ್ಮಗಿದ್ದ ಗಂಭೀರ  ಕಾಯಿಲೆ ರಹಸ್ಯ  ಬಿಚ್ಚಿಟ್ಟಿದ್ದಾರೆ. 4 ವರ್ಷಗಳ ಕಾಲ ಮಾಜಿ ವಿಶ್ವ ಸುಂದರಿ ಈ ರೋಗದಿಂದ ಬಳಲುತ್ತಿದ್ದು ಈಗ ಗುಣವಾಗಿದ್ದಾರೆ.

ಮಾಜಿ ಮಿಸ್‌ ಯುನಿವರ್ಸ್‌ ಸುಶ್ಮಿತಾ ಸೇನ್‌ ತನ್ನ ಕಾಯಿಲೆಯ ರಹಸ್ಯವನ್ನು ಬಿಚ್ಚಿಡುವ ವಿಡಿಯೋ ಶೇರ್‌ ಮಾಡಿದ್ದಾರೆ.
undefined
ವಿಡಿಯೋ ಜೊತೆ ಕಾಯಿಲೆಯ ವಿರುದ್ಧ ಅವರ ಹೋರಾಟದ ಬಗ್ಗೆ ಸಹ ಪೋಸ್ಟ್‌ ಮಾಡಿದ್ದಾರೆ ಸುಶ್ಮಿತಾ.
undefined
ತನಗೆ ಅಡಿಸನ್ ಎಂಬ ಕಾಯಿಲೆ ಇದೆ ಎಂದು ಬಹಿರಂಗಪಡಿಸಿದ್ದು ಸ್ಟ್ರಾಂಗ್‌ ವಿಲ್‌ ಪವರ್‌ ಮತ್ತು ನಾನ್ಚಕ್ ವರ್ಕೌಟ್‌ಗಳಿಂದ ಸೋಲಿಸಿದೆ ಎಂದಿದ್ದಾರೆ ಮಾಜಿ ಮಿಸ್‌ ಯೂನಿವರ್ಸ್‌ ಸುಷ್ಮಿತಾ. ನಾನಾಚಕ್ ಮಾರ್ಷಲ್‌ ಆರ್ಟ್‌ ಆಯುಧವಾಗಿದ್ದು, ಇದನ್ನು ಸಾಂಪ್ರದಾಯಿಕವಾಗಿ ಓಕಿನಾವಾನ್ ಶೈಲಿಯಲ್ಲಿ ಬಳಸಲಾಗುತ್ತದೆ. ಇದು ಸಣ್ಣ ಸರಪಳಿ ಅಥವಾ ಹಗ್ಗದಿಂದ ಸಂಪರ್ಕ ಹೊಂದಿರುವ ಎರಡು ತುಂಡುಗಳನ್ನು ಹೊಂದಿರುತ್ತದೆ.
undefined
ಜಿಮ್‌ನಲ್ಲಿ ನಾನ್ಚಕ್‌ ಹಿಡಿದು ವರ್ಕೌಟ್‌ ಮಾಡುತ್ತಿರುವ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ ಸುಶ್ಮಿತಾ. ವೀಡಿಯೊದೊಂದಿಗಿನ ಪೋಸ್ಟ್‌ನಲ್ಲಿ ತಮ್ಮಗಿರುವ ಅಡಿಸನ್ ಕಾಯಿಲೆಯ ಬಗ್ಗೆ ಹಾಗೂ ಕಾಯಿಲೆಯಿಂದಾಗಿ ರೋಗ ನಿರೋಧಕ ಶಕ್ತಿ ತುಂಬಾ ದುರ್ಬಲಗೊಂಡಿದೆ ಎಂದು ಬರೆದ್ದಿದಾರೆ.
undefined
'ಸೆಪ್ಟೆಂಬರ್ 2014 ರಲ್ಲಿ, ದೇಹದ ಇಮ್ಯೂನ್‌ ಸಿಸ್ಟಮ್‌ ಹದಗೆಡಲು ಕಾರಣವಾಗುವ ಅಡಿಸನ್ ಕಾಯಿಲೆಯ ಬಗ್ಗೆ ತಿಳಿಯಿತು. ನನ್ನೊಳಗೆ ಯಾವುದೇ ಹೋರಾಟ ಉಳಿದಿಲ್ಲ ಎಂದು ನನಗೆ ಅನಿಸಿತು ... ತುಂಬಾ ಹತಾಶೆಯಿಂದ ತುಂಬಿದ ದೇಹ ದಣಿದಿತ್ತು. ನನ್ನ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್‌ ಕಾಣಿಸಿಕೊಂಡಿತ್ತು. ನಾನು ಈ ರೋಗದ ಜೊತೆ 4 ವರ್ಷಗಳ ಕಾಲ ಹೇಗೆ ಹೋರಾಡಿದೆ ಎಂದು ಆ ಕ್ಷಣಗಳನ್ನು ಹೇಳಲಾಗುವುದಿಲ್ಲ' - ಸುಶ್ಮಿತಾ ಸೇನ್‌
undefined
'ಈ ಕಾಯಿಲೆಯ ದುಷ್ಪರಿಣಾಮಗಳನ್ನು ನಾನು 4 ವರ್ಷಗಳ ಕಾಲ ತುಂಬಾ ಕಷ್ಟದಿಂದ ಸಹಿಸಿಕೊಂಡೆ. ತುಂಬಾ ಕಷ್ಟಗಳ ನಂತರ ನಾನು ನನ್ನ ಮನಸ್ಸನ್ನು ಬಲಪಡಿಸಿದೆ ಮತ್ತು ಅದಕ್ಕಾಗಿ ನನ್ನ ದೇಹವನ್ನು ಸಿದ್ಧಪಡಿಸಿದೆ'
undefined
ನಾನು ನಾನ್ಚಕ್ ಮೇಲೆ ಕೇಂದ್ರೀಕರಿಸಿದೆ. ನಾನು ಈ ರೋಗದ ವಿರುದ್ಧ ಹೋರಾಡಿದೆ ಮತ್ತು ನಂತರ ನೋವು ನನಗೆ ಒಂದು ಕಲೆಯಾಯಿತು. ನಾನು ಸಮಯವಿರುವಂತೆ ಚೇತರಿಸಿಕೊಂಡೆ, 2019 ರ ಹೊತ್ತಿಗೆ ನನ್ನ ಮೂತ್ರಜನಕಾಂಗದ ಗ್ರಂಥಿ ಸಕ್ರಿಯವಾಯಿತು ಮತ್ತು ಈಗ ರೋಗನಿರೋಧಕ ಸಮಸ್ಯೆಯಿಲ್ಲ' ಎಂದು ಪೋಸ್ಟ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ನಟಿ.
undefined
ಅವರು ತಮ್ಮ ಪೋಸ್ಟ್‌ ಮೂಲಕ ಜನರಿಗೆ ಧೈರ್ಯ ನೀಡುತ್ತಾ ಹೀಗೆ ಬರೆಯುತ್ತಾರೆ- 'ನಿಮ್ಮ ದೇಹವು ನಿಮಗಿಂತ ಹೆಚ್ಚು ಯಾರಿಗೂ ತಿಳಿದಿಲ್ಲ. ನಾವೆಲ್ಲರೂ ಯೋಧರು ಮತ್ತು ಸೋಲನ್ನು ಒಪ್ಪುವುದ್ದಿಲ್ಲ'
undefined
click me!