ಮಲಯಾಳಂನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಸೂರಜ್, ತಮಿಳಿನಲ್ಲಿ ವೀರ ಧೀರ ಸೂರನ್ ಸಿನಿಮಾ ಮೂಲಕ ಪರಿಚಯವಾಗುತ್ತಿದ್ದಾರೆ. ಇದರ ಆಡಿಯೋ ಲಾಂಚ್‌ನಲ್ಲಿ ಒಂದು ಇಂಟರೆಸ್ಟಿಂಗ್ ವಿಷಯವನ್ನು ಸೂರಜ್ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಅವರಿಗೆ ಮೊದಲ ಮಗು ಹುಟ್ಟಿದಾಗ, ಮೊದಲ ಬಾರಿಗೆ ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಸಿಕ್ಕಿತಂತೆ. ನಂತರ ಎರಡನೇ ಮಗು ಹುಟ್ಟಿದಾಗ ಅವರಿಗೆ ಎರಡನೇ ಬಾರಿಗೆ ಅತ್ಯುತ್ತಮ ನಟ ಕೇರಳ ರಾಜ್ಯ ಸರ್ಕಾರದ ಪ್ರಶಸ್ತಿ ಸಿಕ್ಕಿದೆ.